







ವಿಠ್ಠಲ್ ಸೇರಿದಂತೆ ನಮ್ಮ ಸಮತಾವಾದಿ ಗೆಳೆಯರು, ವಿಶೇಶವಾಗಿ ಅಣ್ಣಂದಿರೊಂದಿಗೆ ನನ್ನದು ಲಾಗಾಯ್ತಿನ ಜಗಳ. ಅವರ ಎಂಥ ಮಾರಾಯ ಎನ್ನುವುದರಿಂದ ಪ್ರಾರಂಭವಾಗುತಿದ್ದ ನಮ್ಮ ಜಗಳ ಜಗಳದಿಂದಲೇ ಅಂತ್ಯವಾಗುತಿತ್ತು. ಅಷ್ಟು ಜಗಳಕ್ಕೆ ಅರ್ಹರಾದ ವ್ಯಕ್ತಿಗಳಲ್ಲಿ ವಿಠ್ಠಲ್ ಸರ್ ಒಬ್ಬರು.

ವಿಠ್ಠಲ್ ಯಾರೆಂದು ತಿಳಿದಿರದ ಅವಧಿಯದು ನನ್ನ ಲೇಖನ ಒಂದನ್ನು ಓದಿದ ಡಾ. ಆರ್. ವಿ.ಭಂಡಾರಿ ನನಗೊಂದು ಪತ್ರ ಬರೆಯುತ್ತಾರೆ. ನಂತರ ಅವರು ಕರಾವಳಿ ಮುಂಜಾವು ಕಛೇರಿಯಲ್ಲಿ ಮೊದಲು ನನಗೆ ಭೇಟಿಯಾಗಿದ್ದು. ಆರ್.ವಿ. ಆಗ ದೊಡ್ಡ ಸಾಹಿತಿ ನನ್ನಂಥ ಹೊಸ ಹುಡುಗನನ್ನು ಕಂಡು ಮಾತನಾಡಿಸಿ, ಬೆನ್ನುತಟ್ಟುತ್ತಾರೆ. ಅಲ್ಲಿಂದ ಪ್ರಾರಂಭವಾದ ನನ್ನ ಕುತೂಹಲಕ್ಕೆ ಸಿಕ್ಕ ಆರ್. ವಿ.ಭಂಡಾರಿಯವರ ಕುಟುಂಬ ಸಾಹಿತ್ಯ, ಸಂಘಟನೆ ಇತ್ಯಾದಿ ವಿಡಂಬಾರಿಯವರಜೊತೆಗಿನ ಸ್ನೇಹದಿಂದ ಮನಸೊಳಗೆ ಇಳಿಯಿತು. ನಾನೂ ಅವರ ಕುಟುಂಬದ ಸಂಗಾತಿಯಾದೆ.
ಆಗ ಈ ವಿಠ್ಠಲ್ ಹೋರಾಟ, ಸಂಘಟನೆ ಎಂದು ಓಡಾಡಿಕೊಂಡಿದ್ದ ಹುಡುಗ. ನನಗಿಂತ ಎಂಟ್ಹತ್ತು ವರ್ಷ ಹಿರಿಯರಾಗಿದ್ದ ವಿಠ್ಠಲ್ ನನಗೆ ಆರ್. ವಿ. ಭಂಡಾರಿಯವರ ಮಗನಾಗಿ ದಕ್ಕಿದ್ದಕ್ಕಿಂತ ಹೆಚ್ಚು ನನ್ನ ಸಂಗಾತಿಯಾಗಿ, ಅಣ್ಣನಾಗಿ. ಸ್ನೇಹಿತನಾಗಿ.
ಇದಕ್ಕಿಂತ ಮೊದಲು ಅವರ ಪತ್ನಿ ಧೀರ ಹೆಣ್ಣು ಯಮುನಾ ನಮ್ಮ ಕಾಲೇಜು ದಿನಗಳ ಸಂಗಾತಿ. ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಇವರು ಇನ್ನೊಬ್ಬ ವಿಠ್ಠಲ್ ಎನ್ನುವ ಹೋರಾಟವನ್ನೇ ವರಿಸಿದ್ದರು. ಯಾರೂ ಹೊಟ್ಟೆಕಿಚ್ಚು ಪಡುವಂಥ ಜೋಡಿಯದು. ಸಾಹಿತ್ಯ. ಸಂಗೀತ, ಹೋರಾಟ, ಚಳವಳಿ, ಸುಧಾರಣೆ, ಬಂಡಾಯ ಎಲ್ಲೆಲ್ಲೂ ಸಲ್ಲುವ ಇಂಥ ಜೋಡಿ ಅಪರೂಪ. ಹೋರಾಟ, ಬದಲಾವಣೆಗಾಗಿ ಸಂಯೋಜನೆಗೊಂಡ ಜೋಡಿಯದು.
ಅಪ್ಪ ಡಾ ಆರ್.ವಿ. ವಿಠ್ಠಲ್, ಯಮುನಾ ಸೇರಿದ ನಮ್ಮಂಥ ಅನೇಕರಿಗೆ ಅಣ್ಣ. ಆ ಅಣ್ಣನ ಮಗ, ಶಿಷ್ಯನಾಗಿ ವಿಠ್ಠಲ್ ತುಳಿದ ಹಾದಿ ಅವರ ಬದುಕನ್ನು ಸಮರ್ಥಿಸುವಂತಿತ್ತು. ಸಂಘಟನೆ, ಹೋರಾಟ,ಸಾಹಿತ್ಯ, ಬಂಡಾಯ,ಸುಧಾರಣೆ ಇವೇ ಬದುಕು ಎಂದುಕೊಂಡಿದ್ದ ಅಪರೂಪದ ಅಣ್ಣ, ಮಗ,ಸಂಗಾತಿ, ಗುರು, ಮಾರ್ಗದರ್ಶಿ ಎಲ್ಲವೂ ಆಗಿದ್ದ ವಿಠ್ಠಲ್ ಅವರ ಬದುಕಿನ ಕೊನೆ ಜಗಳ ಎಂಬಂತೆ ಇತ್ತೀಚೆಗೊಂದು ದಿನ ಶಿರಸಿ ಜಿಲ್ಲೆಯ ವಿಚಾರಕ್ಕೆ ವಾದಕ್ಕಿಳಿದಿದ್ದರು. ಉತ್ತರ ಕನ್ನಡ ಜಿಲ್ಲೆ ವಿಭಾಗವಾಗುವುದು ಬೇಡ ಎನ್ನುವುದು ಅವರ ಆಸೆ, ತರ್ಕ, ವಾದವಾದರೆ..
ನನ್ನದು ಎಂದಿನಂತೆ ಉಲ್ಟಾ! ಕೊನೆಗೆ ನಾನೇ ಶಿರಸಿ ಜಿಲ್ಲೆ ಪರವಾಗಿರುವವರು, ವಿರೋಧಿಸುವವರ ಒಂದು ಚರ್ಚೆ ನಡೆಸುತ್ತೇನೆ ಎಂದೆ. ಆದರೆ ಬರೀ ಹೋರಾಟದ ಏಕಮುಖದವರು ಬೇಡ ಸಾಧ್ಯಾಸಾಧ್ಯತೆ, ಕಾರ್ಯಕಾರಣಗಳ ಬಗ್ಗೆ ಚರ್ಚಿಸಬಲ್ಲ ಸಂಯಮಿಗಳು ಬೇಕು ಎಂದು ಮಾತು ಮುಗಿಸಿದ್ದರು. ಅಂದೂ ಕೂಡಾ ಎಂದಿನಂತೆ ಅವರ ಇಷ್ಟದ ಆಯುರ್ವೇದದ ಕಷಾಯ ಕುಡಿಸಿ ಕಳಿಸಿದ್ದರು.
ಅಂದಿನಂತೆ ಅದೆಷ್ಟೋ ಬಾರಿ ಮನೆಯೊಳಗೆ ಹೊರಗೆ ನಾವು ಸೇರಿದ್ದಿದೆ ಆದರೆ ಸ್ನೇಹಿತ ರಾಮಡಗಿ ಹೇಮಂತ,ವೀರಲಿಂಗನಗೌಡ್ರ ರವರೊಂದಿಗಿನ ನಮ್ಮ ನೆನಪು, ಜಗಳಗಳು ವಿಠ್ಠಲ್ ರನ್ನು ನಮ್ಮೊಳಗೆ ಜೀವಂತವಾಗಿರಿಸಬಲ್ಲವು. ಬದುಕಿದ್ದು ನಮ್ಮ ದೇಶ, ವಾತಾವರಣ ನೋಡಿ ಖುಷಿಪಡಲು ಕಾತರಿಸುತಿದ್ದ ಜೀವಂತಿಕೆಯ ಸಂಗಾತಿ ವಿಠ್ಠಲ್ ನಮ್ಮಂಥ ಅನೇಕರಲ್ಲಿ ಅನಾಥ ಭಾವ ಮೂಡಿಸಿದ್ದಾರೆ. ಹಲವರಿಗೆ ನೇರ ಗುರುವಾಗಿ ನಮ್ಮಂಥವರಿಗೆ ಮಾನಸ ಗುರುವಾಗಿ
ಅವರೊಂದಿಗಿನ ಸಹಯಾನ, ಸ್ನೇಹ, ಜಗಳ,ಪ್ರೀತಿ ನಮ್ಮದೆಯಲ್ಲಿ ನಿತ್ಯ ಹಸಿರು. ಮತ್ತೆ ಬಾ ಸಂಗಾತಿ, ಅಣ್ಣ ಎಂದು ನಮ್ಮಷ್ಟಕ್ಕೆ ನಾವು ಕರೆದುಕೊಳ್ಳುವ ವಿಧಿಗೆ,ಕರೋನಾಕ್ಕೆ ನನ್ನ ಜೀವಮಾನದ ಧಿಕ್ಕಾರ. ರೆಡ್ ಸೆಲೂಟ್, ಇಕ್ವಿಲಾಬ್ ಜಿಂದಾಬಾದ್.. ನಿಮ್ಮ ಕನ್ನೇಶ್.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
