

ಅದೆಷ್ಟೋ ದಿನಗಳಾಗಿತ್ತು ಆ ಸಿನೆಮಾ ನೋಡಬೇಕೆಂದು ಬಯಸಿ,
ವಾಸ್ತವದಲ್ಲಿ ಅದು ಜೇಕಬ್ ವರ್ಗೀಸ್ ರ ಮೂವಿ ಎನ್ನುವ ಅರಿವು ನನಗಿರಲಿಲ್ಲ. ಆ ಸಿನೆಮಾದ ಅತ್ತಾವರರ ಹಾಡು ನನ್ನಂಥ ಅನೇಕರನ್ನು ಸೆಳೆದಿತ್ತು. ಮರಳಿ ಮರೆಯಾದೆ……. ತೆರಳಿ ತೆರೆಯಾದೆ….. ಎನ್ನುವ ಮಧುರ ಹಾಡನ್ನು ಕೇಳಿ ಸಂಬ್ರಮಿಸದವರ್ಯಾರಾದರೂ ಇದ್ದರೆ ಅದು ಅವರ ದೋಷವಷ್ಟೆ.
ಇಂಥ ಚಲನಚಿತ್ರವನ್ನು ನನ್ನ ಈಗಿನ ಕಛೇರಿಯ ಮೊಟ್ಟ ಮೊದಲ ಸಿನೇಮಾವಾಗಿ ನೋಡಿದೆ, ನಿರೀಕ್ಷೆ ಹುಸಿಯಾಗಲಿಲ್ಲ. ಆ ಸಿನೆಮಾದ ಹೆಸರು ಸವಾರಿ, 2009 ರಲ್ಲಿ ಕನ್ನಡ,ತೆಲುಗು ಎರಡು ಅವತರಣಿಕೆಗಳಲ್ಲಿ ತೆರೆಗೆ ಬಂದ ಈ ಸಿನೆಮಾದ ನಿರ್ಮಾಪಕರು ಲಾಗಾಯ್ತಿನ ಸದಭಿರುಚಿಯ ನಿರ್ಧೇಶಕ ರಾಮೋಜಿ ರಾವ್.
ಶ್ರೀಮಂತ ಉದ್ಯಮಿಯ ಮಗ ಪ್ರೀತಿ (ಪ್ರಿಯತಮೆ ಡಾ. ಜಾನಕಿ) ಯನ್ನು ಹುಡುಕಿ ಬೆಂಗಳೂರು ಬಿಡುವ ನಾಯಕ, ಮಾರ್ಗಮಧ್ಯೆ ಬೈಕ್ ಕಳ್ಳನ ಸ್ನೇಹ ಮಾಡಿ, ಶಿವಮೊಗ್ಗ, ಭದ್ರಾವತಿ, ಹಾಸನ ಸಕಲೇಶ್ ಪುರಗಳನ್ನು ಸುತ್ತಾಡಿ ಮೂಡಗೆರೆಗೆ ಹೋಗುವ ಕ್ಲೈಮ್ಯಾಕ್ಸ್ ಹಂತದಲ್ಲಿ ನಕ್ಸಲೈಟ್ ರ ಸೆರೆಗೆ ಸಿಕ್ಕು ಕಾಡಿನ ಹೋರಾಟ, ಶ್ರೀಮಂತಿಕೆಯ ಶೋಕಿಗಿಂತ ವಾಸ್ತವದ ಬದುಕಿನಲ್ಲಿ ಜನಪರವಾಗಿ ಸಮಾಜಮುಖಿಯಾಗಿ ಬದುಕುವ ಅಗತ್ಯ ಮಹತ್ವವನ್ನು ಸಾರುವ ಉತ್ತಮ ಸಂದೇಶದ ಈ ಚಿತ್ರವನ್ನು ನಿರೂಪಣೆ, ಸಂಭಾಷಣೆ, ಹಾಸ್ಯ, ಭಾವನಾತ್ಮಕತೆ, ಸೇರಿದ ಹಲವು ಮೆಲೊಡ್ರಾಮಾದ ಮೂಲಕ ಹೇಳುವ ವರ್ಗೀಸರ ಪ್ರಯತ್ನ ಎಲ್ಲರಿಗೂ ಆಪ್ತವಾಗುವಂತಿದೆ.
ಪ್ರಥ್ವಿ ಯಂಥ ಅತ್ಯುತ್ತಮ ಚಿತ್ರ ನಿರ್ಧೆಶಿರುವ ಜಾಕಬ್ ಆಕಸ್ಮಿಕವಾಗಿ ಪ್ರಥ್ವಿ ಯಶಸ್ವಿಗೊಳಿಸಿದ ನಿರ್ಧೇಶಕನಲ್ಲ, ಅವರೊಬ್ಬ ಪ್ರತಿಭಾವಂಥ, ಸದಭಿರುಚಿಯ ದಿಗ್ಧರ್ಶಕ ಎನ್ನುವುದಕ್ಕೆ ತೀರಾ ಹಿಂದೆ ಸಿಕ್ಕ ಸಾಕ್ಷಿ-ದೃಷ್ಟಾಂತ ಈ ಸಿನೆಮಾ. ಇಂಥ ಅಸಂಖ್ಯ ಚಿತ್ರಗಳು ಕನ್ನಡ ಸೇರಿದಂತೆ ಭಾರತೀಯ ಚಿತ್ರಲೋಕದಲ್ಲಿ ಬಂದು ಹೋಗಿವೆ. ಇಂಥ ಸಿನೆಮಾಗಳನ್ನು ನೋಡಲೆಂದೇ ಹಿಂದೆಲ್ಲಾ ಚಿತ್ರೋತ್ಸವಗಳು ಜಿಲ್ಲಾಮಟ್ಟದಲ್ಲಿ ನಡೆಯುತಿದ್ದವು. ಈಗ ಆ ಕೊರತೆ ಇರುವುದರಿಂದ ಜನ ಯೂಟ್ಯೂಬ್, ಓಟಿಟಿ ಗಳ ಮೊರೆಹೋಗುತಿದ್ದಾರೆ.
ಹಳೆಯ ಚಿತ್ರ- ಗೀತೆಗಳ ಮೋಹದ ನನಗೆ ಬಹುಹಿಂದೆ ನೋಡಿದ ಶರಪಂಜರ, ಸಜಾಹಿ ಕಾಲಾಪಾನಿ, ಹುಲಿಯಾ ಥರದ ಸಿನೆಮಾಗಳನ್ನು ನಮ್ಮ ನ್ಯೂಸ್ ಪೋರ್ಟಲ್ ಮೂಲಕ ಪರಿಚಯಿಸುವ ಹೆಬ್ಬಯಕೆ ಹುಟ್ಟಿಕೊಂಡಿದೆ. ಆಸಕ್ತರು ತಾವು ನೋಡಿದ ಹಳೆಯ ಅದ್ಭುತ ಸಿನೆಮಾಗಳ ಬಗ್ಗೆ ಚೆಂದವಾಗಿ ಬರೆದು ಬಹುಮಾನ ಗಳಿಸಲು ವೇದಿಕೆ ನೀಡಲು ನಾವಂತೂ ಸಿದ್ಧ, ತಡವೇಕೆ ನಿಮ್ಮ ನೆಚ್ಚಿನ ಸಿನೆಮಾದ ಬಗ್ಗೆ ಬರೆದು ನುಡಿ ಯಲ್ಲಿ ಟೈಪ್ ಮಾಡಿ samajamukhi@rediffmail ಈ mail ಗೆ ಕಳುಹಿಸಿ. ಉಳಿದಂತೆ ಕುಶಲ-ಕ್ಷೇಮ ಸಾಂಪ್ರದ……. ಕನ್ನೇಶ್,

