

ಮರಕ್ಕೆ ಹತ್ತುವಾಗ ವಿದ್ಯುತ್ ಸ್ಪರ್ಶಿಸಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಭಟ್ಕಳದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಬೆಲ್ಕೆ ಮೀಸಲು ಅರಣ್ಯ ಪ್ರದೇಶದ ಮಾಶೆರಿ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.

ಕಾರವಾರ: ಮರಕ್ಕೆ ಹತ್ತುವಾಗ ವಿದ್ಯುತ್ ಸ್ಪರ್ಶಿಸಿ ಚಿರತೆಯೊಂದು ಮೃತಪಟ್ಟಿರುವ ಘಟನೆ ಇಲ್ಲಿನ ಭಟ್ಕಳದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಬೆಳ್ಕೆ ಮೀಸಲು ಅರಣ್ಯ ಪ್ರದೇಶದ ಮಾಶೆರಿ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ.
ಮೃತಪಟ್ಟಿರುವ ಚಿರತೆ ಎರಡು ವರ್ಷದ್ದಾಗಿದೆ ಎಂದು ಹೊನ್ನಾವರ ತಾಲೂಕಿನ ಡಿಸಿಎಫ್ ಗಣಪತಿ ನಾಯಕ್ ತಿಳಿಸಿದ್ದಾರೆ. ಮರಕ್ಕೆ ಹತ್ತುವಾಗ 11 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ವೈರ್ ಚಿರತೆಗೆ ತಗುಲಿರುವುದಾಗಿ ಅವರು ಹೇಳಿದ್ದಾರೆ.
ಗಣಪತಿ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆದಾಗ್ಯೂ, ಚಿರತೆ ಮೃತದೇಹದ ಮೇಲೆ ಯಾವುದೇ ಗಾಯ ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿ ಚಿರತೆ ಮೃತದೇಹವನ್ನು ವಿಲೇವಾರಿ ಮಾಡಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ. (kpc)
