
ಸಿದ್ದಾಪುರ ಹಲಗೇರಿ ಪ. ಪೂ. ಕಾಲೇಜಿನ ಉಪನ್ಯಾಸಕಿ ರಜನಿ ಶನಿವಾರ ನಿಧನರಾಗಿದ್ದಾರೆ. ಹಲಗೇರಿ ಸರ್ಕಾರಿ ಪ .ಪೂ. ಕಾಲೇಜಿನ ಉಪ ನ್ಯಾಸಕಿಯಾಗಿದ್ದ ಇವರು ಅಲ್ಪ ಕಾಲಿಕ ಅನಾರೋಗ್ಯ ದಿಂದ ಮೃತ ಪಟ್ಟಿದ್ದು ಇವರ ಪತಿ ಸಿದ್ದಾಪುರ ಕಾವಂಚೂರು ಮತ್ತು ಮನ್ಮನೆ ಪಿ. ಡಿ. ಓ. ಆಗಿದ್ದಾರೆ. ಜೇನು ಹೊಡೆದು ಸಾವು ವಿಷಯ : ಜೇನ್ನೊಣಗಳ ದಾಳಿಗೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಮೃತಪಟ್ಟ ಬಗ್ಗೆ ಸಿದ್ಧಾಪುರ ಠಾಣೆಯಲ್ಲಿ ಯುಡಿಆರ್ ನಂಬರ್ 35/2020 ಕಲಂ 174 CRPC ಅಡಿಯಲ್ಲಿ ಪ್ರಕರಣ ದಾಖಲಾದ ಕುರಿತು
ಸಾರಾಂಶ: ಮ್ರತೆ ಶ್ರೀಮತಿ ಮಹಾಲಕ್ಷ್ಮಿ ಕೋಂ ರಾಮಚಂದ್ರ ಮಡಿವಾಳ ಪ್ರಾಯ 47 ವರ್ಷ ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಇವಳು ತನ್ನ ಗಂಡ ರಾಮಚಂದ್ರ ಕನ್ನ ಮಡಿವಾಳ ( ಪಿರ್ಯಾದಿ ) ಪ್ರಾಯ 52 ವರ್ಷ
ಉದ್ಯೋಗ ರೈತಾಭಿ ಸಾ: ಹಂಜಗಿ ಪೋಸ್ಟ್ ಕೊಂಡ್ಲಿ, ಮುಗದೂರು , ಸಿದ್ದಾಪುರ. ಹಾಗೂ ಮಗನೊಂದಿಗೆ ತಮ್ಮ ಮನೆಯಿಂದ ದೂರದಲ್ಲಿರುವ ಕುಂದಗ್ರಾಮ ವ್ಯಾಪ್ತಿಯ ನೆರೆಗುಳಿ ಗದ್ದೆಯಲ್ಲಿ ಇರುವ ತಮ್ಮ ಗದ್ದೆಗೆ ಬತ್ತದ ಹೊರೆ ಕಟ್ಟಲು ಹೋಗಿದ್ದವಳು ಕೆಲಸಮಾಡುತ್ತಿದ್ದಾಗ 11:00 ಗಂಟೆ ಸುಮಾರಿಗೆ ಜೇನ್ನೊಣಗಳ ಗುಂಪು ದಾಳಿ ಮಾಡಿದ ಪರಿಣಾಮ ಮೂರು ಜನರು ಜೇನುನೊಣಗಳ ಕಡಿತದಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗಿದ್ದು, 3 ಗಂಟೆ ಆದರೂ ಮೃತಳು ಬರದಿದ್ದರಿಂದ ಪಿರ್ಯಾದಿ , ಅವನ ಮಗ ಮತ್ತು ಊರಿನ 5-6 ಜನರು ಸೇರಿಕೊಂಡು ಹುಡುಕುತ್ತಿದ್ದಾಗ ಮಧ್ಯಾಹ್ನ 4;30 ಗಂಟೆ ಸುಮಾರಿಗೆ ಅವರ ಗದ್ದೆಯಿಂದ ಸುಮಾರು 300-400 ಮೀಟರ್ ದೂರದ ಬ್ಯಾಣದ ಕರಡದಲ್ಲಿ ಮೃತ ಶವ ಸಿಕ್ಕಿದ್ದು ತನ್ನ ಹೆಂಡತಿಯು ಜೇನುನೊಣಗಳ ಕಡಿತದಿಂದ ಮೃತ ಪಟ್ಟಿದ್ದಾಗಿ ನೀಡಿದ ಲಿಖಿತ ದೂರು


