ಈ ಕರೋನಾ ಕಾಲ ಸತ್ವ ಪರೀಕ್ಷೆಯ ಕಾಲವಾಗಿದ್ದು ಈಗ ಜನಸಾಮಾನ್ಯರ ಎಚ್ಚರ, ಸರ್ಕಾರದ ಮುತುವರ್ಜಿ, ಜನರ ಸೇವಾಮನೋಭಾವಗಳೆಲ್ಲಾ ಪರೀಕ್ಷೆಗೊಳಪಡುತ್ತಿವೆ ಎಂದ ಮಾಜಿ ಸಚಿವ, ಕಾಂಗ್ರೆಸ್ ನ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಕರೋನಾ ನಿರ್ವಹಣೆಯ ಬಗ್ಗೆ ಸಾರ್ವಜನಿಕರ ಸಮಾಧಾನವಿಲ್ಲ, ಸರ್ಕಾರ ಮುತುವರ್ಜಿ, ಮುಂದಾಲೋಚನೆಯಿಂದ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಬೇಸರಿಸಿದ್ದಾರೆ.
ಕಾಂಗ್ರೆಸ್ ನಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅವಶ್ಯವಿರುವ ಔಷಧ, ಪಿ.ಪಿ.ಇ. ಕಿಟ್,ಕೋವಿಡ್ ಪ್ರತಿರೋಧ ಸಲಕರಣೆಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ನಂತರ ಸಿದ್ದಾಪುರದಲ್ಲಿ ಮಾತನಾಡಿದ ಅವರು ಕರೋನಾ ಸೇನಾನಿಗಳು ಪ್ರಾಮಾಣಿಕವಾಗಿ ಅವರ ಕೆಲಸ ಮಾಡುತಿದ್ದಾರೆ.
ಸರ್ಕಾರದಿಂದ ಔಷಧ, ಲಸಿಕೆ, ಅಗತ್ಯ ವಸ್ತುಗಳೇ ಬರದಿದ್ದರೆ ಅವರೇನು ಮಾಡುತ್ತಾರೆ. ಸಮಾಜದ ಬಗ್ಗೆ ಕಾಳಜಿ ಇರುವವರೆಲ್ಲಾ ತಮ್ಮ ಮಿತಿಯಲ್ಲಿ ಕೆಲಸ ಮಾಡುತಿದ್ದಾರೆ. ಸರ್ಕಾರದ ಅವ್ಯವಸ್ಥೆಗಳ ಬಗ್ಗೆ ಮಾತನಾಡಿದರೆ ರಾಜಕಾರಣ ಮಾಡುತ್ತಾರೆ ಎನ್ನುತ್ತಾರೆ. ಜನಸಾಮಾನ್ಯರ ಜಾಗೃತಿ, ಸರ್ಕಾರದ ಜವಾಬ್ಧಾರಿ, ಜನರ ಸೇವಾ ಮನೋಭಾವ ಎಲ್ಲವೂ ಪರೀಕ್ಷೆಗೆ ಒಳಪಡುತ್ತಿರುವ ಸಮಯವಿದು. ಕರೋನಾ ಸಮಾಜದ ಸತ್ವ ಪರೀಕ್ಷೆ ಮಾಡುತ್ತಿದೆ. ಇದನ್ನು ಎಲ್ಲರೂ ನೋಡುತಿದ್ದಾರೆಮತ್ತು ಎಲ್ಲರಿಗೂ ಅರ್ಥವಾಗುತ್ತದೆ ಈ ಸ್ಥಿತಿಯಲ್ಲಿ ದೇವರಿಗೆ ಬೇಡಿಕೊಳ್ಳುವುದೊಂದೇ ನಮಗಿರುವ ಮಾರ್ಗ ಎಂದರು.