ಫಯಾಜ್ ಇಸ್ಮಾಯಿಲ್ ಗೆ 5 ವರ್ಷ ಶಿಕ್ಷೆ,50 ಸಾವಿರ ದಂಡ
ಈ ಚಿತ್ರದಲ್ಲಿ ಕಾಣುವ ಸುರದ್ರೂಪಿ ಹುಡುಗನ ಹೆಸರು ಹಾಶಮ್ ಪರೀದ್ ಸಾಬ್, ಈತ ಸಾಗರತಾಲೂಕು ಚೂರಿಕಟ್ಟೆಯ ಪರೀದ್ ಸಾಬ್ ರ ಮಗ. ಇವರ ತಂದೆ ಪರೀದ್ ಸಾಬ್ ಸಿದ್ಧಾಪುರದಲ್ಲಿ ಒಂದು ಗುಜರಿ ಅಂಗಡಿ ನಡೆಸುತ್ತಾರೆ. ಮೂರುಜನ ಹೆಣ್ಣುಮಕ್ಕಳ ನಂತರ ಪರೀದ್ ಸಾಬ್ ರಿಗೆ ಹುಟ್ಟಿದ ಏಕೈಕ ಗಂಡುಮಗ ದುಡಿಮೆಗಾಗಿ ಕುವೈತ್ ಗೆ ಹೋಗುತ್ತಾನೆ. ಕೆಲವು ವರ್ಷಗಳಿಂದ ಕುವೈತ್ ನಲ್ಲಿ ದುಡಿಯುತಿದ್ದ ಈ ಹುಡುಗ ಕಳೆದ ವರ್ಷದ ಕೊನೆಯ ದಿನಗಳಲ್ಲಿ ಕುವೈತ್ ನಲ್ಲಿ ಸಮುದ್ರಕ್ಕೆ ಈಜಲು ಹೋಗಿ ಮೃತಪಟ್ಟ ಸುದ್ದಿ ಪರೀದ್ ಸಾಬರ ಕುಟುಂಬಕ್ಕೆ ಬಡಸಿಡಿಲಿನಂತೆ ತಿಳಿಯುತ್ತದೆ.
ಕೆಲವೇ ದಿವಸಗಳ ಹಿಂದೆ ಫೆಬ್ರವರಿ ತಿಂಗಳಲ್ಲಿ ಮನೆಗೆ ಮರಳುತ್ತೇನೆ ಎಂದು ತಂದೆ-ತಾಯಿಗಳಿಗೆ ತಿಳಿಸಿದ್ದ ಹುಡುಗ 15 ದಿವಸಗಳ ಹಿಂದೆ ತೀರಿಹೋದ ಎನ್ನುವ ಆಘಾತಕಾರಿ ಸುದ್ದಿಯ ಜಾಡು ಹಿಡಿದ ಹಾಶಮ್ ಪಾ ಲಕರು,ಸಂಬಂಧಿಗಳಿಗೆ ಈ ಸಾವು ಆಕಸ್ಮಿಕವಲ್ಲ ಕೊಲೆ ಎನ್ನುವ ಮಾಹಿತಿ ತಿಳಿಯುತ್ತದೆ.
ಆಕಸ್ಮಿಕ,ಅವಗಢ ಗಳಾದಾಗ ಮೈ ಕೈ ನಡುಗುವುದು ಸ್ವಾಭಾವಿಕ ಹೀಗೆ ನಡುಗಿ ಹೋದ ಪರೀದ್ ಸಾಬರ ಕುಟುಂಬ ಈ ಬಗ್ಗೆ ವಿಚಾರಣೆ, ತನಿಖೆಗೆ ಬೆಂಗಳೂರಿನ ಭಾರತೀಯ ರಾಯಭಾರಿ ಕಛೇರಿಗೆ ದೂರು ನೀಡಿದೆ. ಆದರೆ ಫಲಶೃತಿ ಶೂನ್ಯ. ಹಾಶಮ್ ಕೊಲೆಯಾಗಿ 15 ದಿವಸ ಕಳೆದರೂ ಶವ ಮರಳಲಿಲ್ಲ. ಮೊದಮೊದಲು ಈಜಲು ಹೋಗಿ ಸಾವಿಗೀಡಾದ ಬಗ್ಗೆ ಮಾಹಿತಿ ತಿಳಿದು ವಿಚಾರಿಸಿದಾಗ ಹಾಶಮ್ ತನ್ನ ಬಾಡಿಗೆ ಮನೆಯಲ್ಲಿ ರಕ್ತಸಿಕ್ತವಾಗಿ ಶವವಾಗಿ ಕಂಡ ಬಗ್ಗೆ ದಾಖಲೆ ದೊರೆತಿದೆ. ಮಗನೂ ಇಲ್ಲ, ಮಗನ ಕಳೆಬರಹವೂ ಬಂದಿಲ್ಲ ಎನ್ನುವ ವೇದನೆಯಲ್ಲಿರುವ ಕುಟುಂಬ ದುಡಿಯಲು ಹೋದ ಮಗ ಮರಳದೆ, ಶವವನ್ನೂ ನೋಡದೆ ಕಂಗಾಲಾಗಿದೆ. ಈ ಬಗ್ಗೆ ಸೂಕ್ತ ಏರ್ಪಾಡಿಗೆ ಸ್ಥಳಿಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಫಯಾಜ್ ಇಸ್ಮಾಯಿಲ್ ಗೆ 5 ವರ್ಷ ಶಿಕ್ಷೆ,50 ಸಾವಿರ ದಂಡ
ಸಿದ್ಧಾಪುರ ಕುಣಜಿ ಅರಣ್ಯ ವ್ಯಾಪ್ತಿಯಲ್ಲಿ ಶ್ರೀಗಂಧ ಕಳ್ಳತನ ಸಾಬೀತಾದ ಹಿನ್ನೆಲೆಯಲ್ಲಿ ಸಾಗರ ಎಸ್.ಎನ್. ನಗರದ ಫಯಾಜ್ ಇಸ್ಮಾಯಿಲ್ ಗೆ ಶಿರಸಿ ಜಿಲ್ಲಾ ನ್ಯಾಯಾಲಯ 50 ಸಾವಿರ ದಂಡ,5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ವ್ಯಕ್ತಿ ಸೆಪ್ಟೆಂಬರ್ 2016 ರಲ್ಲಿ ಸಿದ್ಧಾಪುರ ಅರಣ್ಯಇಲಾಖೆ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ.
ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ-
ಸಿದ್ಧಾಪುರ ಕೃಷಿ ಇಲಾಖೆ ಆವರಣದಲ್ಲಿ ರೈತ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷದಂತೆ ಕೃಷಿ ಕ್ಷೇತ್ರಗಳಲ್ಲಿ ವಿವಿಧ ರೀತಿಯಲ್ಲಿ ಸಾಧನೆ ಮಾಡಿದಂತಹ ರೈತರಿಗೆ ಆತ್ಮ ಯೋಜನೆಯ ತಾಲೂಕು ಮಟ್ಟದ ಮತ್ತು ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅದರಂತೆ ತಾಲ್ಲೂಕು ಮಟ್ಟದ ಪ್ರಶಸ್ತಿ ಪುರಸ್ಕೃತರಾದ
1) ಚಾಮರಾಜನ ಗೌಡರ್ -ನೆಜ್ಜುರ್ ಗ್ರಾಮ – ಹೈಟೆಕ್ ಹಸಿರು ಮನೆ ಕೃಷಿ ವಿಭಾಗ
2)ಚಂದ್ರಶೇಖರ್ ಗೊಂಡ -ಡುಗಡಿಕೊಪ್ಪ – ಸಮಗ್ರ ಕೃಷಿ ಪದ್ಧತಿ ವಿಭಾಗ
3) ಸುನೀಲ್ ವೆಂಕಟರಮಣ ನಾಯ್ಕ್ -ಬೇಡ್ಕಣಿ – ಸಮಗ್ರ ಕೃಷಿ ಪದ್ಧತಿ ವಿಭಾಗ
4) ರಮೇಶ್ ಈಶ್ವರ್ ನಾಯ್ಕ್ – ಕಿಲಾರ – ರೇಷ್ಮೆ ಕೃಷಿ ವಿಭಾಗ
5) ರಾಮದಾಸ್ ಹನುಮ ನಾಯ್ಕ್ – ಹುಸೂರ್ – ಸಮಗ್ರ ಕೃಷಿ ಪದ್ಧತಿ ವಿಭಾಗ
6) ಶ್ರೀಧರ್ ಕೃಷ್ಣ ಹೆಗಡೆ – ಸಂಪಗೋಡು – ಸಮಗ್ರ ಸಾವಯವ ಕೃಷಿ ಪದ್ಧತಿ ವಿಭಾಗ (ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ) ಆತ್ಮ ಯೋಜನೆಯಡಿ ಈ ರೈತರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಶಾಂತ್ ಜಿ ಎಸ್ ಕೃಷಿ ನಿರ್ದೇಶಕರು, ಡಾ // ಶಿವಶಂಕರ್ ಮೂರ್ತಿ ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ ಶಿರಸಿ, ವಿ ಎಂ ಹೆಗಡೆ ತಾಲೂಕು ರೈತ ಸಂಘದ ಕಾರ್ಯದರ್ಶಿ ಹಾಗೂ ಆತ್ಮ ಯೋಜನೆಯ ಸಿಬ್ಬಂದಿಗಳು ಭಾಗಿಯಾಗಿದ್ದರು.