

ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ತಂಡ ಸಂಕ್ರಾತಿಯಂದು ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಲಿದೆಯಂತೆ.
ನಾಳೆ ಗೋದಿನ,ಗುರುವಾರದಿಂದಲೇ ಆಲೆಮನೆ ಹಬ್ಬ-
ಸಿದ್ಧಾಪುರ ತಾಲೂಕಿನ ಭಾನ್ಕುಳಿ ರಾಮಚಂದ್ರಪುರಮಠದ ಗೋಸ್ವರ್ಗದಲ್ಲಿ ಗುರುವಾರ ಸಂಕ್ರಾಂತಿ ಅಂಗವಾಗಿ ಗೋದಿನ ಆಚರಣೆ ನಡೆಯಲಿದೆ. ಇದರೊಂದಿಗೆ ಪ್ರಾರಂಭವಾಗಲಿರುವ ಆಲೆಮನೆ ಹಬ್ಬಜ.14 ರಿಂದ 17 ರ ವರೆಗೆ ನಡೆಯಲಿದೆ. ಸಂಕ್ರಾಂತಿಯ ದಿವಸ ಗೋವುಗಳಿಗೆ ವಿರಾಮ,ವಿಶ್ರಾಂತಿಯ ದಿವಸ ಹಾಗಾಗಿ ಮಠದ ರಾಘವೇಶ್ವರಭಾರತಿ ಸ್ವಾಮೀಜಿ ಸಾನಿಧ್ಯದಲ್ಲಿ ಗೋದಿನ ಆಚರಣೆ ನಡೆಯಲಿದೆ. ಮೊದಲ ದಿನ ಧರ್ಮ ಮತ್ತು ಗೋವು ಎನ್ನುವ ವಿಚಾರಗೋಷ್ಠಿ ನಡೆಯಲಿದೆ. ಈ ಕಾರ್ಯಕ್ರಮದಿಂದ ಮೊದಲ್ಗೊಂಡು 4 ದಿವದ ನಾನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಗೋದಿನ ಮತ್ತು ಆಲೆಮನೆ ಹಬ್ಬ ಆಚರಣಾ ಸಮೀತಿ ಅಧ್ಯಕ್ಷ ಎಂ.ಜಿ.ರಾಮಚಂದ್ರ ತಿಳಿಸಿದರು. ಗೋಸ್ವರ್ಗ ಆವರಣದಲ್ಲಿ ಸಾಮೂಹಿಕ ಮಾಧ್ಯಮಗೋಷ್ಠಿ ನಡೆಸಿದ ಪ್ರಮುಖರು ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರನ್ನು ಆಮಂತ್ರಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ವಿಭಿನ್ನ ಸಿಹಿತಿಂಡಿಗಳು,ದೇಶೀ ಆಹಾರ ತಯಾರಿಕೆ ಮತ್ತು ಪ್ರದರ್ಶನ-ಮಾರಾಟಗಳೂ ನಡೆಯಲಿವೆ ಎಂದು ವೀಣಾ ಹೆಗಡೆ ತಿಳಿಸಿದರು..
ಗೋಸ್ವರ್ಗದಲ್ಲಿ 700 ಕ್ಕಿಂತ ಹೆಚ್ಚು ಜಾನುವಾರುಗಳಿವೆ. ಗೋಉತ್ಫನ್ನಗಳ ಸಂಶೋಧನಾ ಕೇಂದ್ರದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮಠದಿಂದ ದೀಪಾವಳಿಯಲ್ಲಿ ಹೊಸನಗರದಲ್ಲಿ, ಸಿದ್ಧಾಪುರದಲ್ಲಿ ಸಕ್ರಾಂತಿಗೆ ಗೋಪೂಜೆ ನಡೆಯುತ್ತವೆ. ಇದರ ಅಂಗವಾಗಿ ನಾನಾ ಸೇವೆಗಳಿಗೂ ಅವಕಾಶ ನೀಡಲಾಗಿದೆ.- ಆರ್.ಎಸ್. ಹೆಗಡೆ, ಎಂ.ಎಂ. ಹೆಗಡೆ

ಬೆಂಗಳೂರು: ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ತಂಡ ಸಂಕ್ರಾತಿಯಂದು ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಲಿದೆಯಂತೆ.
ಸೂಪರ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ. ಆರ್.ಚಂದ್ರು ಅವರ ನಿರ್ದೇಶನ ಅಂದ ಮೇಲೆ ಚಿತ್ರ ಎಲ್ಲದರಲ್ಲೂ ಅದ್ದೂರಿಯಾಗಿ ಮೂಡಿಬರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸುಗ್ಗಿ ಹಬ್ಬ ಸಂಕ್ರಾಂತಿ ಸಮೀಪದಲ್ಲಿದ್ದು, ಆ ಸುದಿನದಂದು ‘ಕಬ್ಜ’ ಚಿತ್ರತಂಡ ಸಿನಿರಸಿಕರಿಗೆ ಸರ್ ಪ್ರೈಸ್ ನೀಡಲಿದೆ. ಸಂಕ್ರಾಂತಿ ಹಬ್ಬದ ದಿನ ಬೆಳಗ್ಗೆ 10ಕ್ಕೆ ಆ ಸರ್ ಪ್ರೈಸ್ ಏನೆಂಬುದು ಎಲ್ಲರಿಗೂ ತಿಳಿಯಲಿದೆ.
ಈಗಾಗಲೇ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳಾದ ಕೆ.ಜಿ.ಎಫ್ 2 ಹಾಗೂ ಕಬ್ಜ ಚಿತ್ರಗಳ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬೆಂಗಳೂರು, ಹೈದರಾಬಾದ್ ಮುಂತಾದ ಕಡೆ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ಗಳಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಮಾಸಾಂತ್ಯಕ್ಕೆ ಮುಂದಿನ ಹಂತದ ಚಿತ್ರೀಕರಣ ಆರಂಭವಾಗಲಿದೆ.
ಉಪೇಂದ್ರ ಅವರು ಈ ಚಿತ್ರಕ್ಕಾಗಿ ನಾಲ್ಕು ಘಂಟೆಗೂ ಹೆಚ್ಚು ಕಾಲ ವ್ಯಾಯಾಮ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಹಾಗೆ ಸಜ್ಜಾಗಿ, ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಕಬ್ಜ ಮೂಡಿಬರುತ್ತಿದೆ ಎನ್ನುತ್ತಾರೆ ಆರ್ ಚಂದ್ರು.
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್ ಚಂದ್ರು ಅವರೆ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ.
ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್,ವಿಜಯ್ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಕಾಮರಾಜನ್(ಐ ಮೂವಿ ಖ್ಯಾತಿ), ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. (kpc)





