ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿತಂತು

ಮಳೆನಿಂತು ಹೋದ ಮೇಲೆ ಭಾಗ-05
ನೀರು ಇಳಿದಂತೆ ರಸ್ತೆ ಮೇಲೆ ಬಂತು! ಮಳೆನೀರಲ್ಲಿ ಸೇತುವೆ ಮುಳುಗಿ ಹಾನಿಆಯ್ತು
ಮಳೆ ಪ್ರವಾಹ, ಗಾಳಿ ಮಾಡಿರುವ ಅನಾಹುತದ ಮೊತ್ತ ಈಗಲೂ ನಿಖರವಾಗಿ ಸಿಗುತ್ತಿಲ್ಲ. ಸಿದ್ಧಾಪುರದ ಕಲ್ಯಾಣಪುರದ ಧರೆ ಕುಸಿತದಿಂದ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದ ಕುಟುಂಬಗಳು ತಮ್ಮ ಊರು, ಮನೆಗೆ ಮರಳಿವೆ. ಅವರ ಭತ್ತದ ಗದ್ದೆಗಳನ್ನು ಮುಳುಗಿಸಿದ್ದ ನೆಗಸು ಮಾಯವಾಗಿ ಈಗ ಭತ್ತದ ಗದ್ದೆಗಳು ಕೆಸರಿನಿಂದ ತುಂಬಿಕೊಂಡಿವೆ.
ಈ ಕಲ್ಯಾಣಪುರಕ್ಕೆ ಗೋಳಗೋಡು ಅಕ್ಕುಂಜಿ ಮಾರ್ಗವಾಗಿ ತೆರಳಲು ಬಳಸಬಹುದಾದ ರಸ್ತೆ ನಾಲ್ಕೈದು ದಿನ ಮುಳುಗಿ ಹೋಗಿದ್ದು ಈಗ ರಸ್ತೆಯಂತೆ ಕಾಣತೊಡಗಿದೆ. ಕಪ್ಪು ಬಂಗಾರ ಎಂದು ಕರೆಯುವ ಕಾಳುಮೆಣಸು ಬೆಳೆ ಸಿದ್ಧಾಪುರ ತಾಲೂಕಿನಲ್ಲಿ 80% ಹೆಚ್ಚು ಹಾನಿಯಾಗಿದೆ.
ಈ ಪ್ರಮಾಣ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲೂ ಇದಕ್ಕಿಂತ ಕಡಿಮೆ ಎನ್ನುವಂತಿಲ್ಲ. ಬಾಳೆ47%ಅಡಿಕೆ 50% ಶುಂಠಿ 80% ನಾಶವಾಗಿದೆ. ಈ ಅತಿವೃಷ್ಟಿ ಹಾನಿ ಬಗ್ಗೆ ಪರಿಹಾರಕ್ಕಾಗಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 35% ಮೀರಿಲ್ಲ. ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಆಯ್. ನಾಯ್ಕ ವಾಜಗೋಡು ಪಂಚಾಯತ್ ಸೇರಿದಂತೆ ತಾಲೂಕಿನಾದ್ಯಂತ 80% ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ, ಕೃಷಿಭೂಮಿ ನಾಶವಾಗಿದೆ. ಈ ಬಗ್ಗೆ ಸಮೀಕ್ಷೆಗಳೂ ಸರಿಯಾಗಿ ನಡೆದಿಲ್ಲ. ತಾಲೂಕಿನ ರೈತರ ಸಂಪೂರ್ಣ ಯಾದಿ ಕಂದಾಯ ಇಲಾಖೆ ಯಲ್ಲಿ ಇರುವುದರಿಂದ ಸಾಮೂಹಿಕವಾಗಿ ಪರಿಹಾರ ವಿತರಿಸಬೇಕು. ಇದಕ್ಕಾಗಿ ಮತ್ತೆ ಅರ್ಜಿ ಪಡೆಯುವ ಅಗತ್ಯವಿಲ್ಲ ಎಂದರು.
ಬೆಳೆವಿಮೆ ಮಾನದಂಡಗಳೇ ತಿಳಿಯುತ್ತಿಲ್ಲ. ಮಳೆ,ಬೆಳೆಹಾನಿ ಆಗುತ್ತಿರುವ ಬಹುತೇಕ ಪಂಚಾಯತ್ ವ್ಯಾಪ್ತಿಯಲ್ಲಿ ಸೂಕ್ತ ವಿಮೆ ಸಿಗದೆ ಕೆಲವೆಡೆ ಮಾತ್ರ ಹೆಚ್ಚು ಬೆಳೆವಿಮೆ ಸಿಗುತ್ತಿರುವ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದರು.
ವಾಜಗೋಡು, ದೊಡ್ಮನೆ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ಬೆಳೆ ಹಾನಿ, ಕೃಷಿಭೂಮಿ ನಾಶಗಳ ಜೊತೆಗೆ ಸಾರ್ವಜನಿಕ ಸ್ವತ್ತುಗಳಾದ ಸೇತುವೆ, ಸೇತುವೆಯ ಮೇಲ್ಭಾಗದ ರಕ್ಷಣಾ ಬೇಲಿ ಮುರಿದು ಹೋಗಿವೆ. ಆ ಬಗ್ಗೆ ಸಮೀಕ್ಷೆ ನಡೆಯಬೇಕು ಎಂದು ಆಭಾಗದ ಮುಖಂಡರಾದ ಡಿ.ಜಿ.ಹೆಗಡೆ, ಕೃಷ್ಣಮೂರ್ತಿ ಐಸೂರು, ಆಯ್.ಕೆ.ನಾಯ್ಕ ಸುಂಗೋಳಿಮನೆ ಆಗ್ರಹಿಸಿದರು.
ತಾಲೂಕಿನಲ್ಲಿ ಕೆಲವೆಡೆ ನಾಟಿ ಮಾಡಿದ ಭತ್ತದ ಸಸಿ ತೇಲಿ ಹೋಗಿದೆ. ಕೆಲವರಿಗೆ ನಾಟಿ ಮಾಡಲು ಸಮಯ, ಅನುಕೂಲವೇ ಸಿಗಲಿಲ್ಲ. ಕೆಲವೆಡೆ ಮಾತ್ರ ಹೆಚ್ಚಿನ ನೀರಿನಿಂದ ಬೆಳೆಗೆ ಅನುಕೂಲವಾಗಿರುವ ಉದಾಹರಣೆಗಳೂ ಇವೆ.

ಬೆಳೆಹಾನಿಗೆ ಅರ್ಜಿನೀಡಲು ಗಡುವು ಮುಕ್ತಾಯ, ಸಮಯಾವಕಾಶಕ್ಕೆ ಜನಪ್ರತಿನಿಧಿಗಳು,ಮುಖಂಡರಆಗ್ರಹ
ಸಿದ್ಧಾಪುರ ತಾಲೂಕಿನ ಅತಿವೃಷ್ಟಿ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು,ಅತಿವೃಷ್ಟಿ ಹಾನಿ ಬಗ್ಗೆ ರೈತರು ಅರ್ಜಿ ಸಲ್ಲಿಸಲು ನೀಡಿದ ಗಡುವು ಇಂದಿಗೆ ಮುಕ್ತಾಯವಾಗಿದೆ. ಈ ನಿಗದಿತ ಅವಧಿಯಲ್ಲಿ 11640 ತೋಟಗಾರರಲ್ಲಿ 3658ಜನ ಅಡಿಕೆ ಬೆಳೆಗಾರರು ಈ ವರೆಗೆ ಅತಿವೃಷ್ಷಿ ಹಾನಿಯ ಅರ್ಜಿ ಸಲ್ಲಿಸಿದ್ದಾರೆ.
ತಾಲೂಕಿನ ಒಟ್ಟೂ 14700 ಕೃಷಿಕರಲ್ಲಿ 500 ಜನ ಭತ್ತಬೆಳೆಗಾರರು ಅರ್ಜಿ ನೀಡಿದ್ದು ಒಟ್ಟೂ ಅಂದಾಜು 4200 ಕ್ಕಿಂತ ಕಡಿಮೆ ರೈತರು ಅತಿವೃಷ್ಟಿಹಾನಿಗೆ ಅರ್ಜಿ ನೀಡಿದಂತಾಗಿದೆ.
ಈ ಅತಿವೃಷ್ಟಿ ಹಾನಿ ಅರ್ಜಿ ಸಲ್ಲಿಕೆಗೆ ಕಡಿಮೆ ಅವಧಿಯ ಸಮಯಾವಕಾಶ ನೀಡಿದ್ದು ಈ ಅವಧಿಯಲ್ಲಿ ಮಾಹಿತಿ ತಲುಪದೇ ಸಂವಹನ ಕೊರತೆಯಿಂದ ಅರ್ಜಿ ಸಲ್ಲಿಸಲು ಬಹುತೇಕರಿಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಮಧ್ಯೆ ಕಾಂವಚೂರು ಮತ್ತು ವಾಜಗೋಡು ಪಂಚಾಯತ್, ಸೇವಾಸಹಕಾರಿ ಸಂಘಗಳ ವ್ಯಾಪ್ತಿಯ ರೈತ ಮುಖಂಡರು ಮತ್ತು ಜನಪ್ರತಿನಿಧಿಗಳು ಈ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಶಾಸಕರು, ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ವರೆಗೆ ಅವಧಿ ವಿಸ್ತರಣೆಯ ಬೇಡಿಕೆ ಹೋಗಿದ್ದು ಸೋಮುವಾರದ ವರೆಗೆ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಿ ಅರ್ಜಿ ಸ್ವೀಕರಿಸಬೇಕೆಂಬ ಒತ್ತಾಯ ಬಂದರೂ ತಾಂತ್ರಿಕ ಕಾರಣಗಳಿಂದ ಅರ್ಜಿ ಪಡೆಯುವ ಅವಧಿಯನ್ನು ಇಂದಿಗೆ ಮುಕ್ತಾಯಗೊಳಿಸಿದ್ದು. ಅಡಿಕೆ ತೋಟಗಳ ಕೊಳೆಹಾನಿ ಬಗ್ಗೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ತಾಲೂಕಿನಲ್ಲಿ ಮಳೆ,ಪ್ರವಾಹ, ನೀರು ನಿಂತ ತೊಂದರೆ ಇದ್ದರೂ ಅಲ್ಫಪ್ರಮಾಣದ ಅರ್ಜಿ ಸಲ್ಲಿಕೆ ಆಗಿರುವ ಹಿಂದೆ ಕೆಲವು ಅಧಿಕಾರಿಗಳು ಭತ್ತದ ಗದ್ದೆ ಹಾನಿ ಅರ್ಜಿ ತಿರಸ್ಕರಿಸಿದ್ದೂ ಕಾರಣ ಎನ್ನಲಾಗಿದೆ. ಈ ಮಧ್ಯೆ ತಾಲೂಕಿನಲ್ಲಿ ಅತಿವೃಷ್ಟಿ ಹಾನಿ ವ್ಯಾಪಕವಾಗಿರುವುದರಿಂದ ಅರ್ಜಿ ಪಡೆಯದೆ ಸಾಮೂಹಿಕವಾಗಿ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು ಎನ್ನುವ ಬೇಡಿಕೆಯೂ ವ್ಯಕ್ತವಾಗಿದೆ.ಇಂದು ನಿನ್ನೆ ತೋಟಗಾರಿಕೆ, ಕೃಷಿ ಇಲಾಖೆಗಳ ಸಿಬ್ಬಂದಿಗಳು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಅಹೋರಾತ್ರಿ ಅರ್ಜಿ ಪ್ರಕ್ರಿಯೆ ಕೆಲಸ ಮಾಡಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *