

ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷರೂ ಕಾಂಗ್ರೆಸ್ ಮುಖಂಡರೂ ರಾಜ್ಯ ಅಫೆಕ್ಸ್ ಬ್ಯಾಂಕ್ ಮಾಜಿ ನಿರ್ಧೇಶಕರಾಗಿದ್ದ ಷಣ್ಮುಖ ಬಿ ಗೌಡರ್ ಇಂದು ನಿಧನರಾದರು.
ಜನತಾದಳದಿಂದ ರಾಜಕೀಯ ಪ್ರವೇಶಿಸಿ, ಸಹಕಾರಿ ಕ್ಷೇತ್ರದ ಮೂಲಕ ಸಾಮಾಜಿಕ ಜೀವನ ಪ್ರಾರಂಭಿಸಿದ್ದ ಷಣ್ಮುಖ ಬಿ.ಗೌಡರ್ ಸಿದ್ಧಾಪುರದ ಕಲ್ಲೂರಿನವರು.ಕಲ್ಲೂರು ಷಣ್ಮುಖ ಗೌಡ ಎನ್ನುವ ಹೆಸರಿನಿಂದ ಪ್ರಸಿದ್ಧರಾಗಿದ್ದ ಎಸ್.ಬಿ.ಗೌಡರ್ ಮೂರುಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಒಂದು ಅವಧಿಗೆ ಅಧ್ಯಕ್ಷರಾಗಿ ಸುಧೀರ್ಘ ಅವಧಿಗಳಿಗೆ ಟಿ.ಎಂ.ಎಸ್. ನಿರ್ಧೇಶಕರು, ಕೆ.ಡಿ.ಸಿ.ಸಿ. ಬ್ಯಾಂಕ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಜನತಾದಳ, ಕಾಂಗ್ರೆಸ್ ಗಳಲ್ಲಿ ಗುರುತಿಸಿಕೊಂಡಿದ್ದ ಗೌಡರ್ ಒಮ್ಮೆ ಶಿರಸಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಫರ್ಧಿಸಿ ಪರಾಭವಗೊಂಡಿದ್ದರು. ಮಾಜಿ ಸಚಿವ ಆರ್.ವಿ. ದೇಶಪಾಂಡೆ ಶಿಷ್ಯರಾಗಿ ಗುರುತಿಸಿಕೊಂಡಿದ್ದ ಗೌಡರ್ ರಾಜಕೀಯ,ಸಹಕಾರಿ ಕ್ಷೇತ್ರದ ಶುದ್ಧಹಸ್ತದ ವ್ಯಕ್ತಿ ಎಂದು ಹೆಸರು ಮಾಡಿದ್ದರು. ಕಳೆದ ಒಂದೆರಡು ವರ್ಷಗಳ ಅನಾರೋಗ್ಯದ ನಡುವೆ ಕೂಡಾ ಸಹಕಾರಿ ಕ್ಷೇತ್ರದಲ್ಲಿ ಚಟುವಟಿಕೆಯಿಂದಿದ್ದ ಇವರು ಇತ್ತೀಚೆಗೆ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ಧೇಶಕರಾಗಿ ಆಯ್ಕೆಯಾಗಿದ್ದರು.



ಅಂತಿಮ ನಮನದ ವಿವರ- ಅಗಲಿದ ಗಣ್ಯರಿಗೆ ಅಂತಿಮ ನಮನ ಸ್ಟೋರಿಯಲ್ಲಿದೆ. visit- samaajamukhi you tube channel & samajamukhi.net





