ಮರೆಯುವ ನೂರು ಯತ್ನ

ಕಡಲ ದಂಡೆಯಲ್ಲಿ
ಅಂಗಾಲುಗಳ ಸೋಕಿದಾಗ
ಸಣ್ಣದೊಂದು ಕಣ್ಣಹನಿ
ಜಾರಿತು ಕೆಳಗೆ ಅತಿ ವೇಗ

ಅಲೆದೆಲೆದು ಬಂದು
ಭೋರ್ಗೆರೆದು ಅಲೆಗಳು
ಎಳೆಎಳೆಯಾಗಿ ಸುರುಳಿ
ಬಿಚ್ಚಿಟ್ಟಿತ್ತು ನಿನ್ನ ನೆನಪುಗಳು

ಆ ಕಡೆಯ ಕಲ್ಲು ಬಂಡೆ
ದಿಟ್ಟಿಸುತ್ತಿತ್ತು ನನ್ನೇ
ನಾ ಮೇಲೆಳದೆ ಮುಳಿಗಿಳಿಯುತ್ತಿದ್ದೆ
ಉಸಿರಾಡಿ ಭಾವಗಳನ್ನೇ

ಮನಸಾರೆ ಬಿಡಿಸಿಟ್ಟ
ಪ್ರೇಮ ಹೆಜ್ಜೆಗಳ ಚಿತ್ರಣ
ಅಳಿಯಲೊಲ್ಲದು ಮಾಡಿದರೂ
ಮರೆಯುವ ನೂರು ಯತ್ನ

ತೋಯ್ದೆದ್ದ ಮರಿ ಮೀನುಗಳು
ಗಿಲಿಗಿಲಿಯಿಕ್ಕಿ ಮಾತಿಗೆಳೆದಿತ್ತು
ಏನಿಲ್ಲದ ಏನೆಲ್ಲಾ ಇರುವ
ಮೌನದ ಪರಿಚಯವಾಗಿ ಹಿಂತಿರುಗಿತ್ತು

ಹೇಳಿ ಹೋಗುವ ಮುನ್ನ
ಮಡುಗಟ್ಟಿ ಮನದಲ್ಲೇ
ಅಳು ಬಂಧಿಯಾಗುವ ಕಲೆ
ಸಿದ್ದಿಸಲು ಕಲಿಸಬೇಕಿತ್ತು ಓ ನಲ್ಲೆ

ಸಪ್ಪೆ ಮೊಗದ ನೋವುಗಳಿಗೆ
ಕಾರಣಗಳ ಕೇಳ ಬಯಸಿ
ಬಂದಿದ್ದವು ಜಲಚರಗಳೆಲ್ಲಾ
ಬೆಂದೋದವು ಬಿಕ್ಕಳಿಕೆಗೆ ಆಗಿ ಬಿಸಿ

ಎದೆಯ ಒಡಲಾ ಕಾವು
ನಲುಗಿಸುವಂತೆ ವಸುಂಧರೆಯ ಮಡಿಲು
ಆವಿಯಾಗಿ ಹರಡಿತು ಆಗಸದಲ್ಲೆಲ್ಲಾ
ನಡುಕದಿಂದ ಕವಿಯಲು ಕತ್ತಲು

ಸಾವಿರ ಸಾವಿರ ದಿನಗಳ
ಸವಿ ಒಲವಾ ಮೆರವಣಿಗೆ
ಕಹಿಯಾಗಿ ತಡೆರಹಿತ ಪಯಣ
ಜೀವಿಸುವಾಸೆ ಇದರಲ್ಲೇ ಹೀಗೆ

*ಬಸವರಾಜ ಕಾಸೆ*
7829141150
pr***********@***il.com

ReplyForward

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

Latest Posts

O

Recommended For You

About the Author: Kanneshwar Naik

Leave a Reply

Your email address will not be published. Required fields are marked *