

ಶಿರಸಿ ಉಪವಿಭಾಗದ ಸಿದ್ಧಾಪುರ ತಾಲೂಕಿನ ಗಡಿಭಾಗ ಕಾನಸೂರು ಭಾಗದಲ್ಲಿ ಶಿರಸಿಯಿಂದ ತಂದ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಕೆಲವರನ್ನು ಬಂಧಿಸಿದ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.
ಸಿದ್ಧಾಪುರ, ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟಮಾಡುತ್ತಿರುವ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ samajamukhi.net ಪ್ರತಿನಿಧಿಯೊಂದಿಗೆ ಮಾತನಾಡಿದ್ದ ಶಿರಸಿ ಪೊಲೀಸ್ ಉಪ ವರಿಷ್ಠಾಧಿಕಾರಿ ರವಿ ನಾಯ್ಕ ಶಿರಸಿ ಉಪವಿಭಾಗದಲ್ಲಿ ಅಕ್ರಮ ಮದ್ಯ-ಗಾಂಜಾ ಮಾರಾಟದ ಬಗ್ಗೆ ದೂರುಗಳಿವೆ. ಅವುಗಳ ನಿಯಂತ್ರಣಕ್ಕೆ ಪ್ರಯತ್ನ ಮಾಡುತಿದ್ದೇವೆ. ಗ್ರಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಡೆದರೆ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದಿದ್ದರು.
