wb lady tiger –

ಕಲ್ಕತ್ತಾದ ಬೀದಿಯಿಂದ ರೈಟರ್ಸ್
ಬಿಲ್ಡಿಂಗ್ ವರೆಗೆ ಹೋದ ದೀದಿ

    ಕಲ್ಕತ್ತಾದ ಕೊಳಚೆ ಪ್ರದೇಶದಲ್ಲೊಮ್ಮೆ ನಡೆಯುತ್ತಿದ್ದ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಕಬ್ಬಿಣದ ಸರಳೊಂದು ಈಕೆಯ ತಲೆ ಒಡೆಯುತ್ತದೆ.ಆ ಪೆಟ್ಟು ಹೇಗಿತ್ತೆಂದರೆ ಜ್ಯೋತಿ ಬಸುವಿನಂತಹ ಸ್ಟ್ರಾಂಗ್ ಮನುಷ್ಯನ ಇಪ್ಪತ್ತೈದು ವರುಷಗಳ ಮುಖ್ಯ ಮಂತ್ರಿತ್ವಕ್ಕೆ ಭೀಕರ ಸವಾಲಾಗಿ ಹೊರ ಹೊಮ್ಮುತ್ತದೆ.ಅಂದಿನಿಂದ ಜ್ಯೋತಿ ಬಸುರವರನ್ನು  ಕೆಳಗಿಳಿಸಲು ಈಕೆ ಮಾಡಿದ್ದ ಶಪತಗಳಿಗೆ ಲೆಕ್ಕವಿಲ್ಲ.ಈಕೆ ನಡೆಸಿದ ಅಸಂಖ್ಯಾತ ಹೋರಾಟಗಳು ಆರಂಭದಲ್ಲಿ  ಫಲ ನೀಡಲಿಲ್ಲ.ಆದರೀಕೆ ಭಯಗ್ರಸ್ಥಳಾದಳೆ? ಇಲ್ಲ! ಜ್ಯೋತಿ ಬಸುವೆಂಬ ದೈತ್ಯ ಶಕ್ತಿ  ನೇತೃತ್ವದ ಕಮ್ಯೂನಿಸ್ಟರ ಜೊತೆ ಕಾಂಗ್ರೆಸ್ ಪಕ್ಷ ಮಾಡಿಕೊಂಡ ರಹಸ್ಯ ಒಪ್ಪಂದಗಳು ಕಾಂಗ್ರೆಸ್ ಗೆ ಯಾವುದೇ ತೆರನಾದ ದೀರ್ಘ ಕಾಲೀನ ಉಪಯೋಗ ಅಸಾಧ್ಯವೆಂಬ ಸತ್ಯ ಮಮತಾ ಬ್ಯಾನರ್ಜಿಗೆ ಅರ್ಥವಾಗಲು ಸಮಯ ತೆಗೆದುಕೊಳ್ಳಲಿಲ್ಲ. ಆದರೆ  ಬಂಗಾಳದ ಸಾರಾ ಸಗಟು ಕಾಂಗ್ರೆಸ್ಸಿನ ಹಿರಿ ತಲೆಗಳು, ಕಮ್ಯೂನಿಸ್ಟರಿಂದ ಉಪ್ಪಿಟ್ಟು ಕಾಫಿಯಂತಹ ಅಲ್ಪ ಆಮಿಶಗಳಿಗೆ ಬಲಿಯಾಗಿ ಮಮತಾರನ್ನು ಹಣಿಯಲು ಬಹು ದೊಡ್ಡ ವ್ಯೂಹ ರಚನೆಯ ಭಾಗವಾಗುತ್ತಾರೆ.ಈ ಸಂಬಂಧ ಈಕೆಯನ್ನು ನೆಲ ಹಾಸಿಗೆಗೆ ತಳ್ಳಲು ಕಾಂಗ್ರೆಸ್ಸಿನ  ಹಿರಿ ತಲೆಗಳು ಕಾಂಗ್ರೆಸ್ಸೆಂಬ ಹೈಕಮಾಂಡನ್ನೇ ಗುರಾಣಿಯನ್ನಾಗಿ ಮಾಡಿಕೊಳ್ಳುತ್ತವೆ. ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗಲಾದರೂ  ಈಕೆ ಕಮ್ಯೂನಿಸ್ಟರ ವಿರುದ್ದ ಬಂಗಾಳದಲ್ಲಿ ನಡೆಸಿದ್ದ ಹೋರಾಟಗಳಿಗೆ ಸ್ವಲ್ಪ ಮಟ್ಟಿನ ಸ್ವಾತಂತ್ರ್ಯವನ್ನಾದರೂ ಕೊಟ್ಟಿದ್ದರು.ಆದರೆ ನರಸಿಂಹ ರಾವ್ ಕಾಲದಲ್ಲಿ ಮಮತಾ ಬ್ಯಾನರ್ಜಿಯೇ ಕಾಂಗ್ರೆಸ್ಸಿನ ವಿರೋಧ ಪಕ್ಷವೆಂದು ಬಿಂಭಿಸಲಾಯಿತು.ಬಂಗಾಳದ ಸಿದ್ದಾರ್ಥ ಶಂಕರ ರೇ,ಪ್ರಣವ್ ಮುಖರ್ಜಿ,ಘನಿಖಾನ್ ಚೌಧುರಿ ಮುಂತಾದ ಆ ಕಾಲದ ವಯೋವೃದ್ದರಾಗಿದ್ದ ಹಾಗೂ ಆರಾಮ ಖುರ್ಚಿಯಲ್ಲೆ ರಾಜಕಾರಣ ಮಾಡುತ್ತಾ ಕಾಲಾಯಾಪನೆಯಲ್ಲಿ ತೊಡಗುತ್ತಿದ್ದ ಕಾಂಗ್ರೆಸ್ಸಿನ ಈ ನಾಯಕರಿಗೆ ಮಮತಾರವರು ರೂಪಿಸುತ್ತಿದ್ದ ಹೋರಾಟಗಳು ವಿಲಕ್ಷಣವಾಗಿ ರಾಚಲಾರಂಭಿಸಿದವು.ಮೈ  ಕೈ ಕೊಳೆ ಮಾಡಿಕೊಳ್ಳದೆ ಗರಿ ಗರಿಯಾದ ಇಸ್ತ್ರಿಬಟ್ಟೆ ಹಾಳು ಮಾಡಿಕೊಳ್ಳದೆಯೆ ತಮಗೆ ಒಂದಲ್ಲಾ ಒಂದು ದಿನ ಅಧಿಕಾರ ಪ್ರಾಪ್ತಿಯಾಗೇ ಅಗುತ್ತದೆ ಎಂಬ ಭರವಸೆಯೊಂದಿಗೆ ಕುಳಿತು ಯೋಚಿಸಿತ್ತಿರುವಾಗಲೆ ಜ್ಯೋತಿ ಬಸುರವರ ಆಳ್ಳಿಕೆ ಎರಡು ದಶಕಗಳನ್ನು ಪೂರೈಸಿಯಾಗಿತ್ತು..ಮಮತಾ ಬ್ಯಾನರ್ಜಿ ಎಂಬ ಮಹಿಳೆಯ ವಿರುದ್ದ ಕಾಂಗ್ರೆಸ್ ನ ಬಂಗಾಲಿ ಬಾಬುಗಳು ದೆಹಲಿಯ ಹೈಕಮಾಂಡಿಗೆ ಹಚ್ಚಿದ್ದ ಚಾಡಿಯ ಕಿಡಿಗಳಿಂದ ಮಮತಾ ಒಂದೊಮ್ಮೆ ಕನಲಿ ಹೋದರೂ ಮರುಕ್ಷಣದಲ್ಲೆ ಸಿಡಿ ಗುಂಡಾಗಿ ಸಿಡಿಯತೊಡಗಿದರು.ಈಕೆಯಿಂದ ೧೯೯೮ ರಲ್ಲಿ ಹುಟ್ಟಿಕೊಂಡ ತೃಣಮೂಲ ಕಾಂಗ್ರೆಸ್ಸಿನಿಂದ ಬಂಗಾಳದಲ್ಲಿ ಮೊದಲು ಸಂಪೂರ್ಣ ನೆಲ ಕಚ್ಚಿದ್ದು ರಾಷ್ಟ್ರೀಯ ಕಾಂಗ್ರೆಸ್ ಎಂಬುದನ್ನು ನೆನಪಿಟ್ಟುಕೊಳ್ಳಬೇಕು .ಇದಾವುದಕ್ಕೂ ತಿರುಗಿ ನೋಡದ ಮಮತಾ ಸಿಪಿಎಂ ಆಳ್ವಿಕೆಯ ವಿರುದ್ದ ಒಂಟಿಯಾಗಿ ಆರಂಭದಲ್ಲಿ ಕಲ್ಕತ್ತಾದ ಬೀದಿಗಿಳಿದರು. ತನ್ನ ಅಸ್ತಿತ್ವ ಕ್ಕಾಗಿ  ಅನಗತ್ಯವಾಗಿ ಹೋರಾಟ ನಡೆಸುತ್ತಿದ್ದಾಳೆಂಬ  ಟೀಕೆಗೆ ಗುರಿಯಾಗಿದ್ದ ಮಮತಾರವರಿಗೆ ಸರಿ ಸಮಾನವಾಗಿ ನಿಲ್ಲ ಬಲ್ಲ ನಾಯಕನೇ ಕಾಂಗ್ರೆಸ್ಸಲ್ಲಿ ಇಲ್ಲವಾದಂತಹ ವಾತಾವರಣವೂ ಇತ್ತೆಂಬುದನ್ನು ದೆಹಲಿಯ ಹೈಕಮಾಂಡ್ ಆದಿಯಾಗಿ ಇಡೀ ಕಾಂಗ್ರೆಸ್ ಮರೆತಿತ್ತು. 

ಹೆಗಲ ಮೇಲೆ ಚೀಲ,ಹವಾಯಿ ಚಪ್ಪಲಿ ,ಸುಕ್ಕು ಸುಕ್ಕಾದ ಬಿಳಿಯ ಸೀರೆಯಲ್ಲೇ ಸರಳಾತಿ ಸರಳ ಜೀವನದ ಬಹುದೊಡ್ಡ ಮಾದರಿಯಾಗುತ್ತಲೆ ಒಳ್ಳೆಯ ಚಿತ್ರಕಲಾವಿದೆಯಾಗಿ ಈ ಮೊದಲೇ ಹೆಸರು ಮಾಡುತ್ತಾರೆ.ರವೀಂದ್ರ ಸಂಗೀತ,ಬಂಗಾಳದ ಶ್ರೆಷ್ಟ ಸಾಹಿತ್ಯ ಕೃತಿಗಳ ಬಗ್ಗೆ ಅಧಿಕಾರಯುತವಾಗಿ ಬರೆಯಬಲ್ಲ, ಮಾತಾಡಬಲ್ಲ. ಅಪರೂಪದ ರಾಜಕಾರಣಿಯಾಗಿ ಬಂಗಾಳವನ್ನು ಸೆಳೆಯುತ್ತಾರೆ.ತಾನು ಬರೆದ ಚಿತ್ರಪಟಗಳನ್ನು ಸಾವಿರಾರು ರೂಪಾಯಿಗಳಿಗೆ ಇಂದಿಗೂ ಬಿಕರಿಯಾಗಿಸುವಷ್ಟು ಶಕ್ತಿಯುತ ಕಲಾಕಾರಳಾಗುತ್ತಾರೆ..ಕವಿಯಾಗಿ ನೂರಾರು ಕವಿತೆಗಳನ್ನು ಬರೆದಿರುವ ಮಮತಾ ರವರು, My unforgatable memomories,struggle for existence,slaughter of democracy ಎಂಬ ಇವರು ಬರೆದ ಕೃತಿಗಳು ಇಂದಿಗೂ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಗಂಭೀರವಾಗಿ ಗುರುತಿಸಲ್ಪಡುತ್ತವೆ. ಮಾತ್ರವಲ್ಲ ,ಹತ್ತಾರು ಮುದ್ರಣಗಳನ್ನು ಕಂಡು ಮನೆ ಮಾತಾಗಿ ಈ ಕೃತಿಗಳು ಮೆರೆದಾಡಿವೆ ಎಂಬ ಸತ್ಯ ಇಪ್ಪತ್ತಾರು ಬಾರಿ ಮಮತಾರ ವಿರುದ್ದ ಮೊನ್ನಿನ ಚುನಾವಣೆಯಲ್ಲಿ ಪ್ರಚಾರ ನಡೆಸಿದ ಮೋದಿಗೆ ಗೊತ್ತಾಗುವುದೆ ಇಲ್ಲ! ಮಮತಾರ ಕವಿತಾ ಆಸಕ್ತಿ ಮೋದಿಗೆ ಗೊತ್ತಾಗಲಿಲ್ಲವೆಂದ ಮೇಲೆ ವ್ಯಾಪಾರವೇ ಪರಮ ಧರ್ಮವಾಗಿ ಸದಾ ಲಾಭ ನಷ್ಟದ ಬಗ್ಗೆಯೇ ಯೋಚಿಸುವ ಬಂಗಾಳದಲ್ಲಿ ಇಪ್ಪತ್ತೆಂಟು ಪ್ರಚಾರ ಸಭೆಗಳನ್ನುದ್ದೇಶಿಸಿ ಮಾತಾಡಿದ ಅಮಿತ್ ಶಾಗೇ ಗೊತ್ತಾದೀತೆ?
2007 ರಿಂದ 2011ರ ವರೆಗೆ ಈಕೆ ನಡೆಸಿದ್ದ ಹೋರಾಟಗಳು ಹೇಗಿದ್ದವೆಂದರೆ ಸಂಪೂರ್ಣ ತರಬೇತು ಪಡೆದು ಚುನಾವಣಾ ರಾಜಕಾರಣವನ್ನೆ ಅರೆದು ಕುಡಿದಿದ್ದ ಸಿಪಿಎಂ,ಸಿಪಿಐ ಕಾರ್ಯಕರ್ತರುಗಳೇ ಬೆವರು ಬೀಳಿಸುವಂತೆ ಮಾಡಿದ್ದವು..ಅಧಿಕಾರದ ತುಟ್ಟ ತುದಿಯಲ್ಲಿ ಅಜರಾಮರವೆಂಬ ಕಲ್ಪನೆಯಲ್ಲೆ ಇಪ್ಪತ್ತೇಳನೆಯ ವರುಷವನ್ನು ಮುಗಿಸಿದ್ದ ಜ್ಯೋತಿ ಬಸುರವರ ಖುರ್ಚಿಯ ನಾಲ್ಕೂ ಕಾಲುಗಳನ್ನು ಈ ಕೆಯ ಬೀದಿ ಬದಿಯ ಹೋರಾಟಗಳು ಅಲುಗಾಡತೊಡಗಿದ್ದವು. ತಮ್ಮ ಅಧಿಕಾರವನ್ನು ಮತ್ತೋರ್ವ ವಯೋವೃದ್ದ ದ್ರೋಣರಾದ ಬುದ್ದದೇವ ಚಟರ್ಜಿಯವರಿಗೆ ಬಿಟ್ಟುಕೊಡುವುದು ಈ ಸಂದರ್ಭದಲ್ಲಿ ಬಸುರವರಿಗೆ ಅನಿವಾರ್ಯವಾಯಿತು.ಆದರೆ ಯಾರೇ ಅಧಿಕಾರದಲ್ಲಿದ್ದರೂ ತನಗೆ ಈಡಲ್ಲವೆಂಬ ನಡೆಯೊಂದಿಗೆ ರಣಚಂಡಿಯಾಗಿ,ಒಂಟಿಯಾಗಿ,ಸಮೂಹದ ಹೆಗಲಾಗಿ,ಬಂಗಾಳದ ತಾಯಿಯಾಗಿ,ಕಾಳಿಯಾಗಿ,ಹೋರಾಡಿದ ಪರಿಗೆ ಬುದ್ದದೇವ ಚಟರ್ಜಿ ಅಥವಾ ಕಮ್ಯೂನಿಸ್ಟರ ಆಳ್ಳಿಕೆಯ ನೆಲಸಮವಾಗುವಿಕೆಗೆ ಅಂದೇ ವೇದಿಕೆಗಳು ಸಜ್ಜಾದವು. ಇಂದು ಬಂಗಾಳ ವಿಧಾನ ಸಭೆಗೆ ನಡೆದ ಚುನಾವಣೆಯ 292 ಕ್ಷೇತ್ರಗಳಲ್ಲಿ ಕಮ್ಯೂನಿಸ್ಟರು ಗಳಿಸಿದ ಶೂನ್ಯ ಸಂಪಾದನೆಯವರೆಗೆ ಈಕೆಯ ಹೋರಾಟ ಮುಂದುವರಿದಿರುವುದನ್ನು ನಾವಿಂದು ನೋಡುತ್ತಿದ್ದೇವೆ.
ಕಮ್ಯೂನಿಸ್ಟರು ಬಂಗಾಳದ ನೆಲದಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತಿರುವುದನ್ನರಿತ ಮೋದಿ ,ಷಾ,ಚಡ್ಡಾಗಳು ಇನ್ನಿಲ್ಲದಂತೆ ಬಂಗಾಳದಾದ್ಯಂತ ಓಡಾಡಿದರು.ಅರಚಿದರು,.ಕೂಗಿದರು.ಮಮತಾಗೆ ಹೊಡೆಸಿದರು. ಆದರೆ ಮಮತಾ ಈ ಚುನಾವಣೆಯಲ್ಲಿ ಕಾಳಿಯಾಗಿದ್ದರು.ನೆಲದ ಅಸ್ಮಿತೆಯ ಮೇಲಿನ ಮೋದಿ -ಷಾ ಜೋಡಿಯ ದಾಳಿಯನ್ನು ಪರಿಣಾಮಕಾರಿಯಾಗಿ ಜನರ ಮುಂದಿಟ್ಟರು.ಆದರೆ ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮಗಳಿಗೆ ಮೋದಿ -ಷಾ ಜೋಡಿ ಪ್ರಪಂಪಚವರಿಯದ ಮ್ಯಾಜಿಕ್ ಮಾಡುವುದರ ಮೂಲಕ ದೀದಿಯನ್ನು ಹಗ್ಗದಲ್ಲಿ ಕಟ್ಟಿ ಹಾಕುತ್ತಿರುವ ದೃಷ್ಯಗಳೇ ಇವರುಗಳಿಗೆ ಕಾಣುವಂತಾಗಿದ್ದರಿಂದ ಎಲ್ಲ ಸರ್ವೇಗಳೂ ಮಮತಾರನ್ನು 215 ಸೀಟುಗಳ ಆಜು ಬಾಜಿಗೂ ತಂದು ನಿಲ್ಲಿಸುವಲ್ಲಿ ವಿಫಲವಾಗಿ ,ಲಾಗಾಯ್ತಿನಿಂದಲೂ ಪ್ರಚುರಪಡಿಸುತ್ತಿರುವ ತಮ್ಮ ಬಾಲ್ಯಾವಸ್ಥೆಯನ್ನು ಬಹಿರಂಗಗೊಳಿಸಿವೆ.
ಎಂಭತ್ತರ ದಶಕದಲ್ಲಿ ಕಲ್ಕತ್ತಾದ ಬೀದಿಯೊಂದರಲ್ಲಿ ಆಯೋಜಿಸಿದ್ದ ಸಭೆಯೊಂದರಲ್ಲಿ ಕೂತಿದ್ದಾಗ ಹಿಂಬದಿಯಿಂದ ಬಂದ ಸಿಪಿಎಂ ಕಾರ್ಯಕರ್ತನೊಬ್ಬ ತಲೆಗೆ ಬೀಸಿದ್ದ ಕಬ್ಬಿಣದ ಸರಳೊಂದರ ಪೆಟ್ಟಿನಿಂದ ಈಗಲೂ ಮಮತಾ ಹೊರ ಬಂದಿಲ್ಲ.ಆಗಾಗ ತಲೆ ಸುತ್ತಿ ಬೀಳುತ್ತಲೆ ಇರುತ್ತಾರೆ.ಆದರೆ ಮೊನ್ನೆ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೇಪಿ ಕಾರ್ಯಕರ್ತರು ಈಕೆಯನ್ನು ಹಿಡಿದೆಳೆಯುತ್ತಾರೆ.ದೂಡುತ್ತಾರೆ.ದೂಡಿದ ಹೊಡೆತಕ್ಕೆ ಕಾಲು ಮುರಿದೇ ಹೋಗುತ್ತದೆ.ಚುನಾವಣಾ ಪ್ರಚಾರದಿಂದಲೆ ಈಕೆಯನ್ನು ಹೊರದಬ್ಬಬೇಕೆಂಬ ಉದ್ದೇಶದಿಂದ ನಡೆಸಿದ್ದ ಆ ಮಾರಣಾಂತಿಕ ಹಲ್ಲೆಯಿಂದ ಮಮತಾ ವಿಚಲಿತಳಾಗದೆ ವ್ಹೀಲ್ ಛೇರಿನಲ್ಲಿ ಕುಳಿತೇ ಪ್ರಚಾರ ಮಾಡಿದ ಮಮತಾರನ್ನು ಇಡೀ ಬಂಗಾಳ ಮನೆ ಮಗಳಂತೆ ಕಂಡಿತು.ಮಣ್ಣಿನ ಮಗಳಂತೆ ತನ್ನ ಮನೆಗೆ ತಂದು ಲಾಲಿಸಿತು.ಈಕೆಯ ಪದಗಳನ್ನು ಆಲಿಸಿತು.ಅದರಂತೆ ಮತ ಚಲಾಯಿಸಿತು.
ಅದಾನಿ ಅಂಬಾನಿಯವರ ಪಾದಾರವಿಂದಗಳಿಗೆ ಇಡೀ ಬಂಗಾಲವನ್ನು ಅರ್ಪಿಸುತ್ತೇವೆಂಬ ವಚನ ನೀಡಿದ್ದರ ಆಧಾರದ ಮೇಲೆ ಮಾತು ತಪ್ಪದ ಮಕ್ಕಳಂತೆ ಪ್ರಚಾರ ಕೈಗೊಂಡ ಬಂಗಾಳದಲ್ಲಿ ಬಿರುಗಾಳಿ ಎಬ್ಬಿಸಿದ್ದ ರೀತಿಗೆ ಎಂಟೆದೆಯವರೂ ಗಡ ಗಡ ನಡುಗಿ ಶಸ್ತ್ರ ತ್ಯಾಗ ಮಾಡಬೇಕಿತ್ತು.ಆದರೆ ಮೋದಿ,ಷಾ,ನಡ್ಡಾಗಳು ನೆಲ ಜಪ್ಪಿ ಬೆಕ್ಕನ್ನು ಹೆದರಿಸುವ ಜಾಯಮಾನದವರೆಂಬುದನ್ನು ದೀದಿ ತರಹ ಬೇರಿನ್ನಾರು ಅರ್ಥಮಾಡಿಕೊಳ್ಳಬಲ್ಲರು.?

ನೆಂಪೆ ದೇವರಾಜ್.
೮೭೬೨೨೮೯೦೪೩

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *