
ಕನ್ನಡ ಚಿತ್ರರಂಗದ ಹಾಸ್ಯನಟ ಶರಣ್ ಸ್ವಯಂ ಪ್ರಯತ್ನ, ಪ್ರತಿಭೆಯಿಂದ ಯಶಸ್ಸು ಸಾಧಿಸಿದವರು. ಕನ್ನಡದ ಪ್ರತಿಭಾವಂತ ನಟ-ನಟಿಯರಾದ ಶರಣ್-ಶೃತಿ ಅಪರೂಪದ ಅಣ್ಣ-ತಂಗಿಯರು. ಸಿದ್ಧಾಪುರದ ಬೇಡ್ಕಣಿಯಲ್ಲಿ ಗುರುಶಿಷ್ಯರು ಚಿತ್ರದ ಚತ್ರೀಕರಣದ ವೇಳೆಯಲ್ಲಿ ಸಮಾಜಮುಖಿಯೊಂದಿಗೆ ಮಾತನಾಡಿದ ಶರಣ್ ಹಲವು ಸತ್ಯ-ರಹಸ್ಯ-ಗುಟ್ಟುಗಳನ್ನು ರಟ್ಟು ಮಾಡಿದರು.
ಅವರ ಸಮಾಜಮುಖಿ ಸಂದರ್ಶನದ ಮೂರು ವಿಡಿಯೋ ತುಣುಕುಗಳು ಇಲ್ಲಿವೆ.
ಯುವರತ್ನ’ ಚಿತ್ರದ ಪಾಠಶಾಲಾ ಹಾಡು ಬ್ಲ್ಯಾಕ್ ಕಾಫಿಯಂತೆ: ಸಂಗೀತ ನಿರ್ದೇಶಕ ಎಸ್.ತಮನ್
ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ ವಿಡಿಯೊ ಹಾಡು ಪಾಠಶಾಲಾ ಬಿಡುಗಡೆಯಾಗಿದೆ. ಈ ಹಾಡು ಚಿತ್ರದ ಜೀವಾಳ ಎಂದು ಹೇಳಲಾಗುತ್ತಿದ್ದು ಸಂಗೀತ ನಿರ್ದೇಶಕ ಎಸ್ ತಮನ್ ಅವರ ಸಂಗೀತದಲ್ಲಿ ಮೂಡಿಬಂದಿದೆ.

ಪುನೀತ್ ರಾಜ್ ಕುಮಾರ್ ಅಭಿನಯದ ಮುಂಬರುವ ಬಹು ನಿರೀಕ್ಷಿತ ಚಿತ್ರ ‘ಯುವರತ್ನ’ದ ಪ್ರಮುಖ ಸಾಹಿತ್ಯ ವಿಡಿಯೊ ಹಾಡು ಪಾಠಶಾಲಾ ಬಿಡುಗಡೆಯಾಗಿದೆ. ಈ ಹಾಡು ಚಿತ್ರದ ಜೀವಾಳ ಎಂದು ಹೇಳಲಾಗುತ್ತಿದ್ದು ಸಂಗೀತ ನಿರ್ದೇಶಕ ಎಸ್ ತಮನ್ ಅವರ ಸಂಗೀತದಲ್ಲಿ ಮೂಡಿಬಂದಿದೆ.
ಯುವರತ್ನ ಚಿತ್ರದ ಆರಂಭಕ್ಕೆ ರಚನೆಯಾದ ಮೊದಲ ಹಾಡು ಇದಾಗಿದ್ದು ಚಿತ್ರದ ಇಡೀ ಕಥೆ ಈ ಹಾಡಿನ ಮೂಲಕ ಮುಂದುವರಿಯುತ್ತದೆ. ಪಾಠಶಾಲಾ ಹಾಡು ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಪರಿಣಾಮವನ್ನುಂಟುಮಾಡಲಿದೆ. ಅದು ರಾಷ್ಟ್ರಗೀತೆಯಂದು ನಾನು ಭಾವಿಸುತ್ತೇನೆ. ಇದೊಂಥರಾ ಬ್ಲಾಕ್ ಕಾಫಿಯಿದ್ದಂತೆ. ಪ್ರತಿಬಾರಿ ಕೇಳಿದಾಗಲೂ ಮನಸ್ಸನ್ನು ಪ್ರಫುಲ್ಲಗೊಳಿಸುತ್ತದೆ ಎನ್ನುತ್ತಾರೆ ಸಂಗೀತ ನಿರ್ದೇಶಕ ಎಸ್ ತಮನ್.
ನಾನು ಬೇಸರವಾದಾಗಲೆಲ್ಲಾ ಈ ಹಾಡನ್ನು ಕೇಳುತ್ತೇನೆ, ಇದರಿಂದ ಹೊಸ ಚೈತನ್ಯ ಪಡೆಯುತ್ತೇನೆ ಎಂದು ತಮನ್ ಹೇಳುತ್ತಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಗೀತೆಗಿದ್ದು ವಿಜಯ್ ಪ್ರಕಾಶ್ ಹಾಡಿದ್ದಾರೆ. ಈ ಚಿತ್ರವು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದರೂ, ಈ ಹಾಡು ಐದು ಭಾಷೆಗಳಲ್ಲಿ ಹೊರಬರಲಿದೆ. ವಿಶಾಲ್ ಮಿಶ್ರಾ ಹಿಂದಿ ಮತ್ತು ತೆಲುಗು ಆವೃತ್ತಿಗಳಿಗೆ ಧ್ವನಿ ನೀಡಿದ್ದರೆ, ವಿಜಯ್ ಯೇಸುದಾಸ್ ಇದನ್ನು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಹಾಡಿದ್ದಾರೆ.
ಇದು ಪ್ರತಿಯೊಬ್ಬರಿಗೂ ಬೇರೆ ಭಾಷೆಯವರಿಗೂ ಇಷ್ಟವಾಗಬಹುದಾದ ಹಾಡಾಗಿರುವುದರಿಂದ ನಾವು 5 ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮನಸ್ಸಿಗೆ ಬಹಳ ಬೇಗನೆ ತಟ್ಟಬಹುದಾದ ಗೀತೆ ಇದಾಗಿದ್ದು ಕಾಲೇಜಿನ ಹಳೆಯ ದಿನಗಳನ್ನು ಮರುನೆನಪಿಸುವಂತೆ ಮಾಡಬಲ್ಲದು ಎಂದು ವಿವರಿಸುತ್ತಾರೆ.
ಯುವರತ್ನ ಚಿತ್ರದ ಪವರ್ ಆಫ್ ಯೂತ್, ನೀನಾದೆ ನಾ ಮತ್ತು ಊರಿಗೊಬ್ಬ ರಾಜ ಹಾಡು ಈಗಾಗಲೇ ಬಿಡುಗಡೆಯಾಗಿದ್ದು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. (kpc)
