

ಜಡೇಶ ಕೆ ಹಂಪಿ ನಿರ್ದೇಶಿಸುತ್ತಿರುವ ಗುರು ಶಿಷ್ಯರು ಸಿನಿಮಾದಲ್ಲಿ ಶರಣ್ ಗೆ ನಟಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಜಡೇಶ ಕೆ ಹಂಪಿ ನಿರ್ದೇಶಿಸುತ್ತಿರುವ ಗುರು ಶಿಷ್ಯರು ಸಿನಿಮಾದಲ್ಲಿ ಶರಣ್ ಗೆ ನಟಿ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಅವತಾರ ಪುರುಷ್ ನಾಯಕನ ಜೊತೆ ಜೆಂಟಲ್ ಮ್ಯಾನ್ ಬೆಡಗಿ ಮೊದಲ ಬಾರಿ ನಟಿಸುತ್ತಿದ್ದಾರೆ. ಇದೊಂದು ಸ್ಪೋರ್ಟ್ ಕಥೆ ಕಾಮಿಡಿ ಸಿನಿಮಾವಾಗಿದೆ, ನಿಶ್ವಿಕಾ ಶೀಘ್ರದಲ್ಲೇ ಸೆಟ್ ಗೆ ಸೇರಲಿದ್ದಾರೆ.
90ದ ದಶಕದ ಮಧ್ಯಭಾಗದ ಕಥೆ ಹೆಣೆಯಲಾಗಿದೆ, 1995 ಲಾಂಗ್ ಲಾಂಗ್ ಎಗೋ ಎಂಬ ಟ್ಯಾಗ್ ಲೈನ್ ಇದೆ. ಪಿಟಿ ಮಾಸ್ಟರ್ ಮತ್ತು ವಿದ್ಯಾರ್ಥಿಗಳ ನಡುವಿನ ಘರ್ಷಣೆ ಕುರಿತ ಸಿನಿಮಾ ಇದಾಗಿದೆ. ಹೀಗಾಗಿ ವಿಶ್ಹಲ್ ಪ್ರಮುಖ ಪಾತ್ರ ವಹಿಸುತ್ತದೆ. ಶರಣ್ ಒಡೆತನದ ಲಡ್ಡೂ ಸಿನಿಮಾಸ್ ಜೊತೆಗೆ ತರುಣ್ ಸುಧೀರ್ ಅವರ ಕ್ರಿಯೇಟಿವ್ಜ್ ಚಿತ್ರ ನಿರ್ಮಾಣ ಮಾಡುತ್ತಿದೆ. ರಾಬರ್ಟ್ ಡೈರೆಕ್ಟರ್ ತರುಣ್ ಸುಧೀ ರ್ ನಿರ್ಮಾಣದ ಮೊದಲ ಸಿನಿಮಾ ಇದಾಗಿದೆ.
ರಾಮಾರ್ಜನ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಿಶ್ವಿಕಾ ನಾಯ್ಡು, ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. (kpc)
