


ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಈ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ: ಕ್ಯಾಂಪ್ಕೊ
ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Nishikant Dubey) ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಅಡಿಕೆ ಬಗ್ಗೆ ನೀಡಿದ ಹೇಳಿಕೆ ಜನರನ್ನ ತಪ್ಪುದಾರಿಗೆಳೆಯುವುದು ಮಾತ್ರವಲ್ಲದೇ, ಅಡಿಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ (CAMPCO) ಹೇಳಿದೆ.

ಮಂಗಳೂರು: ಅಡಿಕೆ (Arecanut) ಮಾನವನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎಂದು ಜಾರ್ಖಂಡ್ ಸಂಸದ ನಿಶಿಕಾಂತ್ ದುಬೆ (Jharkhand MP Nishikant Dubey) ನೀಡಿರುವ ಹೇಳಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಜನರಿಗೆ ತಪ್ಪು ಸಂದೇಶ ನೀಡುತ್ತದೆ. ಮಾತ್ರವಲ್ಲದೇ, ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ (CAMPCO) ಹೇಳಿದೆ.
ಅಡಿಕೆ ಮಾನವ ಹಾಗು ಜಾನುವಾರುಗಳಿಗೆ ಅಗತ್ಯವಿರುವ ಔಷಧೀಯ ಗುಣಗಳನ್ನು ಹೊಂದಿರುವ ಪದಾರ್ಥ. ಅಲ್ಲದೇ ಅಡಿಕೆಯಲ್ಲಿ ಮಧುಮೇಹ, ಕೊಲೆಸ್ಟ್ರಾಲ್, ಹಲವಾರು ಅನುಪಯುಕ್ತ ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ಪ್ರೊಟೊಜೋವನ್ ಪರಾವಲಂಬಿ ಇತ್ಯಾದಿಗಳನ್ನು ನಿವಾರಿಸುವ ಶಕ್ತಿ ಹೊಂದಿದೆ.


ಮಾರಕ ರೋಗ ಹೆಚ್‌ಐವಿ (HIV) ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿದ್ದು, ಆ್ಯಂಟಿ ಮಲೇರಿಯಲ್ (Anti-malarial), ಆಂಥೆಲ್ಮಿಂಟಿಕ್ (Anthelmintic) ಗುಣಲಕ್ಷಣಗಳನ್ನೂ ಸಹ ಹೊಂದಿದೆ. ಇದು ನೋವು ಶಮನಕಾರಿ ಹಾಗು ಗಾಯ ಮತ್ತು ಹುಣ್ಣುಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಜತೆಗೆ ಉತ್ತಮ ಆ್ಯಂಟಿ- ವೆನಮ್ (Anti- Venom) ಗುಣಲಕ್ಷಣಗಳನ್ನು ಹೊಂದಿದೆ.
ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಸಮರ್ಥ ಸಂಶೋಧನಾ ಸಂಸ್ಥೆಗಳು ನಡೆಸಿರುವ ಇತ್ತೀಚಿನ ಸಂಶೋಧನೆಗಳಿಂದ ಸಕಾರಾತ್ಮಕ ಫಲಿತಾಂಶಗಳು ಲಭ್ಯವಾಗಿದೆ.
1974ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಡಿಕೆ ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ ಎಂದು ವರದಿ ಮಾಡಿದ್ದಾರೆ. ಅಮೆರಿಕಾ, ಅಟ್ಲಾಂಟಾ, ಎಮೋರಿ ವಿವಿಯ ವಿನ್ಶಿಪ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಪ್ರಖ್ಯಾತ ವಿಜ್ಞಾನಿಗಳ ಗುಂಪಿನಿಂದಲೂ ಇದನ್ನು ದೃಢೀಕರಿಸಲಾಗಿದೆ ಎಂದು ಕ್ಯಾಂಪ್ಕೊ (CAMPCO) ತಿಳಿಸಿದೆ.
ಅಡಿಕೆ ಸೇವನೆಯು ಮಾರಕ ಕ್ಯಾನ್ಸರ್‌ನಂಥ ರೋಗಗಳಿಗೆ ಆಹ್ವಾನ ನೀಡಿದಂತೆ. ಆದ್ದರಿಂದ ಜನರು ಅಡಿಕೆ ಸೇವಿಸದಂತೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮೋದಿ ಅವರಿಗೆ ಪತ್ರ ಬರೆದಿದ್ದರು. (etbk)
ಕನ್ನಡವನ್ನು ಬೆಳೆಸಿದ ಯಕ್ಷಗಾನ ತಾಳಮದ್ದಳೆ
ನಾವು ಹುಟ್ಟಿದ ಹಾಗೂ ಬಾಳುತ್ತಿರುವ ಪ್ರದೇಶದ ಭಾಷೆ, ಸಂಸ್ಕೃತಿಗಳು ನಮಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಡುತ್ತವೆ. ಅವುಗಳ ಸಂಪರ್ಕವನ್ನು ಬಿಟ್ಟು ಬದುಕುವ ಸೊಕ್ಕು ಯಾರಿಗೂ ಇರಲಾರದು. ಭಾಷೆ ಬೆಳೆಯುವುದು ಬಳಸುವುದರಿಂದಲೇ ಎನ್ನುವುದು ಸರ್ವವೇದ್ಯ. ಕನ್ನಡ ಭಾಷೆಯನ್ನು ಅತ್ಯಂತ ಸೊಗಸಾಗಿ ದುಡಿಸಿಕೊಂಡಿರುವುದು ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಅದರ ಒಂದು ಶಾಖೆಯೇ ತಾಳಮದ್ದಳೆ. ಯಕ್ಷಗಾನ ತಾಳಮದ್ದಲೆಯು ಕನ್ನಡವನ್ನು ಆದ್ಯಂತವಾಗಿ ಆವರಿಸಿಕೊಂಡೇ ಪ್ರಕಟವಾಗುತ್ತದೆ. ಕನ್ನಡ ಭಾಷೆಯ ಎಲ್ಲ ಮಗ್ಗುಲುಗಳನ್ನೂ ತಾಳಮದ್ದಲೆಯ ವಾಚಿಕಾಭಿನಯದಲ್ಲಿ ನೋಡಬಹುದು. ಕನ್ನಡ ಭಾಷೆಯ ವಿರಾಟ್ ದರ್ಶನವನ್ನು ತಾಳಮದ್ದಳೆ ಪ್ರದರ್ಶನಗಳಲ್ಲಿ ಕಾಣಬಹುದು. ಇಂತಹ ಸಾರ್ಥಕ ಪ್ರದರ್ಶನಕ್ಕೆ ಸಾಕ್ಷಿಯಾದುದು ಸಿದ್ದಾಪುರ ತಾಲೂಕಿನ ಕವಲಕೊಪ್ಪದ ವಿನಾಯಕ ದೇವಾಲಯದ ಆವಾರದಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ನಡೆದ ಯಕ್ಷಗಾನ ಕವಿವರೇಣ್ಯ ದೇವಿದಾಸ ರಚಿಸಿದ “ಭೀಷ್ಮಪರ್ವ” ಯಕ್ಷಗಾನ ತಾಳಮದ್ದಳೆ ಪ್ರದರ್ಶನ.
ಕಲಾಭಾಸ್ಕರ(ರಿ.) ಇಟಗಿ ಹಾಗೂ ಒಡ್ಡೋಲಗ (ರಿ.) ಹಿತ್ಲಕೈ ಸಂಘಟನೆಗಳು ಸಂಯುಕ್ತವಾಗಿ ಸಂಯೋಜಿಸಿದ ಈ ಪ್ರದರ್ಶನದಲ್ಲಿ ತುಳಿಗೆರೆ ಗಜಾನನ ಭಟ್ಟ ಭಾಗವತರಾಗಿ ಕಾಣಿಸಿಕೊಂಡರು. ಮದ್ದಳೆ ವಾದಕರಾಗಿ ಮೂಡಗಾರ ಶ್ರೀಪಾದ ಭಟ್ಟ ಸಹಕರಿಸಿರು. ಜಯರಾಮ ಭಟ್ಟ ಗುಂಜಗೋಡು ಭೀಷ್ಮನಾಗಿ ಪಾತ್ರದ ತುಮುಲಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಕೌರವನಾಗಿ ವಿನಾಯಕ ಹೆಗಡೆ ಕವಲಕೊಪ್ಪ ಕಾಣಿಸಿಕೊಂಡರು. ಗಣಪತಿ ಹಿತ್ಲಕೈ ಕರ್ಣನಾಗಿ ಪಾತ್ರವನ್ನು ನಿರ್ವಹಿಸದರು. ವಿ.ಚಂದ್ರಶೇಖರ ಭಟ್ಟ ಗಾಳಿಮನೆ ಶ್ರೀಕೃಷ್ಣನಾಗಿ ಗೀತೋಪದೇಶ ಮಡಿದರು. ವಿಷಾದಯೊಗದ ಧನಂಜಯನಾಗಿ ಇಟಗಿ ಮಹಾಬಲೇಶ್ವರ ಭಟ್ಟ ಅರ್ಥವನ್ನು ಹೇಳಿದರು. ಇತ್ತೀಚಿಗೆ ದಿವಂಗತರಾದ ರಾಮಕೃಷ್ಣ ಭಟ್ಟ ಅಗ್ಗೇರಿಯವರಿಗೆ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು. ವಿದ್ವಾನ್ ಸಿ.ಎಸ್.ಭಟ್ಟ, ಜಯರಾಮ ಭಟ್ಟ, ಸುರೇಶ ಹೆಗಡೆ ಹಿತ್ಲಕೈ, ಎಮ್.ಎಸ್ಸ್. ಹೆಗಡೆ ಕವಲಕೊಪ್ಪ ಮುಂತಾದ ಗಣ್ಯರು ನುಡಿ ನಮನವನ್ನು ಸಲ್ಲಿಸಿದರು.
ಆರೋಗ್ಯ ತಪಾಸಣಾ ಶಿಬಿರ- ಸ್ಥಳದಲ್ಲೇ ಜೀವಿತ ಪ್ರಮಾಣಪತ್ರ ವ್ಯವಸ್ಥೆ- ಫೊಟೊ
ಸಿದ್ದಾಪುರ
ಜನತೆ ಆರೋಗ್ಯವಂತರಾಗಿದ್ದರೆ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದು ಅಗತ್ಯವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ|ಲಕ್ಮಿಕಾಂತ ನಾಯ್ಕ ಹೇಳಿದರು.
ಅವರು ಪಟ್ಟಣದ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ ಆಯೋಜಿಸಿದ ನಿವೃತ್ತ ನೌಕರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಜೀವಿತ ಪ್ರಮಾಣ ಪತ್ರ ಒದಗಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






