
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಗುತ್ತಿರುವ ಹಡಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ ಎಂಬ ಬಿಜೆಪಿ ಟ್ವೀಟ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾಂಗ್ರೆಸ್ ಆರೋಪ-ಪ್ರತ್ಯಾರೋಪಗಳು ಮುಂದುವರಿದಿವೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಾಗುತ್ತಿರುವ ಹಡಗಿಗೆ ಮಾಜಿ ಸಿಎಂ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ ಎಂಬ ಬಿಜೆಪಿ ಟ್ವೀಟ್ ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ‘ಜಗತ್ತೇ ನಿಮ್ಮ ಬೃಹನ್ನಾಟಕ ನೋಡುತ್ತಿದೆ. ಆದರೂ, ಬೇರೆ ಕಡೆ ಬೆರಳು ತೋರಿಸುವ ನಿಮ್ಮ ಲಜ್ಜೆಗೇಡಿತನಕ್ಕೆ ಏನೆನ್ನಬೇಕು! ಒಬ್ಬ ಯತ್ನಾಳ್‌ರನ್ನ, ಮತ್ತೊಬ್ಬ ಈಶ್ವರಪ್ಪನವರನ್ನ ಸಂಬಾಳಿಸಲಾಗದ ನಿಮ್ಮ ಹಡಗು ಅರ್ಧ ಮುಳುಗಿದೆ. ಉಪಚುನಾವಣೆ ಬಳಿಕ ಪೂರ್ತಿ ಮುಳುಗಲಿದೆ ಕಳೆದ ಬಾರಿಯೇ ರಾಜ್ಯ ಕಂಡಿಲ್ಲವೇ ನಿಮ್ಮ ಘನಂದಾರಿ ಆಡಳಿತವನ್ನು ಎಂದು ಆಕ್ರೋಶವ್ಯಕ್ತಪಡಿಸಿದೆ.
ಇನ್ನೂ ಮಸ್ಕಿಯಲ್ಲಿ ಹಣ ಹಂಚುತ್ತಿರುವ ಆರೋಪ ಮಾಡಿರುವ ಕಾಂಗ್ರೆಸ್, ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್‌ನಂತೆ! ಹಣದಿಂದ ಶಾಸಕರನ್ನೂ ಖರೀದಿಸುತ್ತದೆ, ಮತಗಳನ್ನೂ ಖರೀದಿಸುತ್ತದೆ. ಮಸ್ಕಿ ಕ್ಷೇತ್ರದ ಮತದಾರರಿಗೆ ನಂದೀಶ್ ರೆಡ್ಡಿ ಹಣ ಹಂಚಿದ ವಿಡಿಯೋ ಇದು. ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ್ದು ಜಗತ್ತಿಗೆ ತಿಳಿದರೂ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಕಣ್ಣಿಗೆ ಕಾಣಲಿಲ್ಲವೇ? ಕಂಡರೂ ಜಾಣ ಕುರುಡೇ?” ಎಂದು ಪ್ರಶ್ನಿಸಿದೆ. (kpc)
