

ಯಕ್ಷಗಾನ ರಂಗಭೂಮಿ, ಸಂಸ್ಕೃ ತ ಸಾರಸ್ವತ ಲೋಕದ ವಿದ್ವಾಂಸರು ಪ್ರೋ.ಎಂ.ಎ.ಹೆಗಡೆ ವಿವಿಧ ಕ್ಷೇತ್ರದ ಸಾಧಕರು.ಜೀವನದ ಒಡನಾಡಿಯಾಗಿ ಮಾರ್ಗದರ್ಶನ ಮಾಡುತ್ತಿದ್ದವರು. ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯ ಮಾದರಿ ಆಗಿದೆ. – ಕೇಶವ ಹೆಗಡೆ ಕೊಳಗಿ. ಯಕ್ಷಗಾನ ಭಾಗವತರು.
ಸಿದ್ದಾಪುರ
ತಾಲೂಕಿನ ಮುಠ್ಠಳ್ಳಿ ಸಮೀಪದ ಹಳಿಯಾಳ ಸಹಿಪ್ರಾ ಶಾಲಾ ಆವಾರದಲ್ಲಿ ಡ್ರೀಮ್ ಪ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಹಳಿಯಾಳ-ಕುರುವಂತೆ-ಕಿಲಾರ-ತುಂಬೆಕೊಡ್ಲು ಮತ್ತಿತರ ಗ್ರಾಮಸ್ಥರ ಸಹಕಾರದೊಂದಿಗೆ ಯುಗಾದಿ ಸಂಭ್ರಮ-2021ರ ಪ್ರಯುಕ್ತ ಮಂಗಳವಾರ ನಡೆದ ವಿವಿಧ ಸಾಂಸ್ಕೃ ತಿಕ ಕಾರ್ಯಕ್ರಮ ಜನಮನ ರಂಜಿಸಿತು.
ಯಕ್ಷ-ಗಾನ-ನಾಟ್ಯ-ವೈಭವ: ಹಿಮ್ಮೇಳದ ಭಾಗವತಿಕೆಯಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಮಹಿಳಾ ಭಾಗವತರಾದ ಚಿಂತನಾ ಹೆಗಡೆ ಮಾಳ್ಕೋಡ, ಶ್ರೀರಕ್ಷಾ ಹೆಗಡೆ ಸಿದ್ದಾಪುರ ಇವರು ಉತ್ತಮವಾಗಿ ಕಲಾಸಕ್ತರನ್ನು ರಂಜಿಸಿದರು.ಮದ್ದಳೆಯಲ್ಲಿ ಶಶಿ ಆಚಾರ್ಯ ಉಡುಪಿ ಹಾಗೂ ಚಂಡೆಯಲ್ಲಿ ಗಣೇಶ ಗಾಂವಕರ ಸಹಕರಿಸಿದರು.ಯಕ್ಷ ನಾಟ್ಯದಲ್ಲಿ ಯುವರಾಜ್ ನಾಯ್ಕ ಹಳಿಯಾಳ ಹಾಗೂ ಮೈತ್ರಿ ಗೌಡ ಸಂಪೇಸರ ಉತ್ತಮವಾಗಿ ಅಭಿನಯಿಸಿದರು.
ನಂತರ ನಡೆದ ರಸಮಂಜರಿ ಮತ್ತು ಮಿಮಿಕ್ರಿಯಲ್ಲಿ ಗೀತಾ ಬೈಂದೂರು, ದೇವರಾಜ್ ಹಾನಗಲ್,ರಾಜೇಶ್ ಸಾಗರ್, ಶಿವಪ್ರಕಾಶ ಶಿರಸಿ, ದಯಾನಂದ ಬಿಳಗಿ, ನವೀನ್ ಕುಮಾರ್ ಸುಗಾವಿ ಹಾಗು ನಾಟ್ಯಂ ಡಾನ್ಸ್ ಶಿರಸಿ ತಂಡದಿಂದ ಸೂಪರ್ ಡಾನ್ಸ್ ಧಮಾಕಾ, ನಂದನ ನಾಯ್ಕ ಅವರಿಂದ ಗೊಂಬೆ ಡಾನ್ಸ್ ಹಾಗೂ ಪ್ರೇತ ನೃತ್ಯ ಪ್ರದರ್ಶನಗೊಂಡಿತು.
ಉದ್ಘಾಟನೆ: ಯುಗಾದಿ ಸಂಭ್ರಮ-2021 ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಕೆ.ಟಿ.ನಾಯ್ಕ ಹಳಿಯಾಳ ಉದ್ಘಾಟಿಸಿದರು. ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ದೇವರು ಗೌಡ ಕುರವಂತೆ, ಗಜಾನನ ನಾಯ್ಕ ಹಳಿಯಾಳ ಇತರರಿದ್ದರು.
ನಾಗರಾಜ್, ಮಹೇಂದ್ರ, ಧನಂಜಯ ಮತ್ತಿತರರು ಕಾರ್ಯಕ್ರಮ ನಿರ್ವಹಿಸಿದರು

ಜಸ್ಟೀಸ್ ಕೆ. ಎಸ್. ಹೆಗಡೆ ಚಾರಿಟೇಬಲ ಹಾಸ್ಪಿಟಲ್ ದೆರಳಕಟ್ಟೆ ಮಂಗಳೂರು ಹಾಗೂ ಲಯನ್ಸ್ ಕ್ಲಬ ಸಿದ್ದಾಪುರ, ಗ್ರೀನ್ ವ್ಯಾಲಿ ಆರ್ಗೆನಿಕ್ ಸ್ಪೈಸಸ ಮತ್ತು ತಾಲೂಕಿನ ಸೇವಾ ಸಹಕಾರಿ ಸಂಘಗಳ ಆಶ್ರಯದಲ್ಲಿ. ಆರೋಗ್ಯ ಕಾರ್ಡ್
ಮಾನ್ಯರೇ,
ದಿನಾಂಕ: 20-04-2021 ರಿಂದ 22-04-2021ರ ವರೆಗೆ ಕೆ.ಎಸ್. ಹೆಗಡೆ ಆಸ್ಪತ್ರೆ ಮಂಗಳೂರ ರವರು ಸಿದ್ದಾಪುರ ತಾಲೂಕಿನ ಈ ಕೆಳಗೆ ಕಾಣಿಸಿದ ದಿನಾಂಕದಂದು “ಆರೋಗ್ಯ ಕಾರ್ಡ್” ನೋಂದಣಿ ಮಾಡಲು ಆಗಮಿಸುತ್ತಿದ್ದು ತಾವೆಲ್ಲರೂ ಇದರ ಪ್ರಯೋಜನ ಪಡೆಯಬೇಕಾಗಿ ವಿನಂತಿ. ಆಧಾರ್ ಕಾರ್ಡ್, ರೇಶನ್ ಕಾರ್ಡ್‍ಗಳನ್ನು ತರಬೇಕು ಹಾಗೂ ಕರೋನಾ ಮಾರ್ಗಸೂಚಿ ಖಡ್ಡಾಯವಾಗಿ ಪಾಲಿಸುವದು.
ದಿನಾಂಕ ವೇಳೆ ಕಾರ್ಡ್‍ವಿತರಿಸುವ ಸ್ಥಳ ಸೇ.ಸ.ಸಂಘಗಳು
20-04-2021
ಮಂಗಳವಾರ ಬೆಳಿಗ್ಗೆ 10 ಗಂಟೆ ಬಿಳಗಿ
ಸೇ.ಸ.ಸಂಘ ಕಾರ್ಯಲಯ. ಬಿಳಗಿ, ಕ್ಯಾದಗಿ, ಇಟಗಿ, ಲಂಬಾಪುರ.
21-04-2021
ಬುಧವಾರ ಬೆಳಿಗ್ಗೆ 10 ಗಂಟೆ ಸಿದ್ದಾಪುರ
ಗ್ರೀನ ವ್ಯಾಲಿ ಆರ್ಗೆನಿಕ್
ಕಾರ್ಯಾಲಯ ಇಂದಿರಾ ನಗರ ಸಿದ್ದಾಪುರ. ಸಿದ್ದಾಪುರ, ಕಾನಗೋಡ, ಶಿರಳಗಿ.
ಮದ್ಯಾಹ್ನ 3 ಗಂಟೆ ಬಿದ್ರಕಾನ
ಸೇ.ಸ.ಸಂಘ ಕಾರ್ಯಲಯ. ಬಿದ್ರಕಾನ, ಕೋಲಸಿರ್ಸಿ, ಹಾರ್ಸಿಕಟ್ಟಾ.
22-04-2021
ಗುರುವಾರ ಬೆಳಿಗ್ಗೆ 10-30ಕ್ಕೆ ಕಂಚಿಕೈ
ಸೇ.ಸ.ಸಂಘ ಕಾರ್ಯಾಲಯ. ಕಂಚಿಕೈ, ಹೆಗ್ಗರಣೆ, ಹೆರೂರು (ನೆಲೆಮಾವ).
ವಿಶೇಷ ಸೂಚನೆ:
ಯಾವುದೇ ಫಲಾನುಭವಿಗಳು ಸದರಿ ದಿವಸ ಹತ್ತಿರದ ಸೇವಾ ಸಹಕಾರಿ ಸಂಘದಲ್ಲಿ ಆರೋಗ್ಯ ಕಾರ್ಡ್ ನೋಂದಣಿಯನ್ನು ಮಾಡಿಸಿಕೊಳ್ಳಬಹುದು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಕೊರೋನಾದಿಂದ ಸಾವು
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ (73) ಬೆಂಗಳುರಿನಲ್ಲಿ ನಿಧನರಾದರು.

ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ (73) ಬೆಂಗಳೂ ರಿನಲ್ಲಿ ನಿಧನರಾದರು.

ಹೆಗಡೆಯವರಿಗೆ ಏಪ್ರಿಲ್ 13ರಂದು ಕೊರೋನಾ ದೃಢವಾಗಿತ್ತು.
ಮೃತರಿಗೆ ಪತ್ನಿ, ಪುತ್ರಿ ಹಾಗೂ ಅಪಾರ ಬಂಧುಮಿತ್ರರಿದ್ದಾರೆ.
ಯಕ್ಷಗಾನದ ಅರ್ಥಧಾರಿ, ಪ್ರಸಂಗಕರ್ತರೂ ಆಗಿದ್ದ ಹೆಗಡೆ ಎರಡನೇ ಅವಧಿಗೆ ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಇವರು ಯಕ್ಷಗಾನ ಕಲಾವಿದರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯ್ ಕ್ರಮಗಳನ್ನು ರೂಪಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಹೆಗಡೆ ಅವರ ನಿಧನಕ್ಕೆ ಕನ್ನಡ ಹಾಗೂ ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಸಂತಾಪ ಸೂಚಿಸಿದ್ದಾರೆ,
“ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಹಿರಿಯ ವಿದ್ವಾಂಸರಾದ ಪ್ರೊಫೆಸರ್ ಎಂ. ಎ. ಹೆಗಡೆ ಅವರು ನಿಧನರಾದ ಸುದ್ದಿ ತಿಳಿದು ಆಘಾತವಾಗಿದೆ. ಈ ನಾಡು ಕಂಡ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಪ್ರೊ. ಎಂ. ಎ. ಹೆಗಡೆ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದು ದುರಾದೃಷ್ಟಕರ.
“ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದರು, ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು, ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.
“ಸರಳ ಹಾಗೂ ನೇರ ನಡವಳಿಕೆಗೆ ಹೆಸರಾಗಿದ್ದ ಅವರ ನಿಧನ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ನಷ್ಟ, ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. (kpc)
