

ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿರುವುದರ ಪ್ರಮಾಣ ಕಡಿಮೆಯಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಸಕಾರಾತ್ಮಕ ಲಕ್ಷಣಗಳು ಗೋಚರಿಸುತ್ತಿವೆ.

ಯುಗಾದಿಯಿಂದ ಪ್ರಾರಂಭಿಸಿ ಈವರೆಗೆ ಅನೇಕ ಹಬ್ಬಗಳ ಮೇಲೆ ಕವಿದಿದ್ದ ಕರೋನಾ ಕಾರ್ಮೋಡ ನಿಧಾನವಾಗಿ ಸರಿಯುತ್ತಿರುವ ಅನುಭವ ಆಗುತ್ತಿದೆ. ಹಬ್ಬಗಳ ನೆಪದಲ್ಲಿ ಬಹುಸಂಖ್ಯಾತರ ದುಡಿಮೆ ಕಸಿಯುವ ವೈದಿಕತೆಯ ಹುನ್ನಾರದ ಬಲಿಪಶುಗಳಾದ ಸಾಮಾನ್ಯ ಜನವರ್ಗ ಕರೋನಾ ಕಾರಣದಿಂದ ಕಳೆದ ಏಳೆಂಟು ತಿಂಗಳಿಂದ ನಡೆದ ಅನೇಕಹಬ್ಬ-ಉತ್ಸವಗಳನ್ನು ಸರಳವಾಗಿ ಆಚರಿಸಿದ್ದರು. ಆದರೆ ದೀಪಾವಳಿ ಈ ಹಿಂದಿನ ಇತರ ಹಬ್ಬಗಳಂತೆ ಸಪ್ಪೆಯಾಗಿಲ್ಲ. ಜನರು ದೀಪಾವಳಿ ಖರೀದಿ ಹೆಚ್ಚಿಸಿರುವುದರಿಂದ ರಾಜ್ಯದ ಜಿಲ್ಲೆ, ತಾಲೂಕುಗಳಲ್ಲಿ ಹಬ್ಬದ ಸಂತೆ ನಡೆದು ಹಣ್ಣು-ಹೂವು ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಹಣದುಬ್ಬರ, ನಿರಂತರ ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲಾಗದ ಆಡಳಿತ, ದೇಶದ ಚುಕ್ಕಾಣಿ ಹಿಡಿದ ಮೋದಿ ಸೈನಿಕರು,ದೇಶಪ್ರೇಮ, ರಾಷ್ಟ್ರೀಯತೆಗಳ ಅವರ ಲಾಗಾಯ್ತಿನ ಸುಳ್ಳು-ಕಪಟ ನಾಟಕಗಳಿಂದ ದೇಶದ ಜನರ ಗಮನ ಸೆಳೆದು ತಮ್ಮ ಅಸಮರ್ಥತೆ ಪ್ರದರ್ಶಿಸುತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. https://www.youtube.com/watch?v=RPOyo5WE16k&t=90s
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿರುವುದರ ಪ್ರಮಾಣ ಕಡಿಮೆಯಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ಸಕಾರಾತ್ಮಕ ಲಕ್ಷಣಗಳು ಗೋಚರಿಸುತ್ತಿದೆ.
ಸೆ.27 ರಂದು ಅತ್ಯಂತ ಹೆಚ್ಚು ಅಂದರೆ ಪಾಸಿಟಿವಿಟಿ ರೇಟ್ ಶೇ.12.54 ರಷ್ಟಿತ್ತು. ನವೆಂಬರ್ 5 ರ ವೇಳೆಗೆ ಇದು ಶೇ.9.98 ರಷ್ಟಕ್ಕೆ ಇಳಿಕೆಯಾಗಿದ್ದು, ಶುಕ್ರವಾರ ನ.13 ರ ವೇಳೆಗೆ ಶೇ.9.24 ರಷ್ಟಕ್ಕೆ ಇಳಿಕೆಯಾಗಿದೆ ಎಂದು ರಾಜ್ಯ ಕೋವಿಡ್-19 ವಾರ್ ರೂಮ್ ದತ್ತಾಂಶದ ಮೂಲಕ ತಿಳಿದುಬಂದಿದೆ.
ಜುಲೈ ನಲ್ಲಿ ಶೇ.3.32 ರಷ್ಟಿದ್ದ ಪಾಸಿಟಿವಿಟಿ ರೇಟ್ ಸೆಪ್ಟೆಂಬರ್ ವೇಳೆಗೆ ಶೇ.12.54ಕ್ಕೆ ಏರಿಕೆಯಾಗಿತ್ತು. ಈ ಅವಧಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತಿತ್ತು.
ಅ.1 ರಂದು ಪಾಸಿಟಿವಿಟಿ ರೇಟ್ ಶೇ.12.24 ರಷ್ಟಿದ್ದು, ಅ.15 ರ ವೇಳೆಗೆ ಶೇ.11.70 ಕ್ಕೆ ಇಳಿಕೆಯಾಗಿತ್ತು. ಅಕ್ಟೋಬರ್ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.10.41 ರಷ್ಟಾಗಿ ನವೆಂಬರ್ ಗೆ ಶೇ.10.32 ರಷ್ಟು ದಾಖಲಾಗುವ ಮೂಲಕ ಇಳಿಕೆಯಾಗಿತ್ತು.
ಇನ್ನು ಮರಣ ಪ್ರಮಾಣವೂ ಕಡಿಮೆಯಾಗಿದ್ದು, ಶೇ.1.33 ರಷ್ಟಿದೆ. ಶುಕ್ರವಾರದಂದು ದಾಖಲಾದ ಅಂಕಿ-ಅಂಶಗಳ ಪ್ರಕಾರ ಚೇತರಿಕೆ ಪ್ರಮಾಣವೂ ಶೇ.95.39 ರಷ್ಟಿದೆ. ವಾರ್ ರೂಮ್ ನಿಂದ ಬಂದಿರುವ ಮಾಹಿತಿಯ ಪ್ರಕಾರ ಕಳೆದ 15 ದಿನಗಳಲ್ಲಿ ಮರಣದ ಪ್ರಮಾಣ ಶೇ.1 ಕ್ಕೆ ಇಳಿಕೆಯಾಗಿದ್ದು, ಕೋವಿಡ್-19 ನಿಯಂತ್ರಣದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ. (kpc)



