ಸಮಾಜಮುಖಿ ವರದಿಗಳ ಫಲಶೃತಿ

ಶೀರಲಗದ್ದೆ ಜಲಪಾತದ ರಸ್ತೆಗೆ 4ಲಕ್ಷ, ಅರೆಹಳ್ಳ ಮತ್ತು ಹಕ್ಕಲಮನೆ ರಸ್ತೆಗಳಿಗೆ ಅನುದಾನ ಮಂಜೂರಿ
ಸಿದ್ಧಾಪುರ ತಾಲೂಕಿನ ಶೀರಲಗದ್ದೆ ಜಲಪಾತದ ರಸ್ತೆಗೆ ಶಾಸಕರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿ ಮತ್ತು ಗವಿನಸರ, ಹಕ್ಕಲಮನೆ ಹಾಗೂ ಅರೆಹಳ್ಳ ರಸ್ತೆಗಳಿಗೆ ಅನುದಾನ ನೀಡಬೇಕೆಂದು ತಾ.ಪಂ.ಸ್ಥಾಯಿ ಸಮೀತಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಸಂಬಂಧಿಸಿದವರಿಗೆ ಮನವಿ ಮಾಡಿರುವ ವರ್ತಮಾನ ಸಮಾಜಮುಖಿ ಪ್ರತಿನಿಧಿಗೆ ದೊರೆತಿದೆ.
ಸಮಾಜಮುಖಿ ಪತ್ರಿಕೆ ಮತ್ತು ಸುದ್ದಿಪೋರ್ಟಲ್ ನಲ್ಲಿ ತಾಲೂಕಿನ ತ್ಯಾಗಲಿ ಶೀರಲಗುಂಡಿ ಜಲಪಾತದ
ರಸ್ತೆ ಅವ್ಯವಸ್ಥೆ ಬಗ್ಗೆ ಬರೆದು ಗಮನ ಸೆಳೆದಿತ್ತು.
ಸಮಾಜಮುಖಿ ವರದಿಗಳ ನಂತರ ಸಿದ್ಧಾಪುರದ ಮಾಧ್ಯಮ ಪ್ರತಿನಿಧಿಗಳು ಈ ಜಲಪಾತ ಮತ್ತು ಶಿವರಾತ್ರಿಗುಂಡಿಗೆ ಹೋಗುವ ರಸ್ತೆಗಳ ದುವ್ರ್ಯವಸ್ಥೆಗಳ ಬಗ್ಗೆ ವರದಿ ಮಾಡಿದ್ದರು. ಈ ವರದಿಗಳ ನಂತರ ಶಾಸಕರ ಅನುದಾನದಲ್ಲಿ 4 ಲಕ್ಷ ರೂಪಾಯಿಗಳನ್ನು ಮಂಜೂರುಮಾಡಲು ಶಾಸಕರು ಅನುಮತಿ ನೀಡಿರುವುದಾಗಿ ಮಹಾಬಲೇಶ್ವರ ಹೆಗಡೆ ತಿಳಿಸಿದ್ದಾರೆ.
ಸಮಾಜಮುಖಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಸಮಾಜಮುಖಿಯಲ್ಲಿ ಶೀರಲಗುಂಡಿ ಜಲಪಾತ, ಅರೆಹಳ್ಳದ ರಸ್ತೆ, ಗವಿನಸರದ ಸಂಪರ್ಕ ರಸ್ತೆ, ಹಕ್ಕಲಮನೆ-ಕಿಲಾರ ರಸ್ತೆಗಳ ಬಗ್ಗೆ ಪ್ರಕಟವಾದ ವರದಿಗಳನ್ನು ಗಮನಿಸಿದ್ದೇನೆ. ಅರೆಹಳ್ಳ ದೇವಿಸರ ರಸ್ತೆಗೆ ಸಂಸದರ ಅನುದಾನ ಮಂಜೂರಿಯಾಗಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಆ ಕಾಮಗಾರಿ ನಡೆದಿಲ್ಲ.
ಹಕ್ಕಲಮನೆ-ಕಿಲಾರ, ಗವಿನಗುಡ್ಡ ರಸ್ತೆ ಕುಸಿದು ಸಂಪರ್ಕಕ್ಕೆ ತೊಂದರೆಯಾಗಿರುವ ಮಾಹಿತಿ ಇದೆ. ಅಲ್ಲಿ ಗ್ರಾಮ ಪಂಚಾಯತ್ ನಿಂದ ಅನುದಾನ ನೀಡಲಾಗಿದೆ. ಅನಿವಾರ್ಯವಾದರೆ ಆ ಸಂಪರ್ಕ ರಸ್ತೆಗೆ ಬೇರೆ ಅನುದಾನಕ್ಕೆ ಪ್ರಯತ್ನಿಸುತ್ತೇವೆ. ಗವಿನಸರ ದುರ್ಗಮ ಪ್ರದೇಶವಾಗಿದ್ದು ಅಲ್ಲಿ ಕೂಡಾ ಪಂಚಾಯತ್ ಮಿತಿ ಅನುದಾನ ಲಭ್ಯತೆ ಆಧಾರದಲ್ಲಿ ಪರಿಗಣಿಸುತ್ತೇವೆ.
ಗವಿನಸರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಪೂರೈಸಲಾಗಿತ್ತು, ರಸ್ತೆ, ನೀರು ಸೇರಿದಂತೆ ಅನಿವಾರ್ಯ ಮೂಲಭೂತ ಅಗತ್ಯಗಳನ್ನು ಪೂರೈಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.

ಆನವಟ್ಟಿ ಸೇರ್ಪಡೆ ಬೇಡ,ಬನವಾಸಿ ತಾಲೂಕು ಬೇಕು

ಶಿರಸಿ ಬನವಾಸಿ ಹೋಬಳಿಯನ್ನು ಯೋಜಿತ ಆನವಟ್ಟಿ ತಾಲೂಕಿಗೆ ಸೇರಿಸುವ ಪ್ರಸ್ಥಾಪ ಕೈ ಬಿಡಬೇಕು ಮತ್ತು ಬನವಾಸಿ ಪ್ರತ್ಯೇಕ ತಾಲೂಕು ರಚನೆ ಮಾಡಬೇಕು ಎಂದು ಆಗ್ರಹಿಹಿಸಲು ಇಂದು ಸ್ಥಳಿಯರು ಬನವಾಸಿ ಬಂದ್ ಮೂಲಕ ಪ್ರತಿಭಟನೆ ನಡೆಸಿದರು.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು...

bhaarat jodo… ಯುವ ಸಂಘ ನೋಂದಣಿಗೆ ಶಾಸಕರ ಮನವಿ

ಸಿದ್ದಾಪುರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ರ ಮಹತ್ವಾಕಾಂಕ್ಷೆ ಭಾರತ್ ಜೋಡೋ ಯುವ ಸಂಘಗಳನ್ನು ತಕ್ಷಣ ನೊಂದಣಿ ಮಾಡಿಸಿಕೊಂಡು ಸರ್ಕಾರದ ಅನುದಾನ ಸದುಪಯೋಗ ಪಡಿಸಿಕೊಳ್ಳುವಂತೆ ಶಿರಸಿ-ಸಿದ್ದಾಪುರ...

ಶ್ರೇಷ್ಠ ಶಿಕ್ಷಕ ವಿರೂಪಾಕ್ಶಪ್ಪ ಮೇಟಿ

ಕೆ.ಪಿ.ಸಿ.ಸಿ ಯಿಂದ ನೀಡಲಾಗುವ ಮಾಜಿ ಪ್ರಧಾನಿ ಶ್ರೀ ರಾಜೀವ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಉಪನ್ಯಾಸಕ ವಿರುಪಾಕ್ಷಪ್ಪ ಮೇಟಿ ಸಿದ್ದಾಪುರ,ಸೆ,೩:-...

kolsirsi vss issue…part -04 ನಾನೇ ಹೊಣೆ ನಾನೇ ಜವಾಬ್ದಾರಿ ಎಂದ ಸಿಇಒ ಮಾಳವಿ….

ಕೋಲ ಶಿರಸಿ vss ನ ಪ್ರಕರಣ ಹಗರಣದ ಸ್ವರೂಪ ಪಡೆದಿದೆ… ಈ ಅಪರಾ ತಪರಾ ರೂವಾರಿ ಸಿಇಒ/ ಸೆಕ್ರೆಟರಿ ಎಂಬುದು ನಿರ್ವಿವಾದ. ಈ ಬಗ್ಗೆ...

ಕೋಲಶಿರಸಿ vss ಆಡಳಿತ ಸಮೀತಿ & ಸಿಇಒ ವಿರುದ್ಧ ಇಲಾಖೆಗೆ ದೂರು

ಸಿದ್ದಾಪುರ ತಾಲೂಕಿನ ಕೋಲಶಿರಸಿ vss ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ಹಿಂದೆ ಇರುವ ಹಾಲಿ ಆಡಳಿತ ಮಂಡಳಿ & ಸಿಇಒ/ ಕಾರ್ಯದರ್ಶಿ ಗಳ...

Latest Posts

ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ..! ಜಾಗೃತೆ..

ರೈತರ ಅನುಕೂಲಕ್ಕಿರುವ ಗ್ರಾಮೀಣ ಸೇವಾ ಸಹಕಾರಿ ಸಂಘಗಳು ಮುಳುಗುತ್ತಿವೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಆದರೆ ಸಹಕಾರಿ ಕ್ಷೇತ್ರ ನಿಯಂತ್ರಿಸುವವರು ತಮ್ಮ ಅನುಕೂಲಕ್ಕೆ ಸಂಘಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರ ಜನಪರ ಎನ್ನುವ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಸಿದ್ದಾಪುರ ಕೋಲಶಿರ್ಸಿ ಸೇವಾ ಸಹಕಾರಿ ಸಂಘದ ಬಹುಕೋಟಿ ಹಗರಣದ ನಂತರ ಒಂದೊಂದೇ ಗುಟ್ಟುಗಳು ರಟ್ಟಾಗತೊಡಗಿವೆ. ಸಿದ್ದಾಪುರದ ಪ್ರಮುಖ ಸಹಕಾರಿಗಳು,...

Recommended For You

About the Author: Kanneshwar Naik

Leave a Reply

Your email address will not be published. Required fields are marked *