

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಸಂಭವಿಸಿದೆ.
ಸಿದ್ಧಾಪುರ ತಾಲೂಕಿನ ಗ್ರಾ.ಪಂ. ಚುನಾವಣೆಯಲ್ಲಿ ಆಯ್ಕೆಯಾದ ಕೆಲವರು ಅತಿಹೆಚ್ಚಿನ ಮತಗಳನ್ನು ಪಡೆದಿದ್ದು ಇಂಥವರಲ್ಲಿ ಬೇಡ್ಕಣಿ ಗ್ರಾ.ಪಂ. ಕಡಕೇರಿಯ ಕೃಷ್ಣಮೂರ್ತಿ ಮಡಿವಾಳ ಮೊದಲಿಗರಾಗಿದ್ದಾರೆ. ಕೃಷ್ಣಮೂರ್ತಿ ಮಡಿವಾಳ-733 ಮತಗಳು, ಹೇಮಾವತಿ ಗ. ನಾಯ್ಕ 573 ಮತಗಳು






ಕಾವಂಚೂರು ಪಂಚಾಯತ್ ನ ಜಿ.ಟಿ.ನಾಯ್ಕ -385, ನಾಗರತ್ನ ಗೌಡ-327, ವಿನೋದಾ ಹರಿಜನ್-324
ಬಿಳಗಿ ಗ್ರಾಮ ಪಂಚಾಯತ್- ರಾಜು ಡಿ ನಾಯ್ಕ 175, ಸುವರ್ಣಾ ಪ್ರಭಾಕರ್ ನಾಯ್ಕ-106
ದೊಡ್ಮನೆ ಗ್ರಾಮ ಪಂಚಾಯತ್- ಸಾಧನಾ ರಾಜೇಶ್ ಭಟ್-399, ಭಾಗ್ಯಶ್ರೀಗೌಡ-392,ಶಾರದಾ ಹೆಗಡೆ-316ಸುಬ್ರಾಯ ಭಟ್-319 ಸುಜಾತಾ ದಯಾನಂದ ನಾಯ್ಕ-202

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಸಂಭವಿಸಿದೆ.
ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ನಿವಾಸಿಗಳಾದ ಪ್ರಕಾಶ ಬನ್ನಿಮಟ್ಟಿ (40), ಸಿದ್ದನಗೌಡ ಬಿಷ್ಟನಗೌಡರ (45) ಮೃತ ದುರ್ದೈವಿಗಳು. ಇಂದು ಗ್ರಾಮ ಪಂಚಾಯತಿ ಮತ ಎಣಿಕೆ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿದ್ದ ಇಬ್ಬರು ಹಾವೇರಿಗೆ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.
ಹಾವೇರಿಯಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಚುನಾವಣೆಯೆ ಮತ ಎಣಿಕೆ ಹಿನ್ನೆಲೆಯಲ್ಲಿ ಹಾವೇರಿಗೆ ಬರುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಇಬ್ಬರು ಅಭ್ಯರ್ಥಿಯ ಪರವಾಗಿ ಮತ ಎಣಿಕೆಯ ಏಜೆಂಟ್ ಆಗಿದ್ದರು ಎನ್ನಲಾಗಿದೆ.
ನಿಯಂತ್ರಣ ತಪ್ಪಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಗೆ ಕಾರು ಉರುಳಿ ಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.(kpc)





