ಕಂಬಳಿಗೊಂದು ಕಾಲ ಇದುವೆ ಕೊನೆಗಾಲ!

ಮಲೆನಾಡು, ರೈತ, ಮಳೆ ಕಂಬಳಿಗಳಿಗೆಲ್ಲಾ ಬಾದರಾಯಣ ಸಂಬಂಧಗಳಿವೆ!
ಹಿಂದೊಂದು ಕಾಲವಿತ್ತು ಆಗ ಮಳೆಯೆಂದರೆ ಮಲೆನಾಡು, ಮಲೆನಾಡೆಂದರೆ ಮಳೆಗಾಲ ಎನ್ನುವಂತಿದ್ದ ಕಾಲ.
ಈಗ ಕಾಲ ಬದಲಾಗಿದೆ. ಆದರೂ ಕಂಬಳಿಜೊತೆಗಿನ ನಂಟಿನ ಗಂಟು ಇನ್ನೂ ಸಂಪೂರ್ಣ ಸಡಿಲವಾಗಿಲ್ಲ. ಹಿಂದೆ ಶಾಲಾಮಕ್ಕಳು, ಜನಸಾಮಾನ್ಯರು ಎಲ್ಲದಕ್ಕೂ ಕಂಬಳಿ ಬಳಸುತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಶ್ರಮಿಕರು ಕೆಲಸಕ್ಕೆ ಕಂಬಳಿ, ಕಂಬಳಿ ಕೊಪ್ಪೆ ಬಳಸಿದರೆ ಉಳಿದ ಬಿಳಿಕಾಲರ್ ಮನುಷ್ಯರು ಚಳಿ ತಡೆಯಲು ಕಂಬಳಿಯನ್ನು ಹೊದಿಕೆಯಾಗಿ ಬಳಸುತ್ತಾರೆ.
ಇಂಥ ಕಂಬಳಿ ತಯಾರಿಸುವ, ಕರೆ ಕಟ್ಟುವ, ಮಾರುವ ರೀತಿ-ನೀತಿಗಳೆಲ್ಲಾ ಬದಲಾಗಿದ್ದು ಈಗಿನ ವಿಶೇಶ.
ಹಿಂದೆ ಬಯಲುಸೀಮೆಯ ಜನ ಕಂಬಳಿಯನ್ನು ತಾವೇ ತಯಾರಿಸಿಕೊಂಡು ಮಲೆನಾಡಿಗೆ ಮಾರಾಟಕ್ಕೆ ಬರುತಿದ್ದರು. ಈಗ ಬಯಲುಸೀಮೆಯ ಕಂಬಳಿಮಾಡುವವರ ಕೈಗಳ ಕೆಲಸವನ್ನು ಯಂತ್ರ ಕದ್ದಿದೆ. ಯಂತ್ರದಿಂದ ತಯಾರಾದ ಕಂಬಳಿಗಳನ್ನು ಮಾರುವ ಮಾರುಕಟ್ಟೆಗಳ ರೀತಿ ಕೂಡಾ ಬದಲಾಗಿದೆ.
ಹಿಂದೆ ತಲೆಮೇಲೆ, ಸೈಕಲ್ ಮೇಲೆ ಕಂಬಳಿ ಹೊತ್ತು ಊರೂರು ತಿರುಗುತಿದ್ದವರ ಸಂಖ್ಯೆ ಈಗ ಕುಸಿದಿದೆ. ಅನಿವಾರ್ಯತೆಗೆ ಅದೇ ಕಸುಬು ಮುಂದುವರಿಸುವವರನ್ನು ಬಿಟ್ಟರೆ ಕಂಬಳಿ ಜೊತೆಗಿನ ವೃತ್ತಿ ಪ್ರೀತಿ,ಬದಲಾಗಿದೆ.
ಯಂತ್ರದಿಂದ ತಯಾರಾಗುವ ಹೊಸ ಕಂಬಳಿಗಳು ಮೊದಲಿನ ಮ್ಯಾನ್ ಮೇಡ್ ಕಂಬಳಿಗಳಷ್ಟು ಮಟ್ಟಸವಾಗಿರುವುದಿಲ್ಲ. ಮನುಷ್ಯ ನಿರ್ಮಿತ ಕಂಬಳಿಗಳಿಗೆ ಸಾವಿರ ಮೇಲ್ಪಟ್ಟು ಬೆಲೆಯಾದರೆ ಯಂತ್ರದಿಂದ ತಯಾರಾದ ಕಂಬಳಿಗಳಿಗೆ ಅವುಗಳಿಗಿಂತ ಸ್ಪಲ್ಪ ಕಡಿಮೆ ಬೆಲೆ. ಬಳಕೆ ವಿಚಾರದಲ್ಲಿ ಮನುಷ್ಯ ನಿರ್ಮಿತ ಕಂಬಳಿಗಳಿಗೇ ಹೆಚ್ಚು ಆಯುಷ್ಯ ಎನ್ನುವ ಕಂಬಳಿ ಮಾರುವ ಮಹಿಳೆ ಸಾಗರದ ಕಮಲ ಈಗ ಕಂಬಳಿ ಕಾಲ ಬದಲಾಗಿದೆ. ಮನುಷ್ಯ ತಯಾರಿಸಿದ ಕಂಬಳಿಗಳಿಗೆ ಬೆಲೆ ಹೆಚ್ಚು. ವ್ಯಾಪಾರದ ಸ್ಫರ್ಧೆಯಿಂದಾಗಿ ಮಾರಾಟಮಾಡುವವರು ಯಂತ್ರದಿಂದ ತಯಾರಾದ ಕಂಬಳಿಗಳನ್ನೇ ಮನುಷ್ಯ ನಿರ್ಮಿತ ಕಂಬಳಿಗಳು ಎಂದು ನಂಬಿಸುತ್ತಾರೆ.
ಆದರೆ ನಾವು ಪ್ರತಿವರ್ಷದ ನಿರಂತರ ಸಂಪರ್ಕದಲ್ಲಿರುವ ವ್ಯಾಪಾರಿಗಳು ನಾವು ಸುಳ್ಳು ಹೇಳಿ ಮಾರಾಟ ಮಾಡಲು, ಸುಳ್ಳು ಹೇಳಿ ಮೋಸಮಾಡಿ ಪಾರಾಗಲು ಸಾಧ್ಯವಿಲ್ಲ. ನಂಬಿಕೆಯ ಜೊತೆಗೆ ಪ್ರೀತಿ-ವಿಶ್ವಾಸದ ವ್ಯಾಪಾರ ನಮ್ಮದು ಎನ್ನುತ್ತಾರೆ.
ಕಂಬಳಿ ಮಾರಾಟದ ಜೊತೆಗೆ ನಾಜೂಕಾಗಿ ಕರೆ ಕಟ್ಟುವ ಕೆಲಸ ಮಾಡುವ ಇವರ ಕುಟುಂಬ ಒಂದು ಕಂಬಳಿ ಕರೆ ಕಟ್ಟಲು ಕನಿಷ್ಟ ನೂರರಿಂದ 200 ವರೆಗೆ ಪಡೆಯುತ್ತಾರೆ. ಹೀಗೆ ಮಲೆನಾಡಿನಲ್ಲಿ ಕಂಬಳಿ ಬಳಸುವವರು ಕರೆಕಟ್ಟದ ಕಂಬಳಿ ಬಳಸುವುದು ಕಡಿಮೆ. ಯಾಂತ್ರೀಕೃತ ಕಂಬಳಿಯಾಗಲಿ, ಮಾನವ ನಿರ್ಮಿತ ಕಂಬಳಿಯಾಗಲಿ ಕಂಬಳಿ ಕರೆ ಕಟ್ಟದರೆ ಅದರ ಆಯುಷ್ಯ ಹೆಚ್ಚು. ಕಂಬಳಿ ತಯಾರಿಕೆ, ಮಾರಾಟ, ಕಂಬಳಿ ಕರೆ ಕಟ್ಟುವ ಕಸುಬು ಮಾಡುವವರ ಸಂಖ್ಯೆ ಈಗ ಕ್ಷೀಣಿಸುತ್ತಿದೆ. ಜನರು ಮೊದಲು ಕಂಬಳಿ ಬಿಟ್ಟು ಇತರೆ ಹೊದಿಕೆ, ಸೂಡು ವಸ್ತುಗಳನ್ನು ಬಳಸುತಿದ್ದಿಲ.್ಲ ಈಗ ಕಾಲ ಬದಲಾಗಿದೆ ಕಂಬಳಿಯ ಜಾಗದಲ್ಲಿ ಬೇರೆ ವಸ್ತುಗಳು ಬಂದು ಕುಳಿತಿವೆ ಹಾಗಾಗಿ ಈ ವೃತ್ತಿ ಲಾಭದಾಯಕವಾಗಿಯೂ ಉಳಿದಿಲ್ಲ ಎನ್ನುತ್ತಾರೆ, ಈ ವೃತ್ತಿ ಅವಲಂಬಿತರು.
ಹೀಗೆ ಆಧುನಿಕತೆ ಕಂಬಳಿ, ಮಲೆನಾಡು, ಮಳೆ, ಕರೆಕಟ್ಟುವುದು, ಈ ವೃತ್ತಿಮಾಡುವವರ ನಡುವಿನ ಬಂಧವನ್ನು ಸಡಿಲ ಮಾಡುತ್ತಿದೆ. ಕಾಲ ಎಲ್ಲವನ್ನೂ ಬದಲಿಸುತ್ತಿದೆ. ಕಂಬಳಿ ಮಾಡುವವರು, ಮಾರುವವರ ಬದುಕು, ಭವಿಷ್ಯವನ್ನೂ ಕೂಡಾ.
ಹಾಗಾಗಿ ಮಲೆನಾಡಿನ ಕಂಬಳಿ ಮಾರಾಟಗಾರರು, ಬಳಕೆದಾರರ ನಡುವಿನ ಬಂಧ-ಸಂಬಂಧ ಸಡಿಲವಾಗುತ್ತಿದೆ.ಕಂಬಳಿ ಮರೆಯಾಗುತ್ತಿರುವ ಈ ಕಾಲದಲ್ಲಿ ಕಂಬಳಿಯ ಬೆಚ್ಚಗಿನ ನೆನಪಿಗೆ ಸಲಾಂ ಹೇಳಲೇಬೇಕು.

ಬುಧವಾರ ರಜೆ
ನಿರಂತರ ಮಳೆ,ಗಾಳಿ ಹಿನ್ನೆಲೆಯಲ್ಲಿ ಆ.7 ರ ಬುಧವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಲ್ಲಾ ಶಾಲೆ, ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಶಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಛೇರಿಯ ಪ್ರಕಟಣೆ ತಿಳಿಸಿದೆ.
ಈ ವಾರದ ಕೊನೆಗೆ ಮಳೆನಾಡು!
ಈ ವಾರದ ಪ್ರಾರಂಭದಿಂದ ಆರಂಭವಾದ ಮಳೆ ಅಬ್ಬರ ಮಲೆನಾಡಿನ ಜನರನ್ನು ದಿಕ್ಕೆಡಿಸಿದೆ. ಕೊಡಗು, ಚಿಕ್ಕಮಗಳೂರು,ಶೃಂಗೇರಿ, ತೀರ್ಥಹಳ್ಳಿ ಹೊಸನಗರ, ಸಾಗರ ಸಿದ್ಧಾಪುರ,ಶಿರಸಿ,ಯಲ್ಲಾಪುರ,ದಾಂಡೇಲಿ, ಬೆಳಗಾವಿ,ಗೋವಾ ಸೇರಿದಂತೆ ಮಲೆನಾಡು, ಪಶ್ಚಿಮಘಟ್ಟಗಳ ಅಡಿಯಲ್ಲಿ ಈ ವಾರಪೂರ್ತಿ ಮಳೆ ತನ್ನ ರುದ್ರ ನರ್ತನ ನಡೆಸಲಿದೆ. ಆ.8,9, ಕ್ಕೆ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದ್ದು ಈ ವ್ಯಾಪ್ತಿಯಲ್ಲಿ ರೆಡ್ ಅಲರ್ಟ್ ಘೋಶಿಸಬೇಕಿದೆ ಎಂದು ಹವಾಮಾನ ಇಲಾಖೆಯ ಉನ್ನತ ಮೂಲಗಳು ವರದಿ ಮಾಡಿವೆ.
ಮಲೆನಾಡು, ಕರಾವಳಿಯ ಜನತೆ ಈ ಸಮಯದಲ್ಲಿ ಎಚ್ಚರದಿಂದಿರಲು, ತಾಲೂಕು ಮತ್ತು ಜಿಲ್ಲಾಡಳಿತಗಳು ಸಿದ್ಧತೆಯಲ್ಲಿರಲು ಸೂಚಿಸಲಾಗಿದೆ.

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ...

O

siddapur nk – this week…..

ಸಿದ್ದಾಪುರ : ಮನೆಗೆ ನುಗ್ಗಿ ಮಹಿಳೆಯ ಚಿನ್ನದ ಸರ ಎಗರಿಸಿದ ಸರಗಳ್ಳ!!?* *ಸಿದ್ದಾಪುರ*: ಮಹಿಳೆಯೊಬ್ಬರ ಮಂಗಲಸೂತ್ರ ಕದ್ದ ಪ್ರಕರಣವೊಂದು ನಿನ್ನೆ ನಡೆದಿರುವ ಕುರಿತು ಉತ್ತರ...

ಕಡವೆ ಪ್ರಕರಣ: ಅಧಿಕಾರಿಗಳ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಿದ ಸಂತ್ರಸ್ತ!

ಹುಸೂರಿನ ಕಡವೆ ಪ್ರಕರಣ ಮರೆಮಾಚುವ ಮುನ್ನ ಸಿದ್ಧಾಪುರದ ತ್ಯಾಗಲಿ (ನಾಣಿಕಟ್ಟಾದಲ್ಲಿ)  ಯಲ್ಲಿ ಕಡವೆ ಭೇಟೆ ಮಾಡಿದ ಪ್ರಕರಣ ನಡೆದಿದ್ದು ಈ ಪ್ರಕರಣದಲ್ಲಿ ಆತುರದಿಂದ ವ್ಯಕ್ತಿಯೊಬ್ಬರನ್ನು...

ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ……

ಡಿಕೆಶಿ ಪದಗ್ರಹಣಕ್ಕೆ ಸಿದ್ಧತೆ; ವಿಧಾನಸೌಧದ ಸುತ್ತಮುತ್ತ ಇರುವ ಸರ್ಕಾರಿ ಕಚೇರಿಗಳಿಗೆ ಅರ್ಧದಿನ ರಜೆ ಘೋಷಣೆ ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ...

Latest Posts

kamalaakara bhandaari no more

ಸಮಾಜಮುಖಿ ಕೆಲಸಗಾರ, ಚಳುವಳಿಗಳ ಹಿತೈಷಿ, ಪುಸ್ತಕ ಪರಿಚಾರಕ, ಬಂಡಾಯ ಪ್ರಕಾಶನ ಮತ್ತು ಸಹಯಾನದ ಒಡನಾಡಿ ಕಮಲಾಕರ ಭಂಡಾರಿಯವರು ಈ ಬೆಳಿಗ್ಗೆ ಅಗಲಿದರೆಂದು ತಿಳಿಸಲು ತೀವ್ರ ದುಃಖವಾಗುತ್ತಿದೆ. ಅವರಿಗೆ ಅಂತಿಮ ನಮನಗಳು. ಅವರ ಆಶಯದಂತೆ ಮತ್ತು ಬಾಳಸಂಗಾತಿ ಪ್ರೀತಿಯ ಇನ್ನಕ್ಕ (ಇಂದಿರಾ) ಮಕ್ಕಳಾದ ಛಾಯಾ ಮತ್ತು ಅನಿಲ್ ಅವರ ಸದಾಶಯದಂತೆ ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ...

O

Recommended For You

About the Author: Kanneshwar Naik

Leave a Reply

Your email address will not be published. Required fields are marked *