ಗಣೇಶ್‌ ಹೆಗಡೆ ಸಂಶಯಾಸ್ಪದ ಸಾವು ಕೊಲೆ ಶಂಕೆ!

ಸಿದ್ಧಾಪುರ,ಮಾ.೨೩- ಇಲ್ಲಿಯ ವಾಟಗಾರ್‌ ಕುಂಟೆಹೊಳೆ ಬಳಿ ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸುಂಗೊಳ್ಳಿಮನೆಯ ಗಣೇಶ್‌ ಮಾಬ್ಲೇಶ್ವರ ಹೆಗಡೆ ಸಾವು ಕೊಲೆ ಇರಬಹುದೆ? ಎನ್ನುವ ಸಂಶಯಕ್ಕೆ ಕಾರಣವಾಗಿದೆ.

ಮಾ.೨೨ ರ ರಾತ್ರಿಯಿಂದ ೨೩ ರ ಮುಂಜಾನೆ ಮಧ್ಯದಲ್ಲಿ ನಡೆದಿರಬಹುದಾದ ಈ ಘಟನೆಯಲ್ಲಿ ಸುಂಗೊಳ್ಳಿಮನೆಯ ಗಣೇಶ್‌ ಮಾಬ್ಲೇಶ್ವರ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ರವಿವಾರ ಮುಂಜಾನೆ ಪತ್ತೆಯಾಗಿದ್ದಾರೆ. ಈ ಬಗ್ಗೆ ಪೊಲೀಸ್‌ ದೂರು ನೀಡಿರುವ ಮೃತರ ಸಹೋದರ ಶ್ರೀಧರ ಹೆಗಡೆ. ಗಣೇಶ್‌ ಹೆಗಡೆ ಸುಂಗೊಳ್ಳಿಮನೆಯಲ್ಲಿ ಏಕಾಂಗಿಯಾಗಿ ಬದುಕುತಿದ್ದರು. ಅವರ ಮಗ ಉಡುಪಿಯಲ್ಲಿರುತಿದ್ದು ವಾಟಗಾರಿನ ಸ್ಥಳೀಯರ ಮಾಹಿತಿ ಮೇರೆಗೆ ವಾಟಗಾರಿನ ಹೊಳೆ ಸಮೀಪ ನೋಡಿದಾಗ ಬಲಬದಿ ಗಣೇಶ್‌ ಹೆಗಡೆ ಉಪಯೋಗಿಸುತಿದ್ದ ‌ಮೊಪೆಡ್ ಸ್ಕೂಟರ್‌ ಪತ್ತೆಯಾಗಿದ್ದು ಅದರ ಪಕ್ಕದಲ್ಲಿಯೇ ಗಣೇಶ್‌ ಹೆಗಡೆ ಭಾಗಶ: ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಾವಿನ ಬಗ್ಗೆ ಬಲವಾದ ಸಂಶಯ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಂಶಯಾಸ್ಫದ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದಾರೆ.

ವಿದುರನಾದ ಗಣೇಶ್‌ ಹೆಗಡೆ ಜೂಜಿನ ವ್ಯವಹಾರಸ್ಥರಾಗಿದ್ದು ಮುಸ್ಸಂಜೆಯ ಮೊದಲು ಮನೆ ಸೇರುವ ಪ್ರವೃತ್ತಿಯವಾರಾಗಿದ್ದರು ಎನ್ನುವ ಸುಳಿವಿನ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಗಣೇಶ್‌ ಹೆಗಡೆ ಶುಕ್ರವಾರದ ಸಾಯಂಕಾಲ ಆರು-ಏಳು ಗಂಟೆಯ ನಂತರ ಕೂಡಾ ಪೇಟೆಯಲ್ಲಿದ್ದರು. ಅವರ ಜೊತೆಗಿದ್ದವರ್ಯಾರು ಎನ್ನುವ ಮಾಹಿತಿ ಆಧರಿಸಿ ನಗರದ ಸಿ.ಸಿ. ಟಿ.ವಿ. ಪರಶೀಲಿಸಲಾಗಿ ನಗರದಲ್ಲಿ ಸಿ.ಸಿ. ಟಿ.ವಿ.ಗಳು ಸುಸ್ಥಿತಿಯಲ್ಲಿರದಿದ್ದುದರಿಂದ ಈ ಮಾಹಿತಿ ಲಭ್ಯವಾಗಿಲ್ಲ.

ಓ.ಸಿ. ಮಟಕಾ, ಇಸ್ಫೀಟ್‌ ಹವ್ಯಾಸಿಯಾಗಿದ್ದ ಗಣೇಶ್‌ ಹೆಗಡೆಯವರ ಜೊತೆ ಇದ್ದವರ್ಯಾರು? ಅವರ ಬಳಿ ಹಣ ಇದ್ದಿರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಇವರನ್ನು ಕೊಲೆ ಮಾಡಿ ಹಣ ಅಪಹರಿಸಿರಬಹುದೆ? ಎನ್ನುವ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯ ಮೂಲಗಳನ್ನಾಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ಲೊರೆನ್ಸಿಕ್‌ ವರದಿ ಅಧರಿಸಿ ತನಿಖೆ ನಡೆಸಲಿರುವ ಪೊಲೀಸರು ಈ ಸಾವಿನ ರಹಸ್ಯ ಭೇದಿಸಬಹುದೆ? ಎನ್ನುವ ಕುತೂಹಲ ಎಲ್ಲರಲ್ಲಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *