

ಕಳೆದ ಅವಧಿಗಿಂತ ಈ ಅವಧಿಯಲ್ಲಿ ಕಾಂಗ್ರೆಸ್ ಚೇತರಿಸಿಕೊಂಡಿದೆ ಎಂದಿರುವ ಸಿದ್ಧಾಪುರ ತಾಲೂಕಾ ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ ಮಳಲವಳ್ಳಿ ಅನಾರೋಗ್ಯದ ಕಾರಣದಿಂದ ನಮಗೆ ಹೆಚ್ಚಿನ ಕೆಲಸ ಮಾಡಲಾಗಲಿಲ್ಲ ಆದರೂ ತಾಲೂಕಿನಲ್ಲಿ 15 ಗ್ರಾಮ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಬೆಂಬಲಿಗರೇ ಹೆಚ್ಚಿನ ಪ್ರಮಾಣದಲ್ಲಿ ಗೆದ್ದಿದ್ದು ಅವರೇ ಹೆಚ್ಚಿನ ಪಂಚಾಯತ್ ಗಳಲ್ಲಿ ಅಧಿಕಾರ ಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಗೆದ್ದ ನಂತರ ಮೊದಲಬಾರಿ ಕಾಂಗ್ರೆಸ್ ಕಛೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದಿನ ಅವಧಿಯಲ್ಲಿ ತಾಲೂಕಿನಲ್ಲಿ 80 ಸ್ಥಾನಗಳನ್ನು ಗೆದ್ದು 8 ಕಡೆ ಅಧಿಕಾರ ಹಿಡಿದಿದ್ದೆವು. ಈಗ 110 ಜನ ಕಾಂಗ್ರೆಸ್ ಬೆಂಬಲಿತರು ಜಯಸಿದ್ದೇವೆ. ಜೆ.ಡಿ.ಎಸ್.3 ಬಿ.ಜೆ.ಪಿ ಕೆಲವು ಸ್ಥಾನಗಳು, ಪಂಚಾಯತ್ ಗಳನ್ನು ಗೆದ್ದಿದೆ. ಬಿ.ಜೆ.ಪಿ. ಬೆಂಬಲಿಗರು ಗೆದ್ದಿರುವ ಪಂಚಾಯತ್ ಗಳ ಲೆಕ್ಕ ಕೊಟ್ಟರೆ ಅವರ ಸಾಧನೆ ಒಪ್ಪಬಹುದು ಆದರೆ ಆಮಿಷಗಳ ಮೂಲಕ ಇತರರನ್ನು ಸೇರಿಸಿ ಅಧಿಕಾರ ಮಾಡುವ ಆಸೆಯಿಂದ ಸುಳ್ಳುಲೆಕ್ಕ ಕೊಟ್ಟರೆ ಹೇಗೆ ಒಪ್ಪುವುದು ಎಂದು ಪ್ರಶ್ನಿಸಿದರು.
ದೊಡ್ಮನೆ,ಕಾನಸೂರುಗಳಲ್ಲಿ ಬಿ.ಜೆ.ಪಿ. ಕಾಂಗ್ರೆಸ್ ಬಲಾಬಲ ಸಮನಾಗಿದೆ. ಇನ್ನುಳಿದ 13 ಪಂಚಾಯತ್ ಗಳಲ್ಲಿ ಕಾಂಗ್ರೆಸ್ ಅಧಿಕಾರ ಮಾಡಲಿದೆ. ಕನಿಷ್ಟ 16 ಪಂಚಾಯತ್ ಗಳಲ್ಲಿ ಬಹುಮತದಿಂದ ಅಧಿಕಾರ ಮಾಡುವ ಗುರಿ ಇತ್ತು ಮುಂದಿನ ತಾಲೂಕು-ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಿದ್ದೇವೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವವರು, ಪಕ್ಷದ ಅನುಕೂಲ ಪಡೆದು ಅನ್ಯ ಪಕ್ಷ ಬೆಂಬಲಿಸುವವರನ್ನು ನಿರ್ದಾಕ್ಷಿಣ್ಯವಾಗಿ ಪಕ್ಷದಿಂದ ಹೊರಹಾಕುತ್ತೇವೆ. ಕೋಲಶಿರ್ಸಿ ಸೇರಿದಂತೆ ಕೆಲವೆಡೆ ಕಾಂಗ್ರೆಸ್ ಬೆಂಬಲಿತರೇ ದೊಡ್ಡ ಸಂಖ್ಯೆಯಲ್ಲಿ ಆಯ್ಕೆಯಾಗಿ ಅಧಿಕಾರ ಹಿಡಿಯುತ್ತಾರೆ. ಎರಡ್ಮೂರು ವಾರ್ಡಗಳಲ್ಲಿ ಗೆದ್ದು ಪಕ್ಷಕ್ಕೆ ಸವಾಲು ಹಾಕುವವರಿಗೂ ತಕ್ಕ ಉತ್ತರ ನೀಡುತ್ತೇವೆ ಎಂದರು.



ನಮ್ಮ ಕ್ಷೇತ್ರದ ಶಾಸಕರು,ಸಂಸದರು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ, ಇಲಾಖೆಗಳ ಅಧಿಕಾರಿಗಳನ್ನು ನಿಯಂತ್ರಿಸದ ಆಡಳಿತದಿಂದ ಜನರಿಗೆ ತೊಂದರೆಯಾಗಿದೆ. ರಾಷ್ಟ್ರ,ರಾಜ್ಯದ ಬಿ.ಜೆ.ಪಿ. ಆಡಳಿತ ಜನರಿಗೆ ಬೇಸರ ತರಿಸಿದೆ. ರೈತರು, ಜನಸಾಮಾನ್ಯರು, ಬಡವರ ವಿರೋಧಿ ಬಿ.ಜೆ.ಪಿ. ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ.ಶಾಸಕರಿಲ್ಲದೆ ಪಕ್ಷ ಸಂಘಟನೆ ನಡೆಯುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಶಾಸಕರು, ಸಂಸದರನ್ನು ಆಯ್ಕೆಮಾಡುವ ಮೂಲಕ ಜನರ ನಿರೀಕ್ಷೆ ಪೂರೈಸುತ್ತೇವೆ.
-ವಸಂತ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
