

ಡಿ.7 (ಕರ್ನಾಟಕ ವಾರ್ತೆ) : ಜಿಲ್ಲೆಯಲ್ಲಿ ಡಿ.22 ಮತ್ತು 27 ರಂದು ಎರಡು ಹಂತಗಳಲ್ಲಿ ಗ್ರಾಮಪಂಚಾಯತ್ ಚುನಾವಣೆ ನಡೆಸಲಾಗುತ್ತಿದ್ದು, ಮೊದಲನೆಯ ಹಂತದ ಚುನಾವಣೆಗೆ ಡಿ.7 ರಿಂದ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಂಭಾಗಣದಲ್ಲಿ ಸೊಮವಾರ ಗ್ರಾಮಪಂಚಾಯತ್ ಚುನಾವಣೆ ಕುರಿತು ಪತ್ರಿಕಾಗೋ ಷ್ಠಿ ನಡೆಸಿ ಮಾತನಾಡಿ ಮೊದಲನೆಯ ಹಂತದ ಚುನಾವಣೆಗೆ ಜಿಲ್ಲೆಯ 5 ತಾಲೂಕುಗಳ 101 ಗ್ರಾಮಪಂಚಾಯತಗಳಲ್ಲಿ ಚುನಾವಣೆ ನಡೆಯಲಿದ್ದು, ಒಟ್ಟು 698 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಪ್ರತಿ 10-15 ಮತಗಟ್ಟೆಗಳಿಗೆ ಸೆಕ್ಟರ್ ಆಫೀಸರ್ ಮತ್ತು ಸೆಕ್ಟರ್ ಹೆಲ್ತ್ ರೆಗ್ಯುಲೆಟರ್, ಪ್ರತಿ ತಾಲೂಕಿಗೆ ಫ್ಲಾಯಿಂಗ್ ಸ್ಕ್ಯಾಡ್, ಪ್ರತಿ ತಾಲೂಕಿನಲ್ಲಿ ತಹಶೀಲ್ದಾರ್ ನೆತ್ರತ್ವದಲ್ಲಿ ಮಾದರಿ ನಿತಿಸಂಹಿತೆಯ ತಂಡವನ್ನು ರಚಿಸಲಾಗಿದ್ದು, ಈ ತಂಡದಲ್ಲಿ ತಾಲೂಕ್ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ, ಪೋಲಿಸ್ ವೃತ್ತ ನೀರಿಕ್ಷಕ ,ಪೋಲಿಸ್ ಸಬ್ ಇನ್ಸ್ಪೆಕ್ಟರ್ , ಕಂದಾಯ ನೀರಿಕ್ಷಕ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಮೊದಲನೆ ಹಂತದ ಚುನಾವಣೆಗಾಗಿ ಡಿ.7 ಸೋಮುವಾರದಂದು ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಡಿ.11 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಡಿ.12 ರಂದು ನಾಮಪತ್ರಗಳನ್ನು ಪರಿಶೀಲಿಸುವ ದಿನವಾಗಿದ್ದರೆ ಡಿ.14 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ.
ಡಿ.22 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಘಂಟೆಯವರಗೆ ಮತದಾನ ನಡೆಯಲಿದ್ದು ಡಿ. 30 ರಂದು ಆಯಾ ತಾಲೂಕ ಕೇಂದ್ರಗಳಲ್ಲಿ ಮತ ಎಣಿಕೆ ನಡೆಸಲಾಗುವುದೆಂದರು.ಮೊದಲ ಹಂತದ ಚುನಾವಣೆಯಲ್ಲಿ ಕಾರವಾರ, ಅಂಕೋಲಾ ,ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಗ್ರಾಮಪಂಚಾಯತಗಳಲ್ಲಿ ಚುನಾವಣೆ ನಡೆಸಲಾಗುತ್ತಿದೆ ಹೊನ್ನಾವರ ತಾಲೂಕಿನ ಗ್ರಾಮಪಂಚಾಯತಗಳ ಪೈಕಿ ಹೊನ್ನಾವರ ತಾಲೂಕಿನ (ಗುಳದಕೇರಿ)ಮಂಕಿ-ಎ (ಹಳೇಮಠ), ಮಂಕಿ ಬಿ (ಅನಂತವಾಡಿ) ಮತ್ತು ಮಂಕಿ-ಸಿ(ಚಿತ್ತಾರ) ಗ್ರಾಮ ಪಂಚಾಯತಗಳನ್ನು ಹೊರತುಪಡಿಸಿ ಚುನಾವಣೆ ನಡೆಸಲಾಗುವುದು. ಮಂಕಿ ಗ್ರಾಮಪಂಚಾಯತವನ್ನು ಪಟ್ಟಣ ಪಂಚಾಯತವನ್ನಾಗಿ ಮೇಲ್ದರ್ಜೆಗೆ ಏರಿಸಲು ಸರಕಾರವು ಅಧಿಸೂಚನೆ ಹೊರಡಿಸುವುದರಿಂದ ಚುನಾವಣೆಯನ್ನು ಆಯೋಗವು ಕೈ ಬಿಟ್ಟಿರುತ್ತದೆ ಎಂದು ತಿಳಿಸಿದರು.
ಡಿ.31 ವರೆಗೆ ನೀತಿಸಂಹಿತೆ :- ಚುನಾವಣೆ ನಡೆಯುವ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಡಿ.31 ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುವುದು ಪಟ್ಟಣ ಪಂಚಾಯಿತಿ ಪುರಸಭೆ , ನಗರಸಭೆ ನಗರ ಪಾಲಿಕೆಯ ಪ್ರದೇಶಗಳಿಗೆ ಈ ನೀತಿಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು , ಮೊದಲ ಹಂತದ ಚುನಾವಣೆಯಲ್ಲಿ 53 ಅತೀ ಸೂಕ್ಷ್ಮ 164 ಸೂಕ್ಷ್ಮ ಮತ್ತು 513 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನವಣೆ ಸಂದರ್ಭದಲ್ಲಿ ಗಲಭೆ ಅಥವಾ ಚುನಾವಣೆ ಕರ್ತವ್ಯಗಳಿಗೆ ಅಡ್ಡಿಪಡಿಸಬಹುದಾದ ಸಮಾಜಘಾತಕ ವ್ಯಕ್ತಿಗಳನ್ನು ಈಗಾಗಲೇ ಪಟ್ಟಿಮಾಡಿ ಅವರ ಮೇಲೆ ಸೂಕ್ತ ನಿಗಾವಹಿಸಲಾಗಿದ್ದು ಮುಂಜಾಗ್ರತೆಯ ಕ್ರಮವಾಗಿ ಭದ್ರತಾ ಕಾಯಿದೆಯ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.
ಪ್ರತಿ ಮತಗಟ್ಟೆ ಭದ್ರತೆಗಾಗಿ ಪೋಲಿಸ್ ಸಿಬ್ಬಂದಿಗಳನ್ನು ಅವಶ್ಯಕತೆ ಅನುಗುಣವಾಗಿ ನೇಮಿಸಲಾಗುವುದು. ಡಿ.ಎಸ್.ಪಿ 5, ಸಿ.ಪಿ.ಐ/ಪಿಐ-17, ಪಿಎಸ್‍ಐ-70, ಎಎಸ್‍ಐ-160, ಎಚ್‍ಸಿ/ಪಿಸಿ-1160 ಪೋಲಿಸ್ ಅಧಿಕಾರಿ/ಸಿಬ್ಬಂದಿ, 15 ಡಿಎಆರ್ ತುಕಡಿಗಳು ಮತ್ತು 6 ಕೆಎಸ್‍ಆರ್‍ಪಿ ತುಕಡಿಗಳನ್ನು ಹಾಗೂ ಸುಮಾರು 400 ಗೃಹರಕ್ಷಕ ದಳದ ಸಿಬ್ಬಂದಿಯನ್ನು ಚುನವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಜಿಲ್ಲೆಯಾದ್ಯಂತ 54 ಚೆಕ್ ಪೋಸ್ಟಗಳನ್ನು ತೆರೆಯಲಾಗಿದ್ದು ಚುನಾವಣಾ ಅಕ್ರಮಗಳ ಬಗ್ಗೆ ನೀತಿಸಂಹಿಯಂತೆ ನಿಗಾವಹಿಸಲಿ ದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಪ್ರಿಯಾಂಗಾ ಹಾಗೂ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ.ಕೆ. ಉಪಸ್ಥಿತರಿದ್ದರು.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
