

ಮಾನ್ಯ ಸಮಾಜಮುಖಿ ಕನ್ನೇಶ್ ಅವರೆ….
ಮೊದಲು ಎರಡು ದಶಕಗಳ ನಿಮ್ಮ ನಿರಂತರ ಮಾಧ್ಯಮಕ್ಷೇತ್ರದ ಪ್ರಾಮಾಣಿಕ ಸೇವೆಗೆ ಅಭಿನಂದನೆಗಳು. ತಾಲೂಕಿನಲ್ಲಿ ದಿನಪತ್ರಿಕೆ, ಆನ್ಲೈನ್ ನ್ಯೂಸ್, ಯೂಟ್ಯೂಬ್ ಮೂಲಕ ವಿಶ್ವಕ್ಕೆ ಸಿದ್ಧಾಪುರವನ್ನು ಪರಿಚಯಿಸಿದವರು ನೀವು. ಹಲವು ಮೊದಲುಗಳ ಸಾಧಕ,ಪ್ರಾಮಾಣಿಕ ಪತ್ರಕರ್ತ ರಾಗಿ ನಮ್ಮ ತಾಲೂಕು, ಜಿಲ್ಲೆ, ರಾಜ್ಯಕ್ಕೆ ಹೆಸರು ತಂದಿದ್ದೀರಿ… ಅದಕ್ಕೆ ಪ್ರತಿಫಲ, ಪ್ರಶಂಸೆ, ಪ್ರಶಸ್ತಿ ಬಯಸಿದವರಲ್ಲ ನೀವು, ನಿಮ್ಮ ಕಠಿಣತೆಗಳಿಂದ ನೀವೇ ದೂಷಣಗೆ ಒಳಗಾದರೂ ನಿಮ್ಮ ಬದ್ಧತೆ, ಶ್ರಮ, ಪ್ರಯತ್ನ, ಹೋರಾಟ ಬಿಡದ ನಿಮ್ಮ ಛಲ ನಿಮಗೆ ಒಳ್ಳೆಯದನ್ನೇ ಮಾಡುತ್ತೆ.
ನಮ್ಮ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಹಾರ್ಸಿಕಟ್ಟಾದಲ್ಲಿ ತಾಲೂಕು ಜಿಲ್ಲೆಯ ಕೆಲವು ಸಹಕಾರಿ ಸಂಘಗಳಂತೇ ರಾತ್ರಿ ವ್ಯವಹಾರ ನಡೆಯುತ್ತದೆ. ಕೆಲವು ಸಿಬ್ಬಂದಿಗಳು,ಆಡಳಿತಮಂಡಳಿ ಸದಸ್ಯರಿಂದಾಗಿ ಅವ್ಯವಹಾರ, ಜಾತೀಯತೆ ಸೇರಿದ ಕೆಲವು ಅಪರಾತಪರಾಗಳು ನಡೆಯುತ್ತಿರುವ ವರ್ತಮಾನ ಇಲ್ಲಿದೆ. ಶಿರಸಿ-ಸಿದ್ಧಾಪುರದ ಬಹುತೇಕ ಪ್ರಮುಖ ಸಹಕಾರಿ ಸಂಘಗಳಂತೆ ಕೆಲವರಿಗೆ ಮಾತ್ರ ಮತದಾನ, ತಮಗೆ ಬೇಕಾದವರಿಗೆ ಮಾತ್ರ ಅನುಕೂಲ, ಮತದಾನದ ಹಕ್ಕು ನೀಡುವುದು ಸೇರಿದಂತೆ ಸಾರ್ವಜನಿಕ, ಸಹಕಾರಿ ಶಿಸ್ತು-ನಿಯಮ ನಿಬಂಧನೆ ಮೀರಿ ಎಲ್ಲವೂ ನಡೆಯುತ್ತಿದೆ. ಈ ಬಗ್ಗೆ ದಾಖಲೆಗಳೊಂದಿಗೆ ಸಹಕಾರಿ ಇಲಾಖೆಗೆ ಬರೆದಿದ್ದು,ನಿಯಮ ಉಲ್ಲಂಘನೆ ಸದಸ್ಯರಿಗೆ ಅನ್ಯಾಯ ಮಾಡುತ್ತಿರುವ ಮುದ್ರಿತ ದಾಖಲೆಗಳನ್ನು ನಿಮಗೆ ನೀಡಿದ್ದೇವೆ. ಇಂಥ ಸ್ಥಿತಿಯಲ್ಲಿ ರಾಜಕಾರಣ, ಇಲಾಖೆ, ಅಧಿಕಾರಿಗಳನ್ನು ಬಳಸಿಕೊಂಡು ಮಾಡುತ್ತಿರುವ ಅನುಚಿತ ಕೆಲಸಗಳ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದಿದ್ದೇವೆ. ನಿಯಮ ಮೀರಿ ರಾತ್ರೋ- ರಾತ್ರಿ ಮತದಾರರು ಹೆಚ್ಚಿರುವುದು, ನೌಕರರಿಗೆ ಕೆಲವರಿಗೆ ಅನುಕೂಲ, ಅನಾನುಕೂಲ ಮಾಡಿ ಪಕ್ಷಪಾತ ಮಾಡಿರುವುದು ಸೇರಿ ಅನೇಕ ತೊಂದರೆಗಳಿವೆ. ಈ ಬಗ್ಗೆ ತಿಳಿದೂ ತಿಳಿಯದಂತೆ ಇರುವಅನೇಕರಂತೆ ನೀವಲ್ಲ ಎಂದು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಕಟಣೆಗೆ ಕೋರಿ ಈ ಪತ್ರ ಕಳಿಸಿದ್ದೇವೆ. ಈ ಬಗ್ಗೆ ಇಲಾಖೆಯಿಂದ ತನಿಖೆ, ವಿಚಾರಣೆಗಳು ನಡೆಯುತ್ತಿವೆ.
ಜಿಲ್ಲೆ, ತಾಲೂಕಿನ ಹಲವು ಸಂಸ್ಥೆಗಳಲ್ಲಿ ಇಂಥದ್ದೇ ಅವ್ಯವಹಾರಗಳಿಂದ, ಅಡ್ಡದಾರಿಗಳಿಂದ ಮತ್ತೆ- ಮತ್ತೆ ಅಧಿಕಾರ ಹಿಡಿದು ಕೊಬ್ಬಿರುವ ಆಡಳಿತ ಮಂಡಳಿ ಸಂಘಗಳ ಉದ್ಯೋಗಿಗಳನ್ನೂ ನೋಡಿದ್ದೇವೆ. ಹಾರ್ಸಿಕಟ್ಟಾ ಸೇರಿದಂತೆ ತಾಲೂಕಿನ ಬಹುತೇಕ v.s.s.ಗಳ ಇಂಥ ಅವ್ಯವಹಾರಗಳ ತನಿಖೆಯಾದರೆ ಕೆಲವು ಪ್ರಮುಖರ ಮುಖವಾಡ ಕಳಚುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಂಥ ಅವ್ಯವಹಾರಗಳಿಂದ ಸಂಘದ ಪ್ರಮುಖ ಉದ್ಯೋಗಿಗಳು, ಸಹಕಾರ ಇಲಾಖೆಯ ಅಧಿಕಾರಿಗಳಿಗೆ ತೊಂದರೆ… ಈ ಬಗ್ಗೆ ಪ್ರಕಟಿಸಿ ನ್ಯಾಯ ಒದಗಿಸಲು ಕೋರಿಕೆ.
ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ರೈತರಿಂದ ಟ್ರ್ಯಾಕ್ಟರ್ ರ್ಯಾಲಿ
ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಬೆಂಗಳೂರಿನಲ್ಲೂ ನಡೆಸಲು ರಾಜ್ಯದ ರೈತರು ನಿರ್ಧರಿಸಿದ್ದಾರೆ.

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿಯನ್ನು ಬೆಂಗಳೂರಿನಲ್ಲೂ ನಡೆಸಲು ರಾಜ್ಯದ ರೈತರು ನಿರ್ಧರಿಸಿದ್ದಾರೆ.
ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್‍ಯಾಲಿ ಬೆಂಗಳೂರಿನಲ್ಲೂ ನಡೆಯಲಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ರೈತ ಸಂಘದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು, ಗಣರಾಜ್ಯೋತ್ಸವ ದಿನದಂದು ನೆಲಮಂಗಲದ ನೈಸ್ ರೋಡ್ ಜಂಕ್ಷನ್ನಿಂದ ರೈತರ ಜಾಥಾ ಪ್ರಾರಂಭವಾಗಲಿದೆ. ಉತ್ತರ ಕರ್ನಾಟಕ ಮತ್ತು ಪಶ್ಚಿಮ ಕರ್ನಾಟಕದ ಜಿಲ್ಲೆಗಳಿಂದ ಬರುವ ರೈತರು ಈ ಸ್ಥಳದಲ್ಲಿ ಸೇರಲಿದ್ದಾರೆಂದು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿಗಳ ಭಾಷಣ ಮುಗಿದ ನಂತರ ಟ್ರ್ಯಾಕ್ಟರ್ ರ‍್ಯಾಲಿ ಆರಂಭವಾಗುತ್ತದೆ. ಟ್ರ್ಯಾಕ್ಟರ್ಗಳಲ್ಲಿ ರಾಷ್ಟ್ರ ಧ್ವಜ ಮತ್ತು ಹಸಿರು ಧ್ವಜವನ್ನು ಹಾಕಿಕೊಳ್ಳಲಿದ್ದಾರೆ. ನೈಸ್ ರೋಡ್ನಿಂದ ಯಶವಂತಪುರ ಮಾರ್ಗವಾಗಿ ಸರ್ಕಲ್ ಮಾರಮ್ಮ, ಮಲ್ಲೇಶ್ವರಂ, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್, ಆನಂದ್ ರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ನಲ್ಲಿ ರೈತರು ಸೇರಲಿದ್ದಾರೆ. ಇಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮತ್ತು ಮುಖಂಡರು ಇರಲಿದ್ದಾರೆ.
ದೇಶ ಖಾಸಗಿ ಕಂಪನಿಗಳ ಆಸ್ತಿಯಾಗ್ತಿದ್ದು, ಅದನ್ನ ಉಳಿಸಿಕೊಳ್ಳುವ ಹಾಗೂ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದು. ಸರ್ಕಾರಿ ಸೌಮ್ಯದ ಗಣಿಗಾರಿಕೆಯನ್ನ ಖಾಸಗಿಯವರಿಗೆ ಕೊಟ್ಟಾಗ ಯಾರು ಚಕಾರ ಎತ್ತಿಲ್ಲ. ವಿರೋಧ ಪಕ್ಷಗಳು ಟೀಕೆ ಮಾಡಿವೆ. ದೇಶದ ವಿಮಾನ ನಿಲ್ದಾಣಗಳು ಖಾಸಗೀಕರಣವಾದಾಗಲು ಸಹ ಜನ ವಿರೋಧಿಸಲಿಲ್ಲ. ಇದರಿಂದ ಬಂಡವಾಳಶಾಯಿಗಳು ಟಾರ್ಗೆಟ್ ಕೃಷಿ ಕ್ಷೇತ್ರ ಮತ್ತು ಕೃಷಿ ಮಾರುಕಟ್ಟೆಯಾಗಿದೆ. ದೇಶದ 80 ರಷ್ಟು ಜನ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಮತ್ತು ಶೇಕಡಾ 75 ರಷ್ಟು ಉತ್ಪನ್ನಗಳು ಕೃಷಿಯಿಂದ ಬರುತ್ತವೆ. ದೇಶದ ಜನರು ಕೃಷಿಯಿಂದ ಸುಂದರ ಜೀವನ ಕಂಡುಕೊಂಡಿದ್ದಾರೆ.
ಇವರನ್ನು ಕೃಷಿಯಿಂದ ಒಕ್ಕಲೆಬ್ಬಿಸುವ ಕಾರಣಕ್ಕೆ ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೂರು ಕೃಷಿ ಕಾಯ್ದೆ ಜಾರಿಗೆ ತಂದಿದೆ. ಇದೀಗ ಬೇರೆ ಅಂಜೆಡಾ ಇಟ್ಟುಕೊಂಡು ರೈತರ ಹಾದಿ ತಪ್ಪಿಸುವ ಕೆಲಸವನ್ನ ಕೇಂದ್ರ ಮಾಡ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. (kpc)

