

ಕಾನಸೂರಿನ ಅಣ್ಣಪ್ಪ ನಾಯ್ಕರ ಮೇಲೆ ಹಲ್ಲೆಮಾಡಿದ ಕುಟುಂಬವನ್ನು ತಕ್ಷಣ ಬಂಧಿಸಿ,ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಶ್ರೀ ನಾರಾಯಣಗುರು ಧರ್ಮಪರಿಪಾಲನಾ ಸಂಘದ ಪದಾಧಿಕಾರಿಗಳು ಈ ಗಲಾಟೆಯಲ್ಲಿ ಆರೋಪಿಯಾಗಿರುವ ಸರ್ಕಾರಿ ನೌಕರರನ್ನು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಈ ಒತ್ತಾಯಮಾಡಿದ ಬಿ.ಎಸ್.ಎನ್.ಡಿ.ಪಿ. ಸಿದ್ಧಾಪುರ ತಾಲೂಕು ಉತ್ತರ ಕನ್ನಡದಲ್ಲಿ ಬಹುಸಂಖ್ಯಾತರಾದ ದೀವರ ಮೇಲೆ ಇಂಥ ಕಿರುಕುಳ,ಹಲ್ಲೆ,ಶೋಷಣೆ ನಡೆಯುತ್ತಿದೆ. ಈ ವಿದ್ಯಮಾನ ನಿಲ್ಲದಿದ್ದರೆ ಪರಿಸ್ಥಿತಿ ಹದಗೆಡಲು ಜಿಲ್ಲಾಡಳಿತವೇ ಅನುವುಮಾಡಿಕೊಟ್ಟಂತಾಗುತ್ತದೆ. ಕಾನಸೂರು ಪ್ರಕರಣದಲ್ಲಿ ಆರೋಪಿಗಳ ಬಂಧನ, ಸರ್ಕಾರಿ ನೌಕರನ ಅಮಾನತ್ತು ಮಾಡಿ ಬಾಧಿತರಿಗೆ ನ್ಯಾಯ ಒದಗಿಸಬೇಕು. ಇವರಿಗೆ ಜಾಮೀನು ಕೂಡಾ ನೀಡಬಾರದು. ಈ ಬೇಡಿಕೆಗಳು ಈಡೇರದಿದ್ದರೆ ಇದೇ ವಾರ ಪ್ರತಿಭಟನೆ ಮಾಡಿ ನ್ಯಾಯಕ್ಕಾಗಿ ಆಗ್ರಹಿಸುವುದಾಗಿ ಎಚ್ಚರಿಸಿದೆ,
ಕಾನಸೂರಿನ ಘಟನೆ ಅಕ್ಷಮ್ಯ ಅಪರಾಧ, ನಮ್ಮ ಸಮಾಜದ ಮೇಲೆ ಯಾರೇ ದಬ್ಬಾಳಿಕೆ ಮಾಡಿದರೂ ಅವರಿಗೆ ಸೂಕ್ತ ಉತ್ತರ ನೀಡಲು ಸಮಾಜ ಬದ್ಧವಾಗಿದೆ, ಬಿ.ಎಸ್.ಎನ್.ಡಿ.ಪಿ.ಇದರ ನೇತೃತ್ವ ವಹಿಸಲು ಸಿದ್ಧ.- ವಿನಾಯಕ ನಾಯ್ಕ ಬಿ.ಎಸ್.ಎನ್.ಡಿ.ಪಿ. (ತಾಲೂಕಾ ಅಧ್ಯಕ್ಷ)
ಕಾನಸೂರು ಮಾತ್ರವಲ್ಲ ಜಿಲ್ಲೆ, ರಾಜ್ಯದ ಎಲ್ಲೇ ಬಹುಸಂಖ್ಯಾತರ ಮೇಲೆ ಹಲ್ಲೆಯಾದರೆ ಪರಿಣಾಮ ಬೇರೆಯಾಗಲಿದೆ.ಕಾನಸೂರಿನ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಧನ್ಯವಾದ.- ಎ.ಜಿ.ನಾಯ್ಕ, ಕಡಕೇರಿ,bsndpಉಪಾಧ್ಯಕ್ಷ
ಕಾನಸೂರಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ ಬಗ್ಗೆ ಸಮಾಜಮುಖಿ ಗೆ ಮಾಹಿತಿ ಸಿಕ್ಕಿದೆ.





