

ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಸಿದ್ದಾಪುರ ತಹಸಿಲ್ಧಾರರಾಗಿ ಕೆಲಸ ಮಾಡುತಿದ್ದ ಮಂಜುಳಾ ಭಜಂತ್ರಿ ಕಾರವಾರಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಸಿಲ್ಧಾರ್ ಆಗಿ ವರ್ಗಾವಣೆಯಾಗಿದ್ದರೆ ಅವರ ಜಾಗಕ್ಕೆ ದಾವಣಗೆರೆಯಲ್ಲಿ ಚುನಾವಣಾ ತಹಸಿಲ್ಧಾರ್ ಆಗಿ ಕಾರ್ಯನಿರ್ವಹಿಸುತಿದ್ದ ಪ್ರಸಾದ್ ಎಸ್. ಎ. ಯವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದೆ.
ಸಿದ್ದಾಪುರ:ಜೀವನಕ್ಕೆ ಬೆಳಕು ನೀಡುವಗುರುವಿನ ಜನ್ಮೋತ್ಸವವನ್ನು ಪ್ರತಿ ಮನೆಯಿಂದ ದೀಪ ತಂದು ದೀಪೋತ್ಸವದರೀತಿಯಲ್ಲಿ ಆಚರಿಸಿರುವುದು ಒಂದುಅರ್ಥಪೂರ್ಣವಾದಕಾರ್ಯವಾಗಿದೆಎಂದು ನಿವೃತ್ತ ಪ್ರಿನ್ಸಿಪಾಲ್ ಸುರೇಂದ್ರದಫೇ ದಾರಅಭಿಪ್ರಾಯಪಟ್ಟರು.
ಅವರುತಾಲೂಕಿನ ಹೆರವಳ್ಳಿಯಲ್ಲಿ ಮಡಿವಾಳ ಮಾಚಿದೇವರ ಮಂದಿರದಲ್ಲಿಆಚರಿಸಲಾದ ವಚನರಕ್ಷಕ ವೀರ ಮಡಿವಾಳ ಜಯಂತ್ಯೋತ್ಸವದಲ್ಲಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮೊಳಗೆ ದೇವರನ್ನುಕಾಣಬೇಕು.ಹಿರಿಯರನ್ನುಗೌರವಿಸಬೇಕು.ತಮ್ಮಲ್ಲಿರುವ ಒಣ ಪ್ರತಿಷ್ಠೆಯನ್ನು ಬಿಟ್ಟುಎಲ್ಲರನ್ನು ಸಮಾನವಾಗಿಕಾಣಬೇಕು.ಅವಾಗ ಸಮಾಜದಅಭಿವೃದ್ಧಿಯಾಗುತ್ತದೆಎಂದರು.
ಪತ್ರಕರ್ತಕನ್ನೇಶ ಕೋಲಸಶಿರ್ಸಿ ಮಾತನಾಡಿ ಷೋಷಣೆಗೆ ಒಳಗಾದವರನ್ನು ರಕ್ಷಿಸಲು ಹೋರಾಟ ಮಾಡಿದ ಮಹಾನ್ ವ್ಯಕ್ತಿಗಳು ಶಿವಶರಣರು. ನೇರ ನುಡಿಯ ವ್ಯಕ್ತಿತ್ವದ ಮಾಚಿದೇವರು ಸಮಾಜದಲ್ಲಿನ ಮನಸ್ಸಿನ ಕೊಳೆ ತೊಳೆಯಲು ಅವತಾರ ವೆತ್ತಿದ್ದರು. ಸಮಾಜದಲ್ಲಿ ಸತ್ಯ, ಪ್ರಾಮಾಣಿಕತೆಗೆ ಬೆಲೆ ಇದೆಎಂದು ತೋರಿಸಿಕೊಟ್ಟವರು ಮಾಚಿದೇವರು.ಶರಣರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕುಎಂದರು.
ಪತ್ರಕರ್ತ ದೀವಾಕರ ನಾಯ್ಕ ಶಿವಶರಣರ ವಚನಗಳಲ್ಲಿ ಮನುಕುಲದಉದ್ಧಾರದ ಸಂದೇಶಗಳಿವೆ. ಇಂತಹ ಕಾರ್ಯಕ್ರಮಗಳಿಂದ ಸಮಾಜದ ಸಮ್ಮಿಳಿತವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿಪತ್ರಕರ್ತ ಸುರೇಶ ಮಡಿವಾಳಕಡಕೇರಿ,ಗ್ರಾಮಕಮಿಟಿಅಧ್ಯಕ್ಷ ಕೃಷ್ಣ ಮಡಿವಾಳ ಉಪಸ್ಥಿತರಿದ್ದರು.ಅರ್ಚಕ ಸದಾನಂದಎಸ್‍ಗೌಡ ಸ್ವಾಗತಿಸಿದರು.ಧರ್ಮಪ್ಪ ನಿರೂಪಿಸಿ ವಂದಿಸಿದರು.



ಅವಿರೋಧ ಆಯ್ಕೆ- ಸಿದ್ದಾಪುರ:ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಮಹಾಬಲೇಶ್ವರ ದೇವರು ಭಟ್ಟ ಅಗ್ಗೆರೆ ಹಾಗೂ ಉಪಾಧ್ಯಕ್ಷರಾಗಿ ಇಂದಿರಾ ಗಜಾನನ ಹೆಗಡೆ ಹಾರ್ಸಿಕಟ್ಟಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ಸೋಮವಾರ ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕ ಅನಂತ ವಿಘ್ನೇಶ್ವರ ಹೆಗಡೆ ಗೊಂಟನಾಳ,ಅನಂತ ಸುಬ್ರಾಯ ಹೆಗಡೆ ಹೊಸಗದ್ದೆ, ಅಶೋಕ ರಾಮಚಂದ್ರ ಹೆಗಡೆ ಹೀನಗಾರ, ನಾಗರಾಜ ಶೇಷಗಿರಿ ಹೆಗಡೆ ಹುಲಿಮನೆ, ಮಂಜುನಾಥ ಕೃಷ್ಣ ನಾಯ್ಕ ತೆಂಗಿನಮನೆ, ವಿಘ್ನೇಶ್ವರ ಹನುಮಂತ ಗೌಡ ಮಾದ್ಲಮನೆ, ಸುಮಾ ಮಂಜುನಾಥ ಹೆಗಡೆ ಹೊನ್ನೆಹದ್ದ, ನಾಗರಾಜ ಬಂಗಾರೇಶ್ವರ ಹೆಗಡೆ ಹೊಲಗದ್ದೆ, ಸುಧಾಕರ ಗಣಪ ಹರಿಜನ ಹೊನ್ನೆಹದ್ದ ಉಪಸ್ಥಿತರಿದ್ದರು. ಚುನಾವಣಾಧಿಕಾರಿ ಆಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಕುಮಾರ ಸಿ.ಜಿ. ಕಾರ್ಯನಿರ್ವಹಿಸಿದ್ದರು.
