

ಗ್ರಾಮ ಪಂಚಾಯತ್ ಚುನಾವಣೆ ಮುಗಿದು ನಿರೀಕ್ಷೆಯಂತೆ ಬಿ.ಜೆ.ಪಿ. ಬೆಂಬಲಿತರು 4 ಸಾವಿರಕ್ಕಿಂತ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತರು 4 ಸಾವಿರಕ್ಕೆ ಹತ್ತಿರದ ಸ್ಥಾನಗಳನ್ನು ಜೆ.ಡಿ.ಎಸ್. 2ಸಾವಿರಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಮಾಹಿತಿ ಇದೆ.





ಈ ಚುನಾವಣೆಯಲ್ಲಿ ಪ್ರತಿ ಚುನಾವಣೆಯಂತೆ ಅನೇಕ ಹೊಸ ಮುಖಗಳ ಪ್ರವೇಶವಾಗಿದೆ. ಶಿರಸಿ ಕ್ಷೇತ್ರದ ಶಿರಸಿ ತಾಲೂಕಿನಲ್ಲಿ ಅಂಡಗಿ ಪಂಚಾಯತ್ ನ ಸುದರ್ಶನ ನಾಯ್ಕ, ಉಂಚಳ್ಳಿ ಪಂಚಾಯತ್ ಗೆ ಯುವಕವಿ ಅರುಣ್ ಕೊಪ್ಪ ಸೇರಿದಂತೆ ಅನೇಕ ಯುವಕರು ಗ್ರಾಮ ಪಂಚಾಯತ್ ಅಂಗಳ ಪ್ರವೇಶಿಸಿದ್ದಾರೆ.
ಸಿದ್ಧಾಪುರ ತಾಲೂಕಿನಲ್ಲಿ ಕಾನಸೂರು ಪಂಚಾಯತ್ ನ ಗವಿನಗುಡ್ಡ ವಾರ್ಡ್ನಿಂದ ಜನಮುಖಿ ರವಿ ನಾಯ್ಕ, ಕಾನಗೋಡು ಗ್ರಾ.ಪಂ. ನಿಡಗೋಡಿನಿಂದ ಕೃಷ್ಣಮೂರ್ತಿ ನಾಯ್ಕ, ಬಿದ್ರಕಾನ್ ಗ್ರಾ.ಪಂ. ಗೆ ಮಂಜುನಾಥ ಬಿ.ಗೌಡ ಸೇರಿದಂತೆ ಕೆಲವರು ಆಯ್ಕೆಯಾಗಿದ್ದಾರೆ. ಇವರೆಲ್ಲಾ ಶಿಕ್ಷಿತರು, ನಾನಾ ಕ್ಷೇತ್ರಗಳ ಅನುಭವಿಗಳೂ ಆಗಿರುವುದು ವಿಶೇಶ.










