

ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ. ಬಿ.ಜೆ.ಪಿ. ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಜೆ.ಡಿ.ಎಸ್. ಬಿ.ಜೆ.ಪಿ.ಯೊಂದಿಗೆ ವಿಲೀನವಾಗುವ ಮೊದಲು ಚುನಾವಣೆ ಪೂರ್ವ ಸೋಲು ಒಪ್ಪಿಕೊಂಡಿದೆ.
ರಾಜ್ಯದ ಆಡಳಿತಾರೂಢ ಬಿ.ಜೆ.ಪಿ. ತಂತ್ರ-ಮಂತ್ರಗಳಿಂದ ಗ್ರಾಮಪಂಚಾಯತ್ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿದೆ. ಕಾಂಗ್ರೆಸ್ ಕೂಡಾ ತನ್ನ ಪ್ರಯತ್ನ ಮುಂದುವರಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆ.ಡಿ.ಎಸ್. ಮತ್ತು ಇತರ ಪಕ್ಷಗಳು ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿಯಲ್ಲಿವೆ. ಕಾಂಗ್ರೆಸ್, ಬಿ.ಜೆ.ಪಿ. ಬೆಂಬಲಿತರ ನಡುವೆ ಕೆಲವು ಸ್ವತಂತ್ರರು, ಕೆಲವು ಪಕ್ಷಗಳ ಬೆಂಬಲಿತರೂ ಆಯ್ಕೆಯಾಗಲಿದ್ದಾರೆ. ಜಿಲ್ಲೆಯಲ್ಲಿ ಸ್ನಾತಕೋತ್ತರ ಪದವಿಧರರು, ಪದವಿಧರರು, ಪ್ರಮುಖರು, ಹಳೆಮುಖಂಡರು ಹೀಗೆ ಎಲ್ಲಾ ವಯೋಮಾನದ,ಎಲ್ಲಾ ಕ್ಷೇತ್ರಗಳ ವ್ಯಕ್ತಿಗಳು ಗ್ರಾ.ಪಂ. ಚುನಾವಣಾ ಕಣದಲ್ಲಿದ್ದಾರೆ.
ಸಿದ್ಧಾಪುರದಲ್ಲಿ ಶಿರಳಗಿ ಪಂಚಾಯತ್ ಬಿಕ್ಕಳಸೆ ವಾರ್ಡ್ ನಿಂದ ಸ್ಫರ್ಧಿಸಿರುವ ಅಣ್ಣಪ್ಪ ನಾಯ್ಕ ಬಿಕ್ಕಳಸೆ ಜನರ ಗಮನ ಸೆಳೆದಿದ್ದು ಬಿ.ಜೆ.ಪಿ.ಯ ಹಿರಿಯ ಮುಖಂಡರಾಗಿದ್ದ ದಿ. ಮಹಾಬಲ ನಾಯ್ಕ ಬಿಕ್ಕಳಸೆಯವರ ಹಿರಿಯ ಪುತ್ರರಾಗಿರುವ ಇವರು ಕೃಷಿಕರು. ತಂದೆಯವರ ರಾಜಕೀಯ ಬದುಕು, ಬಿ.ಜೆ.ಪಿ. ಸಂಬಂಧಗಳ ನಡುವೆ ಕೂಡಾ ಇವರ ಕುಟುಂಬ ಈ ವರೆಗೆ ರಾಜಕೀಯ ಪ್ರವೇಶ ಮಾಡಿರಲಿಲ್ಲ. ಬಿ.ಜೆ.ಪಿ.ಯ ಹಿಂದಿನ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನಿಸ್ವಾರ್ಥ ಸೇವೆ ಮಾಡಿದ್ದ ಮಹಾಬಲನಾಯ್ಕರ ಕುಟುಂಬದ ಸದಸ್ಯರಾಗಿ ಮೊದಲಬಾರಿ ಗ್ರಾ.ಪಂ. ಅಭ್ಯರ್ಥಿಯಾಗಿರುವುದರಿಂದ ಅವರ ಸ್ಫರ್ಧೆ ಜನರ ಗಮನ ಸೆಳೆದಿದೆ.
ಕಾಂವಚೂರು ಪಂಚಾಯತ್ ನಲ್ಲಿ ಮೂರು ಬಾರಿ ಅಧ್ಯಕ್ಷರಾಗಿ, ನಾಲ್ಕುಬಾರಿ ಸದಸ್ಯರಾಗಿ ನಿರಂತರವಾಗಿ ಆಯ್ಕೆಯಾಗಿದ್ದ ರಾಜು ಕಟ್ಟಿಮನೆ ಸ್ಫರ್ಧೆ ಗಮನಸೆಳೆದಿದೆ.
ಬಿಳಗಿ ಪಂಚಾಯತ್ ನಲ್ಲಿ ಹಿಂದಿನ ಅಧ್ಯಕ್ಷರಾಗಿದ್ದ ಆದರ್ಶಪೈ, ದಯಾನಂದ ಚಿನಿವಾರ ,ಕಲ್ಕಣಿಯ ಸುವರ್ಣಾ ನಾಯ್ಕ ಸೇರಿದ ಕೆಲವರ ಸ್ಫರ್ಧೆ ಕುತೂಹಲ ಕೆರಳಿಸಿದೆ.
ಕೋಲಶಿರ್ಸಿ ಪಂಚಾಯತ್ ನಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಕಾಂಗ್ರೆಸ್ ಬಂಡಾಯ ಬಣ ಸೆಡ್ಡುಹೊಡೆದಿದೆ. ಗೋಪಾಲ ನಾಯ್ಕ, ಗೋವಿಂದ ನಾಯ್ಕ, ಮಮತಾ ನಾಯ್ಕ, ತಾಲೂಕಾ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ನಾಯ್ಕ, ವಿ.ಎಸ್.ಎಸ್. ಅಧ್ಯಕ್ಷ ಕೆ.ಆರ್. ವಿನಾಯಕ ರ ಸ್ಫರ್ಧೆ ಗಮನ ಸೆಳೆದಿದೆ.
ಬಿದ್ರಕಾನ ಪಂಚಾಯತ್ ನಲ್ಲಿ ರಾಮಚಂದ್ರ ಸದೆಗುಡ್ಡೆ, ಎನ್.ಬಿ.ಗೌಡ, ಜಯಂತ ಹೆಗಡೆ, ವಿ.ಎನ್.ಹೆಗಡೆ ಹಳದೋಟ, ಬಾಬುನಾಯ್ಕ ಸ್ಫರ್ಧೆ ಗಮನ ಸೆಳೆದಿದೆ.
ದೊಡ್ಮನೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಸುಬ್ರಾಯ ಭಟ್ ಗಡಿಹಿತ್ಲು ಗ್ರಾ.ಪಂ. ಚುನಾವಣೆಗೆ ಸ್ಫರ್ಧಿಸಿ ಜನರ ಗಮನ ಸೆಳೆದಿದ್ದಾರೆ. ಸಿದ್ಧಾಪುರ ಎ.ಪಿ.ಎಂ.ಸಿ. ಅಧ್ಯಕ್ಷರಾಗಿ ನಾಲ್ಕೈದು ದಶಕ ರಾಜಕೀಯದಲ್ಲಿರುವ ಭಟ್ ಈಗಿನ ದೊಡ್ಮನೆ ತಾ.ಪಂ. ಸದಸ್ಯ ವಿವೇಕ್ ಭಟ್ ರ ತಂದೆ.
ಮನೆಮನೆ ಗ್ರಾಮ ಪಂಚಾಯತ್ ನಿಂದ ರಾಜ್ಯ ರೈತ ಸಂಘದ ತಾಲೂಕಾ ಅಧ್ಯಕ್ಷ ವೀರಭದ್ರ ನಾಯ್ಕ ಸ್ಫರ್ಧಿಸಿದ್ದಾರೆ. ಇವರು ಈ ಹಿಂದೆ ಮನಮನೆ ಗ್ರಾ.ಪಂ. ಅಧ್ಯಕ್ಷರಾಗಿ,ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಸಂಘದ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು.
ವಾಜಗೋಡು ಪಂಚಾಯತ್ ನಿಂದ ಗ್ರಾ.ಪಂ. ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ಎನ್.ಟಿ.ನಾಯ್ಕ ಸೇರಿದ ಕೆಲವರ ಸ್ಫರ್ಧೆ ಗಮನಸೆಳೆದಿದೆ.
ಬೇಡ್ಕಣಿ ಗ್ರಾಮ ಪಂಚಾಯತ್ ನಿಂದ ಈರಪ್ಪ ನಾಯ್ಕ, ಪುಷ್ಫಲತಾ ನಾಯ್ಕ, ನೀಲಕಂಠ ನಾಯ್ಕ, ಕೃಷ್ಣಮೂರ್ತಿ ಮಡಿವಾಳ, ಸೀತಾರಾಮ ನಾಯ್ಕರ ಸ್ಫರ್ಧೆ ಗಮನ ಸೆಳೆದಿದೆ. ಕ್ಯಾದಗಿ ಪಂಚಾಯತ್ ನ ಹೆಗ್ಗೇರಿ ಕೆ.ಟಿ. ನಾಯ್ಕ ,ಡಿ.ಎಸ್.ಎಸ್.ಮುಖಂಡ ಶಿವಾನಂದ ನಾಯ್ಕ,ಶಂಕರ್ ನಾಯ್ಕ, ನವೀನ್ ಅಲ್ಮೇಡಾ ಕಾನಗೋಡ ಪಂಚಾಯತ್ ನಿಂದ ಸ್ಫರ್ಧಿಸಿ ಕುತೂಹಲ ಹೆಚ್ಚಿಸಿದ್ದಾರೆ.



