

ಕಾಂಗ್ರೆಸ್ ನಿಂದ ಲಾಭ-ಪ್ರಯೋಜನ ಪಡೆದವರು ಕಾಂಗ್ರೆಸ್ ನಲ್ಲಿದ್ದು ಪಕ್ಷಕ್ಕೆ ಹಾನಿ ಮಾಡುವುದಕ್ಕಿಂತ ಪಕ್ಷ ತ್ಯಜಿಸಿ ಹೊರನಡೆದರೆ ಅದರಿಂದ ಕಾಂಗ್ರೆಸ್ ಗೆ ಲಾಭ ಎಂದು ಹೇಳಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ್ ನಾಯ್ಕ ಕಾಂಗ್ರೆಸ್ ನಿಂದ ಹೊರಹೋಗುವವರಿಗಿಂತ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚು ಎಂದಿದ್ದಾರೆ.
ಸಿದ್ದಾಪುರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯ್ಕ ಬಿ.ಜೆ.ಪಿ. ಇತರ ಪಕ್ಷಗಳ ಆತ್ಮಸ್ಥೈರ್ಯ ಕುಂದಿಸಲು ಪ್ರಯತ್ನಿಸುತ್ತಿದೆ. ಈ ಹಿಂದೆ ಅನ್ಯ ಪಕ್ಷಗಳ ಕಾರ್ಯಕರ್ತರನ್ನೇ ದುರ್ಬಳಕೆ ಮಾಡುತಿದ್ದ ಬಿ.ಜೆ.ಪಿ. ಸ್ಥಳೀಯ ನಾಯಕರು ಈಗ ನೇರವಾಗಿ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಮಾಡುತಿದ್ದಾರೆ.
ಬಿ.ಜೆ.ಪಿ. ಯ ಕೆಟ್ಟ ರಾಜಕೀಯ ಅರಿತಿರುವ ಷಣ್ಮುಖ ಗೌಡರಂಥ ಹಿರಿಯರು ತಮ್ಮ ಆತ್ಮೀಯರನ್ನು ಬಿ.ಜೆ.ಪಿ.ಗೆ ಕಳುಹಿಸುವ ಮೂಲಕ ದಾಟಿದ ಸಂಕವನ್ನೇ ಮುರಿಯುತಿದ್ದಾರೆ. ಕಾಂಗ್ರೆಸ್ ನಿಂದ ಅಧಿಕಾರ, ಅನುಕೂಲ, ಲಾಭ ಪಡೆದ ಧುರೀಣರು ಮಾತೃಪಕ್ಷ ತ್ಯಜಿಸಿ ಅನ್ಯ ಪಕ್ಷಕ್ಕೆ ಹೋಗುವ ವಿದ್ಯಮಾನವನ್ನು ಜನಸಾಮಾನ್ಯರು, ಮತದಾರರು ಒಪ್ಪಲಾರರು ಎಂದರು.


