

ಕರೋನಾ ಹಿನ್ನೆಲೆಯಲ್ಲಿ ಲಾಕ್ಔಟ್ ನಡುವೆ ಮನೆಯಿಂದ ಹೊರನಡೆದು ಅಪಘಾತಕ್ಕೆ ಸಿಲುಕಿದ ಅಂಕೋಲಾದ ಇಬ್ಬರು ಯುವಕರು ಬೈಕ್ ಅಪಘಾತದಲ್ಲಿ ಮೃತರಾದ ದುರ್ಘಟನೆ ನಡೆದಿದೆ.
ಎಲ್ಲರೂ ಲಾಕ್ಔಟ್ ಅದೇಶದ ಹಿನ್ನೆಲೆಯಲ್ಲಿ ಮನೆ ಒಳ ಸೇರಿದ ಸಂದರ್ಭದಲ್ಲಿ ಸಿದ್ದಾಪುರದ ಕರ್ಕಿಸವಲಿನಲ್ಲಿ ಕಾಳಿಂಗಸರ್ಪ ಒಂದು ಹೊರ ಬಂದು ಉರಗ ತಜ್ಞರ ಕೈ ಚಳಕದಿಂದ ಮರಳಿ ಕಾಡು ಸೇರಿದೆ.
ಸ್ವಚ್ಛತೆ, ಮುಂಜಾಗೃತೆ ಹಿನ್ನೆಲೆಗಳಲ್ಲಿ ಉತ್ತರಕನ್ನಡ ಸೇರಿದಂತೆ ರಾಜ್ಯಾದ್ಯಂತ ಈಗ ಬ್ಲೀಚಿಂಗ್ ಕೆಲಸ ನಡೆಯುತ್ತಿದೆ. ಸ್ಥಳಿಯ ಆಡಳಿತಗಳ ನಿರ್ವಹಣೆಯಲ್ಲಿ ನಡೆಯುತ್ತಿರುವ ಈ ಬ್ಲೀಚಿಂಗ್ ಕಾರ್ಯಕ್ಕೆ ಆಯಾ ವ್ಯಾಪ್ತಿಯ ಸ್ಥಳಿಯ ಸಂಸ್ಥೆಗಳ ಆಡಳಿತಾಧಿಕಾರಿಗಳು, ತಹಸಿಲ್ಧಾರರು ಸಹಕರಿಸಿದರು. ಈ ಕೆಲಸದ ಜೊತೆಗೆ ಲಾಕ್ಔಟ್ ಸಮಯದಲ್ಲಿ ಪೌರಕಾರ್ಮಿಕರು ಅಹರ್ನಿಶಿ ದುಡಿಯುತ್ತಿರುವುದು ಶ್ಲಾಘನಾರ್ಹ.







_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






