

ಉತ್ತಮ ಸೇವೆಗೆ ಮುಖ್ಯಮಂತ್ರಿಗಳ ಪದಕ ಪಡೆದ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಅಭಿನಂದಿಸಲಾಗಿದೆ. ತರಬೇತಿ ಪಡೆದ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಗಳ ಪಥ ಸಂಚಲನ ಕಾರವಾರ ಡಿ.ಎ.ಆರ್. ಪೊಲೀಸ್ ಮೈದಾನದಲ್ಲಿ ನಡೆಯಿತು.

ಸಿದ್ಧಾಪುರ ತಾಲೂಕಿನ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಸಂಬಂಧ ಪಟ್ಟವರಿಗೆ ಸಿದ್ದಾಪುರ ತಹಸಿಲ್ದಾರ್ ಮತ್ತು ಕೆ.ಎಸ್.ಆರ್.ಟಿ.ಸಿ. ತಾಲೂಕಾ ನಿಯಂತ್ರಕರ ಮೂಲಕ ರಣಧೀರ ಪಡೆಯ ತಾಲೂಕು ಘಟಕ ಮನವಿ ಅರ್ಪಿಸಿತು.





*ಯಲ್ಲಾಪುರದ ಮಲ್ಲಿಕಾ ಹೋಟಲ್ ಹತ್ತಿರ ರಾಷ್ಟ್ರಿಯ ಹೆದ್ದಾರಿಯ ಮೇಲೆ ಸುಲಿಗೆ ಮಾಡಿದ ಅಂತರ ಜಿಲ್ಲಾ ಸುಲಿಗೆಕೋರರ ಬಂಧನ*
ದಿನಾಂಕ :08/02/2021 ರಂದು ರಾತ್ರಿ 22:45 ಗಂಟೆ ಸುಮಾರಿಗೆ ಯಲ್ಲಾಪುರದ ಮಲ್ಲಿಕಾ ಹೋಟಲ್ ಹತ್ತಿರ ಫಿರ್ಯಾಧಿ ಕೃಷ್ಣಾಜಿ ನಾರಾಯಣ ಹಾವೇರಿ. ಸಾ//ಚೆನ್ನಾಪುರ ತಾ// ಹಾನಗಲ್ ಜಿಲ್ಲಾ//ಹಾವೇರಿ ಈತನು ತನ್ನ ಭಾವ ಆಕಾಶ್ ಹಾಗೂ ತಮ್ಮ ಹೇಮಂತ ಇವರೊಂದಿ ಮೋಟಾರ್ ಸೈಕಲ್ ಮೇಲೆ ಬರುತ್ತಿರುವಾಗ ಮೂರು ಜನ ಆರೋಪಿತರು ಕಾರಿನಲ್ಲಿ ಬಂದು ಫಿಸ್ತೂಲ್ ಮತ್ತು ರಾಡ್ ಹಿಡಿದುಕೊಂಡು ಫಿರ್ಯಾಧಿಯವರಿಗೆ ಹೊಡೆಯಲು ಮೈ ಮೇಲೆ ಏರಿ ಬಂದು ಅವರಿಗೆ ಹಲ್ಲೆ ಮಾಡಿ ಹೇದರಿಸಿ ಅವರಿಂದ ನಗದು ಹಣ್ಣ= 820/- ರೂಪಾಯಿ, ಫಿರ್ಯಾಧಿಯವರ ಕೊರಳಲ್ಲಿದ್ದ ಬೆಳ್ಳಿಯ ಚೈನ್ ಹಾಗೂ 40.000/- ರೂಪಾಯಿ ಮೌಲ್ಯಾದ ಹೀರೋ ಹೋಂಡಾ ಮೋಟಾರ್ ಸೈಕಲ್ ಈಗೆ ಒಟ್ಟು 42.320/- ರೂಪಾಯಿ ಮೌಲ್ಯದ ಸ್ವತ್ತನ್ನು ಸುಲಿಗೆ ಮಾಡಿಕೊಂಡು ಈ ವಿಷಯವನ್ನು ಯಾರಿಗಾದರು ಹೇಳಿದರೆ ಕೊಂದು ಹಾಕುವುದಾಗಿ ಹೇದರಿಸಿ ಅಲ್ಲಿಂದ ಕಾರಿನ ಮೇಲೆ ಹೋದ ಬಗ್ಗೆ ಫಿರ್ಯಾಧಿಯವರು ನೀಡಿದ ದೂರನ್ನು ಯಲ್ಲಾಪುರ ಠಾಣೆಯಲ್ಲಿ ಗುನ್ನಾ ನಂಬರ್ 21/2021 ಕಲಂ 392, 323, 504 ,506 ಐಪಿಸಿ ಹಾಗೂ ಕಲಂ 3, 25 ಇಂಡಿಯನ್ ಆರ್ಮ್ಸ್ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಈ ಪ್ರಕರಣದಲ್ಲಿ ಆರೋಪಿತರ ಬಗ್ಗೆ ಖಚಿತ ಬಾತ್ಮಿ ಸಂಗ್ರಹಿಸಿ ಆರೋಪಿತರು ಮದನೂರು ಗ್ರಾಮದ ಅಲ್ಕೆರಿ ಊರಿನಲ್ಲಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ಆರೋಪಿತರಾದ 1) ಮೌಲಾಲಿ ತಂದೆ ಮಹ್ಮದ್ ಸಾಬ್ ಹುಲಗೂರು ಪ್ರಾಯ :34 ವರ್ಷ , ವೃತ್ತಿ : ಗೌ0ಡಿ ಕೆಲಸ , ಸಾ// ಕೇರಿ ಓಣಿ ದೇವಿಕೊಪ್ಪ ತಾ–ಕಲಘಟಗಿ , ಜಿ –ಧಾರವಾಡ . 2 ) ಮಹ್ಮದ್ ಆಶಿಫ್ @ ಹಾರಿಫ್ ತಂದೆ ಮಹ್ಮದ್ ಇಲಿಯಾಸ್ , ಪ್ರಾಯ :37 ವರ್ಷ ವೃತ್ತಿ : ವೆಲ್ಡಿಂಗ್ ಕೆಲಸ , ಸಾ// ಜೆ ಪಿ ನಗರ ಪಾರ್ಕ್ , ಸೊರಬಾ ರಸ್ತೆ 2ನೇ ಕ್ರಾಸ್ , ಸಾಗರ , ಜಿಲ್ಲೆ : ಶಿವಮೊಗ್ಗ. 3) ಅತಾವುಲ್ಲಾ ತಂದೆ ಇಸ್ಮಾಯಿಲ್ ಸಾಬ್ ಮಕಾಂದರ್ ಪ್ರಾಯ:36 ವರ್ಷ, ವೃತ್ತಿ : ವೆಲ್ಡಿಂಗ್ ಕೆಲಸ , ಸಾ// ಎಸ್ ಎನ್ ನಗರ 1ನೇ ಕ್ರಾಸ್ ,ಇಂದಿರಾಗಾಂಧಿ ಕಾಲೇಜ್ ಹಿಂಬಾಗ ಸಾಗರ್ , ಜಿಲ್ಲೆ : ಶಿವಮೊಗ್ಗ.
ಇವರಿಗೆ ದಸ್ತಗಿರಿ ಮಾಡಿ ವಶಕ್ಕೆ ಪಡೆದು ಅವರಿಂದ 1)ಮಾರುತಿ 800 ಕಾರ್ , 2) ಹೀರೋ ಹೋಂಡಾ ಮೋಟಾರ್ ಸೈಕಲ್,3) ನಗದು ಹಣ , 4) ಮಂಕಿ ಕ್ಯಾಪ್ , 5) ಕಾರದ ಪುಡಿ ,6) ಕಬ್ಬಿಣದ ರಾಡ್ 7) ಫಿಸ್ತೂಲ್ ( ಏರ್ ಗನ್ ) ಒಟ್ಟು 90.000/- ರೂ ಬೆಲೆಯ ಸ್ವತ್ತುಗಳನ್ನು ಜಪ್ತು ಪಡಸಿಕೊಳ್ಳಲಾಗಿದೆ . *ಶ್ರೀ ಶಿವಪ್ರಕಾಶ ದೇವರಾಜ* ಮಾನ್ಯ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ , *ಶ್ರೀ ಬದರಿನಾಥ ಎಸ್* ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ. ಶ್ರೀ ರವಿ ನಾಯ್ಕ್ , ಮಾನ್ಯ ಪೊಲೀಸ್ ಉಪ ಅಧೀಕ್ಷಕರು ಶಿರಸಿರವರ ಮಾರ್ಗ ದರ್ಶನದಲ್ಲಿ ಶ್ರೀ ಸುರೇಶ್ ಯಳ್ಳುರ್ ಪಿ ಐ ಯಲ್ಲಾಪುರ ಪೊಲೀಸ್ ಠಾಣೆಯ ಇವರ ನೇತೃತ್ವದಲ್ಲಿ ಶ್ರೀ ಮಂಜುನಾಥ ಗೌಡರ್ ಪಿ ಎಸ್ ಐ, ಶ್ರೀ ಭೀಮಸಿಂಗ್ ಲಮಾಣಿ ಪಿ ಎಸ್ ಐ ಯಲ್ಲಾಪುರ ಪೊಲೀಸ್ ಠಾಣೆ , ಹಾಗೂ ಎ ಎಸ್ ಐ ಮಂಜುನಾಥ್ ಮನ್ನಂಗಿ ಮತ್ತು ಸಿಬ್ಬಂದಿಯವರಾದ ಸಿ ಹೆಚ್ ಸಿ ಮಹಮ್ಮದ್ ಶಫೀ , ಬಸವರಾಜ ಹಗರಿ, ಗಜಾನನ ನಾಯ್ಕ್ , ಕೃಷ್ಣಮೂರ್ತಿ ನಾಯ್ಕ್ , ಸಿಪಿಸಿ ಮುತ್ತಣ್ಣ ಭೋವಿ , ಚಿದಾನಂದ ಅಂಗಡಿ, ಮಪಿಸಿ ಶೋಭಾ ನಾಯ್ಕ್, ರವರು ಆರೋಪಿತರನ್ನು ಮತ್ತು ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ..
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
