

ಇನ್ನೊಂದು ತಿಂಗಳಲ್ಲಿ ಬಿಎಸ್ ವೈ, ಬಿವೈಆರ್, ಈಶ್ವರಪ್ಪ ಹಗರಣ ಬಯಲು: ಶಾಸಕ ಸಂಗಮೇಶ್
ಇನ್ನೊಂದು ತಿಂಗಳಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹಗರಣ, ಅಕ್ರಮ ಆಸ್ತಿಗಳ ವಿವರಗಳನ್ನು ಬಯಲು ಮಾಡುವುದಾಗಿ…

ಸಿದ್ದಾಪುರ: ತಾಲೂಕಿನ ಕೋಲಶಿರ್ಸಿ ಶ್ರೀ ಮಾರಿಕಾಂಬಾ ದೇವಾಲಯದ ನೂತನ ಕಟ್ಟಡ ಅಡಿಗಲ್ಲು ಕಾರ್ಯಕ್ರಮ ನಡೆಯಿತು.
ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಶಿರಸಿಯ ಅಭಿಯಂತರ ಮನು ಹೆಗಡೆ ಮಾರ್ಗದರ್ಶನ ದಲ್ಲಿ ಆಡಳಿತ ಮಂಡಳಿಯವರೇ ಕಟ್ಟಡ ನಿರ್ಮಾಣ ಮಾಡಲಿದ್ದಾರೆ.
ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಣ್ಣತಮ್ಮ ನಾಯ್ಕ, ಉಪಾಧ್ಯಕ್ಷ ರಾಮಚಂದ್ರ ಈರಾ ಕೊಠಾರಿ,ಕಾರ್ಯದರ್ಶಿ ಆನಂದ ಹುಲಿಯಾ ನಾಯ್ಕ ಸನ್ನು ಗೌರವಾಧ್ಯಕ್ಷರುಗಳಾದ ಸೋಮನಾಥ ಎಸ್ ಗೌಡರ್, ಗಣಪತಿ ಮಂಜುನಾಥ ಹೆಗಡೆ, ಮಾದೇವ ಲಕ್ಷ್ಮಣ ನಾಯ್ಕ, ಮಂಜುನಾಥ ಎಸ್ ಶೇಟ್, ಫಂಡು ಕರಿಯ ನಾಯ್ಕಸೆರಕ್ಕಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ ಆರ್ ವಿನಾಯಕ, ಸದಸ್ಯ ಗೋವಿಂದ ಬಿ ಕೋರೆ, ಆಡಳಿತ ಕಮಿಟಿ ಸದಸ್ಯರು, ಕಟ್ಟಡ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಇನ್ನೊಂದು ತಿಂಗಳಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹಗರಣ, ಅಕ್ರಮ ಆಸ್ತಿಗಳ ವಿವರಗಳನ್ನು ಬಯಲು ಮಾಡುವುದಾಗಿ ಸದನದಿಂದ ಅಮಾನತಾಗಿರುವ ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ್, ಸಿಎಂ, ರಾಘವೇಂದ್ರ, ಈಶ್ವರಪ್ಪ ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ಇವರ ವರ್ತನೆ ಕಂಡು ಶಿವಮೊಗ್ಗ ಜಿಲ್ಲೆಯ ಜನರೇ ಅಸಹ್ಯ ಪಡುತ್ತಿದ್ದಾರೆ. ನಮ್ಮ ಮೇಲೆ, ಕುಟುಂಬದ ಮೇಲೆ ಕೇಸ್ ಹಾಕಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸ್ಪೀಕರ್ ನಮಗೆ ನ್ಯಾಯ ಕೊಡಿಸಬೇಕು. ಯಡಿಯೂರಪ್ಪ ಸೂಚನೆ ಮೇರೆಗೆ ಸದನದಿಂದ ನನ್ನನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಇವರ ಹಗರಣ ಹೊರಬಂದು ಬಿಜೆಪಿ ಸರ್ಕಾರ ಪತನಗೊಳ್ಳಲಿದೆ. ಬಿಜೆಪಿ ಸರ್ಕಾರ ಪತನಗೊಂಡ ಬಳಿಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದರು.
ಬಿಎಸ್ ವೈ, ರಾಘವೇಂದ್ರ, ಈಶ್ವರಪ್ಪ ಹಗರಣ ನನಗೆ ಗೊತ್ತಿದೆ. ಇನ್ನೊಂದು ತಿಂಗಳಿನಲ್ಲಿ ಅವರ ಹಗರಣ ಬಿಡುಗಡೆ ಮಾಡಿ, ಅಕ್ರಮ ಆಸ್ತಿ ದಾಖಲೆ ಬಿಡುಗಡೆ ಮಾಡುತ್ತೇನೆ. ನಾನು ಬ್ಲಾಕ್ಮೇಲ್ ಮಾಡುವ ರಾಜಕಾರಣಿಯಲ್ಲ. ಹಿಂದೆ ಎಷ್ಟು ಆಸ್ತಿಯಿತ್ತು? ಈಗ ಎಷ್ಟು ಆಸ್ತಿಯಿದೆ? ಎಂಬುದೆಲ್ಲವನ್ನೂ ನಾನು ಬಯಲು ಮಾಡುತ್ತೇನೆ. ಇನ್ನೂ ಮೂರು ತಿಂಗಳಷ್ಟೇ ಈ ಸರ್ಕಾರದ ಆಯಸ್ಸು ಎಂದು ಭವಿಷ್ಯ ನುಡಿದರು.
ಈ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರಿಗೆ ಬೆಲೆಯಿಲ್ಲದಂತಾಗಿದೆ. ಸರ್ಕಾರವನ್ನು ಹೆಣ್ಣುಮಕ್ಕಳು ಅನುಮಾನದಿಂದ ನೋಡುವಂತಾಗಿದೆ. ವಿಧಾನಸೌಧದ ಪಾವಿತ್ರ್ಯತೆ ಹಾಳಾಗಿದೆ. ಸತ್ಯವಂತರಾಗಿದ್ದರೆ ಆರು ಸಚಿವರು ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆಯೇನಿತ್ತು? ಏಕೆ ಇವರೆಲ್ಲ ಹೆದರಿಕೊಂಡು ಮಾಧ್ಯಮಗಳ ಸುದ್ದಿಪ್ರಸಾರಕ್ಕೆ ತಡೆ ತಂದಿದ್ದಾರೆ. ಇವರುಗಳನ್ನು ಜನರು ತಮ್ಮ ಸೇವೆ ಮಾಡಲಿ ಎಂದು ಆರಿಸಿ ಕಳುಹಿಸಿದ್ದರೆ, ಇವರೆಲ್ಲ ದುಡ್ಡು ಮಾಡುವುದು, ಮಜಾ ಮಾಡುವುದನ್ನು ಮಾಡುತ್ತಿದ್ದಾರೆ. ಭದ್ರಾವತಿಯಲ್ಲಿ ಬಿಜೆಪಿ ಮಾಡಿದ ಅನ್ಯಾಯವನ್ನು ಖಂಡಿಸಿ ಮಂಗಳವಾರ ಎಸ್.ಪಿ.ಕಚೇರಿ ಎದುರು ಪ್ರತಿಭಟಿಸಿ, ಮುತ್ತಿಗೆ ಹಾಕುವುದಾಗಿ ಹೇಳಿದರು. (kpc)

