
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನಗಳಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡಿದ್ದಾರೆ.

ಉಪ ಚುನಾವಣೆ: ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ, ಕೊರೋನಾದಿಂದ ಮತದಾರರ ನೀರಸ ಮತದಾನ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಮತದಾನ ಗಣನೀಯ ಇಳಿಕೆಯಾಗಿದೆ. ಆದರೆ ಮಸ್ಕಿ ಕ್ಷೇತ್ರದಲ್ಲಿ ಮಾತ್ರ(ಪರಿಶಿಷ್ಟ ಪಂಗಡಕ್ಕೆ ಮೀಸಲು) ಶೇಕಡಾ 77.48ರಷ್ಟು ನಿನ್

ಬೆಳಗಾವಿ/ಕಬುರಗಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಸೋಂಕು ಬೆಳಗಾವಿ ಲೋಕಸಭೆ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಮೇಲೆ ಪರಿಣಾಮ ಬೀರಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಮತದಾನ ಗಣನೀಯ ಇಳಿಕೆಯಾಗಿದೆ. ಆದರೆ ಮಸ್ಕಿ ಕ್ಷೇತ್ರದಲ್ಲಿ ಮಾತ್ರ(ಪರಿಶಿಷ್ಟ ಪಂಗಡಕ್ಕೆ ಮೀಸಲು) ಶೇಕಡಾ 77.48ರಷ್ಟು ನಿನ್ನೆ ಮತದಾನವಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿ ಡಾ ಕೆ ಹರೀಶ್ ಕುಮಾರ್, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶೇಕಡಾ 54.02ರಷ್ಟು ಮತದಾನವಾಗಿದೆ. ಬೆಳಗಾವಿಯ 8 ತಾಲ್ಲೂಕುಗಳಲ್ಲಿ ಗೋಕಾಕ್ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇಕಡಾ 60.47ರಷ್ಟು ಮತದಾನವಾಗಿದ್ದು ಬೆಳಗಾವಿ ಉತ್ತರ ಭಾಗದಲ್ಲಿ ಅತಿ ಕಡಿಮೆ ಶೇಕಡಾ 42.88ರಷ್ಟು ಮತದಾನವಾಗಿದೆ.
ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಉಲ್ಬಣವಾಗಿರುವುದರಿಂದ ಜನರು ತಮ್ಮ ಮನೆ ಬಿಟ್ಟು ಹೊರಬರಲು ಭಯಪಡುತ್ತಿದ್ದಾರೆ. ಬೆಳಗಾವಿಯಲ್ಲಿ ನಿನ್ನೆ 188 ಪ್ರಕರಣಗಳು ದಾಖಲಾಗಿದ್ದು, ಮೊನ್ನೆ ಶುಕ್ರವಾರ 120 ಪ್ರಕರಣಗಳು ದಾಖಲಾಗಿದ್ದರೆ, ಬೀದರ್‌ನಲ್ಲಿ ನಿನ್ನೆ 359 ಮತ್ತು ಶುಕ್ರವಾರ 326 ಪ್ರಕರಣಗಳು ದಾಖಲಾಗಿವೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆ 91 ಮತ್ತು ಶುಕ್ರವಾರ 108 ಪ್ರಕರಣಗಳು ದಾಖಲಾಗಿವೆ. ಬೆಳಗಾವಿ ಕ್ಷೇತ್ರದ ಅನೇಕ ಭಾಗಗಳಲ್ಲಿ ಬೀದಿಗಳು ನಿರ್ಜನವಾಗಿದ್ದವು, ಸಂಜೆ 5ರ ಹೊತ್ತಿಗೆ ಒಟ್ಟಾರೆ ಸರಾಸರಿ ಮತದಾನ ಕೇವಲ 47.6 ರಷ್ಟಿತ್ತು. ಬಸವಕಲ್ಯಾಣದಲ್ಲಿ ನಿನ್ನೆ ಸಂಜೆ ಶೇಕಡಾ 52.4 ಮತ್ತು ಮಸ್ಕಿಯಲ್ಲಿ ಶೇಕಡಾ 62.28 ರಷ್ಟಾಗಿತ್ತು.
ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರ ಪುತ್ರ ಅಮರನಾಥ ಜಾರಕಿಹೊಳಿ ಕೊರೋನಾ ಪಾಸಿಟಿವ್ ಆಗಿದ್ದು, ಗೋಕಾಕ್ ನ ಸ್ಥಳೀಯ ಮತಗಟ್ಟೆಯಲ್ಲಿ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಿದರು. ಹೆಚ್ಚಿನ ಮತದಾರರನ್ನು ಆಕರ್ಷಿಸುವ ಕ್ರಮಗಳ ಹೊರತಾಗಿಯೂ, ಬಸವಕಲ್ಯಾಣದಲ್ಲಿ ಉಪಚುನಾವಣೆ ನಿರೀಕ್ಷೆಯಂತೆ ವೇಗವನ್ನು ಗಳಿಸಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಹೈ-ವೋಲ್ಟೇಜ್ ಪ್ರಚಾರವನ್ನು ಗಮನಿಸಿದರೆ, ರಾಜಕೀಯ ವಿಶ್ಲೇಷಕರು ಮತದಾರರ ಹೆಚ್ಚಿನ ಮತದಾನವನ್ನು ನಿರೀಕ್ಷಿಸಿದ್ದರು. ಇಲ್ಲಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಶೇ 64.56 ರಷ್ಟು ಮತದಾನವಾಗಿತ್ತು.
ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ, ಸಾಯಂಕಾಲ ಹೊತ್ತಿಗೆ ಮತದಾರರು ಮತಗಟ್ಟೆಗಳಿಗೆ ಬರುವ ಸಂಖ್ಯೆ ಹೆಚ್ಚಾಯಿತು. ಇಲ್ಲಿ 2018 ರ ಚುನಾವಣೆಯಲ್ಲಿ ಶೇಕಡಾ 68.97 ರಷ್ಟು ಮತದಾನವಾಗಿದ್ದರೆ, ಬೆಳಗಾವಿಯಲ್ಲಿ ಮತದಾನದ ಕೊನೆಯಲ್ಲಿ, ಗೋಕಾಕ್ ಪಟ್ಟಣದ ಬೀದಿ ಮೂಲೆಯಲ್ಲಿ ಮಸಾಲಾ ದೋಸೆಯನ್ನು ಸವಿಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಮತದಾರರ ಕಳಪೆ ಮತದಾನದಿಂದಾಗಿ ಯಾವುದೇ ಸಂದೇಹವಿಲ್ಲದೆ ಗೆಲ್ಲುತ್ತೇನೆ ಎಂದು ಹೇಳಿದರು.
ತಮ್ಮ ಪತಿ ದಿವಂಗತ ಸುರೇಶ್ ಅಂಗಡಿ ಅವರು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಕರ್ನಾಟಕಕ್ಕೆ ತಂದ ಯೋಜನೆಗಳು ಗೆಲ್ಲಲು ಸಹಾಯವಾಗಲಿದ್ದು ತಾವು ಉಪ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಮಂಗಳಾ ಅಂಗಡಿ ಕೂಡ ವ್ಯಕ್ತಪಡಿಸಿದ್ದಾರೆ.. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ. ಬಸವಕಲ್ಯಾಣ, ಮಸ್ಕಿ ಸ್ಥಾನಗಳನ್ನು ಗೆಲ್ಲುವುದರ ಜೊತೆಗೆ, ಬೆಳಗಾವಿಯಲ್ಲಿ ಐದನೇ ನೇರ ಜಯವನ್ನು ಬಿಜೆಪಿ ಮುನ್ಸೂಚನೆ ನೀಡಿದರೆ, ಕಾಂಗ್ರೆಸ್ ಕೂಡ ಮೂರು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದು, ಜನಪ್ರಿಯ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕಿಳಿಸಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನಗಳಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡಿದ್ದಾರೆ.
ಈ ಬಗ್ಗೆ ಭಾನುವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಬಂಗಾಳದಲ್ಲಿ ಕೊವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ನನ್ನ ಎಲ್ಲ ಸಾರ್ವಜನಿಕ ರ‍್ಯಾಲಿಗಳನ್ನು ರದ್ದು ಮಾಡುತ್ತಿದ್ದೇನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಬೃಹತ್ ರ‍್ಯಾಲಿಗಳನ್ನು ಆಯೋಜಿಸಿದಾಗ ಉಂಟಾಗುವ ಪರಿಣಾಮದ ಬಗ್ಗೆ ಎಲ್ಲ ರಾಜಕೀಯ ನಾಯಕರು ಗಂಭೀರವಾಗಿ ಚಿಂತಿಸಬೇಕು ಎಂದು ಹೇಳಿದ್ದಾರೆ.

https://imasdk.googleapis.com/js/core/bridge3.452.0_en.html#goog_231429894
8 ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಮೊದಲ 5 ಹಂತದ ಚುನಾವಣೆ ವೇಳೆ ಬಿಜೆಪಿ, ಟಿಎಂಸಿ ಸೇರಿದಂತೆ ಎಲ್ಲ ಪಕ್ಷಗಳು ಆರೋಗ್ಯ ಸಚಿವಾಲಯದ ಆದೇಶಿಸಿದ್ದ ಕೊವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಚುನಾವಣಾ ಪ್ರಚಾರ ನಡೆಸಿವೆ. ರಾಜಕೀಯ ಪಕ್ಷಗಳು ಬೃಹತ್ ರ‍್ಯಾಲಿ ಮತ್ತು ರೋಡ್ ಶೋಗಳನ್ನು ಆಯೋಜಿಸಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿವೆ. ಹೀಗಾಗಿ ಇಲ್ಲಿ ಸೋಂಕಿತರ ಹೆಚ್ಚಾಗುತ್ತಿದೆ ಎಂದು ಹೇಳಲಾಗಿದೆ.
ಅಂತೆಯೇ ದೇಶದಲ್ಲಿ ಕೊವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನುಳಿದ ಹಂತದ ಚುನಾವಣೆಗಾಗಿ ನಡೆಸುವ ಪ್ರಚಾರ ಕಾರ್ಯಕ್ರಮದ ಅವಧಿಗೆ ಚುನಾವಣಾ ಆಯೋಗ ಕತ್ತರಿ ಹಾಕಿದೆ. ಪ್ರತಿಯೊಂದು ಹಂತದ ಚುನಾವಣೆಯ ಪ್ರಚಾರ ಕಾರ್ಯಕ್ರಮಕ್ಕೆ 48 ಗಂಟೆಗಳ ಮೌನ ಅವಧಿಯನ್ನು 72 ಗಂಟೆಗಳಿಗೆ ವಿಸ್ತರಿಸಿ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಸ್ಟಾರ್ ಪ್ರಚಾರಕರು, ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಚುನಾವಣಾ ಪ್ರಚಾರದ ಮೇಳೆ ಕೊವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೂಲಕ ಕೊರೊನಾ ಸೋಂಕಿನ ಅಪಾಯವನ್ನು ಸ್ವಯಂ ಆಹ್ವಾನಿಸುವುದಲ್ಲದೆ ಇತರರಿಗೂ ಸೋಂಕು ಹರಡಲು ಕಾರಣವಾಗುತ್ತಿದ್ದಾರೆ ಎಂದು ಚುನಾವಣಾ ಆಯೋಗ ಗರಂ ಆಗಿತ್ತು.
ಹೀಗಾಗಿ ಸಂಜೆ 7ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಯಾವುದೇ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿಸಭೆಗಳಿಗೆ ಅನುಮತಿ ಇರುವುದಿಲ್ಲ ಎಂದು ಚುನಾವಣಾ ಆಯೋಗ ಆದೇಶಿಸಿದ್ದು, ಶುಕ್ರವಾರ ಸಂಜೆ 7ಗಂಟೆಯಿಂದಲೇ ಈ ಆದೇಶ ಜಾರಿಯಾಗಿದೆ. ಪಶ್ಚಿಮ ಬಂಗಾಳದಲ್ಲಿ ನಡೆಲಿರುವ 6,7 ಮತ್ತು 8ನೇ ಹಂತದ ಚುನಾವಣೆಗಾಗಿ ನಡೆಸುವ ರ‍್ಯಾಲಿ, ಸಾರ್ವಜನಿಕ ಸಭೆ, ಬೀದಿ ನಾಟಕ, ಬೀದಿ ಸಭೆ, ಬೈಕ್ ರ‍್ಯಾಲಿ ಅಥವಾ ಚುನಾವಣಾ ಪ್ರಚಾರಕ್ಕಾಗಿ ಗುಂಪು ಸೇರುವಿಕೆಯ ಮೌನ ಅವಧಿಯನ್ನು (Silence period) 72 ಗಂಟೆಗಳವರೆಗೆ ವಿಸ್ತರಿಸಲಾಗಿದೆ. (kpc)
