ಜಾದಳದ ಪೆಟ್ಟಿಗೆಗೆ ಬೀಳಲಿದೆ ಆರೆಸ್ಸೆಸ್‌ ನ ಕೊನೆ ಮೊಳೆ!

ಹೇಮಂತ್‌ ಸೊರೆನ್‌ ಬಂಧನ, ಬಿ.ಜೆ.ಪಿ.ಯೇತರ ಇತರ ಪಕ್ಷಗಳ ಮುಖಂಡರ ಮನೆ ಮೇಲೆ ಆದಾಯ ತೆರಿಗೆ, ಜಾರಿ ನಿರ್ಧೇಶನಾಲಯದ ದಾಳಿ ಸೇರಿದಂತೆ ರಾಷ್ಟ್ರೀಯತೆ, ದೇಶಭಕ್ತಿಯ ಮುಖವಾಡದ ಠಕ್ಕರ ಪರಿವಾರ ಈಗ ಇಂಡಿಯಾದಲ್ಲಿ ಆಡುತ್ತಿರುವ ಆಟಕ್ಕೆ ದುರಂತ ಅಂತ್ಯವನ್ನಂತೂ ಕಾಣಲಿದ್ದಾರೆ. ಈ ಭಯದ ವಾತಾವರಣದ ಮಧ್ಯೆ ಜಾದಳದ ದಳವಾಯಿಗಳು ಸಂಘಿ ಠಕ್ಕರ ದುಷ್ಟಕೂಟವನ್ನು ಸೇರದೆ ಉಳಿಗಾಲವುಂಟೆ?

ನಿರೀಕ್ಷೆಯಂತೆ ಕುಮಾರಸ್ವಾಮಿಯವರ ಭಯ ಎನ್.ಡಿ.ಎ.ಗೆ ವರವಾಗಿದೆ. ಈ ನಡುವೆ ಸಿ.ಎಂ. ಇಬ್ರಾಹಿಂ ತಂಡ ಮತಾಂಧರನ್ನು ಒಪ್ಪದೆ ಜಾದಳದಿಂದ ಹೊರಹೋಗಲು ಕಾಯುತ್ತಿದೆ.

ಕುಮಾರಸ್ವಾಮಿ ಎನ್.ಡಿ.ಎ ಸೇರದಿದ್ದರೆ ಜೈಲು ಸೇರುತ್ತಾರೆ ಕುಮಾರಸ್ವಾಮಿ ಮೋದಿ ಪರಿವಾರ ಸೇರಿದರೆ ಜಾದಳದ ಜಾತ್ಯಾತೀತರು ಹೊರಹೋಗುತ್ತಾರೆ. ಈ ಉಭಯ ಸಂಕಟದಲ್ಲಿ ಫೇಕುದೊಣ್ಣೆಯಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಅನಿವಾರ್ಯವಾಗಿ ಎನ್.ಡಿ. ಎ. ಸೇರಿದ್ದಾರೆ. ಮೂರು ಕ್ಷೇತ್ರಗಳಿಗೆ ಅವಕಾಶ ಕೇಳಿ ಮೈತ್ರಿ ಮಾಡಿಕೊಂಡಿರುವ ಸ್ವಾಮಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲೋಕಸಭಾ ಚುನಾವಣೆಯ ಉಸ್ತುವಾರಿಗಳನ್ನು ನೇಮಿಸಿದ್ದಾರೆ!

ಈ ನಾಟಕ ಒಂಡೆದೆ ನಡೆಯುತ್ತಿದ್ದರೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಜಾದಳದ ಬಿ.ಜೆ.ಪಿ.ಯ ಮೈತ್ರಿಯನ್ನು ವಿರೋಧಿಸುತ್ತಿರುವ ಸಮಾನಮನಸ್ಕರು ಸಭೆ ನಡೆಸಿ ಜಾದಳದ ಹೊಸ ನಡೆಗೆ ನಮ್ಮ ವಿರೋಧ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಜಾದಳವಿದ್ದಾಗ ವಿಭಜನೆಯಾಗುತ್ತಿದ್ದ ಅಹಿಂದ ಮತಗಳು ಈ ಬಾರಿ ಕಾಂಗ್ರೆಸ್‌ ಪರವಾಗಿ ಕ್ರೋಢೀಕರಣವಾಗಿ ಬಿ.ಜೆ.ಪಿ. ಸೋಲುವ ಅಪಾಯದ ನಡುವೆ ಅಹಂಕಾರದ ಸಂಘಿಗಳು ಉತ್ತರ ಕನ್ನಡ ದಕ್ಷಿಣ ಕನ್ನಡ ಸೇರಿದಂತೆ ಕೆಲವೆಡೆ ತಮಗೆ ಎದುರಾಳಿಗಳೇ ಇಲ್ಲ ಎಂದು ಬೀಗುತಿದ್ದಾರೆ.

ಬಲವಂತದ ಮೈತ್ರಿ ಗೆ ಒಪ್ಪಿರುವ ಕುಮಾರಸ್ವಾಮಿ ತಮ್ಮ ಶಕ್ತಿ ಇರುವ ಕೆಲವು ಕ್ಷೇತ್ರಗಳಲ್ಲಿ ಬಿ.ಜೆ.ಪಿ.ಗೆ ಬೆಂಬಲಿಸಿದರೂ ಕಾರ್ಯಕರ್ತರ ಹೊಂದಾಣಿಕೆ ಕಷ್ಟ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಳಜಗಳ, ಒಂದೇ ಜಾತಿಯ ಸ್ಫರ್ಧಿಗಳ ಭಾರದಿಂದ ಕುಸಿಯುತ್ತಿರುವ ಬಿ.ಜೆ.ಪಿ. ದಿನಕ್ಕೊಂದು ಅಭ್ಯರ್ಥಿಗಳ ಹೆಸರು ತೇಲಿ ಬಿಡುತ್ತಿದೆ. ಅದರಲ್ಲಿ ಹರಿಪ್ರಕಾಶ್‌ ಕೋಣೆಮನೆ, ಅಜಿತ್‌ ಹನುಮಕ್ಕನವರ್‌, ಚಕ್ರವರ್ತಿ ಸೂಲಿಬೆಲೆ ಪ್ರಮುಖರು. ಈ ಮೂವರೂ ಗೆಲ್ಲುವ ಅಭ್ಯರ್ಥಿಗಳಲ್ಲ ಎನ್ನುವುದು ಬಹಿರಂಗ ಗುಟ್ಟು. ಇವರ ಮಧ್ಯೆ ನಿರ್ಮಲಾ ಸೀತಾರಾಮನ್‌, ಜೈಶಂಕರ್‌ ಕೂಡಾ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾಗಬಹುದು ಎನ್ನಲಾಗುತ್ತಿದೆ.!

ಇಲ್ಲಿ ಬಿ.ಜೆ.ಪಿ. ಬ್ರಾಹಣರ ತುಷ್ಟೀಕರಣದಲ್ಲಿ ಮುಳುಗಿ ಬಹುಸಂಖ್ಯಾತರ ವಿರೋಧಿಯಾಗಿ ಬಣಗಳಿಂದ ಹೋಳಾಗುತ್ತಿದೆ. ಜಾದಳದ ಹತ್ತನ್ನೆರಡು ಮುಖಂಡರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಮತಾಂಧ ಬಿ.ಜೆ.ಪಿ. ಜೊತೆ ನಮ್ಮ ಹೊಂದಾಣಿಕೆ ಇಲ್ಲ ಎಂದು ಸಮಾನಮನಸ್ಕರ ಕೂಟದ ಮೂಲಕ ಹೋರಾಟಕ್ಕಿಳಿದಿದ್ದಾರೆ. ಇದು ಜೆ.ಡಿ.ಎಸ್.‌ ಬಿ.ಜೆ.ಪಿ.ಯ ಅಪವಿತ್ರ ಮೈತ್ರಿಯ ವಿದ್ಯಮಾನವಾದರೆ ಕಾಂಗ್ರೆಸ್‌ ನಲ್ಲಿ ನಾಯಕರ ಮೇಲಾಟದಿಂದ ಮಹಿಳೆಯರಿಗೆ ಅವಕಾಶ ಎನ್ನಲಾಗುತ್ತಿದೆ.

ಇದು ಬರೀ ಉತ್ತರ ಕನ್ನಡದ ದುಸ್ಥಿತಿಯಲ್ಲ ರಾಜ್ಯದ ಬಹುತೇಕ ಕಡೆ ಮೋದಿ ಅಲೆಯಲ್ಲಿ ಗೆಲ್ಲುತ್ತೇವೆನ್ನುವ ಮೋದಿ ಭಟ್ಟಂಗಿಗಳು ಜನರ ಭಾವನೆ, ಆಶೋತ್ತರಗಳ ವಿರೋಧಿಯಾಗಿದ್ದಾರೆ. ಕಾಂಗ್ರೆಸ್‌ ನ ಗ್ಯಾರಂಟಿಗಳ ಫಲಾನುಭವಿಗಳು ಬಿ.ಜೆ.ಪಿ. ದೇಶಪ್ರೇಮದ ಕಪಟ ನಾಟಕಕ್ಕಿಂತ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಮತ ಎನ್ನುತಿದ್ದಾರೆ. ಈ ಸ್ಥಿತಿಯಲ್ಲಿ ಪ್ರವಾಹದೊಂದಿಗೇ ಈಜುವ ನಾಯಕರು ಕಾಂಗ್ರೆಸ್‌, ಬಿ.ಜೆ.ಪಿ.ಗಳಲ್ಲಿ ಮತ ಬಾಹುಳ್ಯದ ಬಹುಸಂಖ್ಯಾತ ಸಮೂದಾಯಗಳಿಗೆ ಟಿಕೇಟ್‌ ತಪ್ಪಿಸಿಬಿಟ್ಟರೆ ಆಗ ಹಾಳೂರಿಗೆ ಉಳಿದವನೇ ಗೌಡ ಎನ್ನುವ ಸ್ಥಿತಿ ನಿರ್ಮಾಣವಾಗುತ್ತದೆ. ಈ ವಾತಾವರಣ ನೋಡಿದರೆ ಈಗ ಚಾಲ್ತಿಯಲ್ಲಿರುವ ಹೆಸರುಗಳಿಗೆ ಟಿಕೇಟ್‌ ಕೊಡದೆ ಯಾರ್ಯಾರನ್ನೋ ತಂದು ನಿಲ್ಲಿಸಿದರೆ ಆಗ ಚುನಾವಣೆಯ ಮಜಾ ಇರದೆ ಯಾರೋ ಒಬ್ಬರು ಆಯ್ಕೆಯಾಗುತ್ತಾರೆ. ಈ ಯಾರೋ ಒಬ್ಬರು ಆಯ್ಕೆಯಾಗಲು ಜಾದಳ ಬಲಿಯಾಗಬೇಕಾಗಿರುವುದು ಮಾತ್ರ ಈ ಬಾರಿ ಉತ್ತರ ಕನ್ನಡ ಮತ್ತು ರಾಜ್ಯದ ದುರಂತ ಎನ್ನಲಾಗುತ್ತಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

ಭಟ್ಕಳ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 8 ಮಂದಿ ನೀರುಪಾಲು, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆ ಚಿಪ್ಪು ತೆಗೆಯಲು ಹೋದ ಎಂಟು ಮಂದಿ ಜಲಸಮಾಧಿಯಾಗಿರುವ ದಾರುಣ ಘಟನೆ ನಡೆದಿದ್ದು ಇಬ್ಬರು ನಾಪತ್ತೆಯಾಗಿದ್ದಾರೆ....

forest land issue… ಅರಣ್ಯ ಭೂಮಿ ಹಕ್ಕು: ಅಧಿಕಾರಿಗಳ ನಿರ್ಲಕ್ಷ, ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಲು ಎಚ್ಚರಿಕೆ!

ಸಿದ್ದಾಪುರ ತಾಲೂಕು ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅರಣ್ಯ ಭೂಮಿ ಸಾಗುವಳಿ ಹಕ್ಕು ಅರ್ಜಿ ಪಡೆಯುವ ಪ್ರಕ್ರೀಯೆ ನಾಮಕಾವಾಸ್ಥೆ ನಡೆದಿದ್ದು ಇದಕ್ಕೆ ೧೫ ದಿವಸಗಳ...

ಮುಂಗಾರು ಪೂರ್ವ ಬರ ಸಿಡಿಲು….. ಕೋಟ್ಯಾಂತರ ಹಾನಿ! ಎಚ್ಚೆತ್ತ ಜಿಲ್ಲಾಡಳಿತ…

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸೇರಿದಂತೆ ಮಲೆನಾಡಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಅಪಾರ ಹಾನಿ ಮಾಡಿದೆ. ಒಣ ಬಿಸಿಲಿನಿಂದ ಕಂಗೆಟ್ಟ ಜನಜೀವನಕ್ಕೆ ಮಳೆ...

ರಮಾನಂದ ನಾಯಕ ನಿಧನ ಗಣ್ಯರ ಕಣ್ಣೀರು, ನಾಳೆ ಅಂತ್ಯಕ್ರೀಯೆ

ಉತ್ತರ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿ ಮೊದಲ ಜಿಲ್ಲಾ ಪರಿಷತ್‌ ಅಧ್ಯಕ್ಷ ರಮಾನಂದ ನಾಯಕ ಇಂದು ಅಸ್ತಂಗತರಾದರು. ಅಂಕೋಲಾ ತಾಲೂಕಿನ ಹಿಚ್ಕಡದ ಪ್ರತಿಷ್ಠಿತ ಕುಟುಂಬದ...

Latest Posts

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ವಿಧಾನ ಸೌಧ ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಜೂನ್ 3...

Recommended For You

About the Author: Kanneshwar Naik

Leave a Reply

Your email address will not be published. Required fields are marked *