

ಲೋಹಿತ್ ನಾಯ್ಕ ಮತ್ರ- ಹೆಸ್ಕಾಂ ಅವ್ಯವಸ್ಥೆಯಿಂದ ಕೆಲಸ ಕರೆದು ಕೊಳ್ಳುವ ಭೀತಿಯಲ್ಲಿ ” ವರ್ಕ್ ಫ್ರಮ್ ಹೋಮ್ ” ಯುವಕರು..
ಪ್ರತಿಷ್ಠಿತ MNC ಗಳಲ್ಲಿ ಕೆಲಸಮಾಡುತ್ತ ಪರೋಕ್ಷವಾಗಿ ದೇಶದ ಆರ್ಥಿಕತೆ ಕಟ್ಟುತ್ತಿರುವ ಜಿಲ್ಲೆಯ ಸಾವಿರಾರು ಯುವಕರು ಬೆಂಗಳೂರು ಮತ್ತು ಇತರ ಮಹಾನಗರಗಳನ್ನು ಬಿಟ್ಟು ತಮ್ಮ ಹಳ್ಳಿಯ ಮನೆಯಿಂದಲೇ WORK FROM HOME ಮಾಡುತ್ತಿದ್ದಾರೆ. ಆದರೆ ಅವರೀಗ ಹೆಸ್ಕಾಂ ನ ಅವ್ಯವಸ್ಥೆಯಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹಳ್ಳಿಗಳಲ್ಲಿ ದಿನಕ್ಕೆ ಸರಾಸರಿಯಾಗಿ ಐದರಿಂದ ಹತ್ತು ಬಾರಿ ವಿಧ್ಯುತ್ ಕಡಿತ ವಾಗುತ್ತಿದ್ದು. ಕೆಲವೊಮ್ಮೆ ದಿನಗಟ್ಟಲೆ ವಿದ್ಯುತ್ ಇರುವುದಿಲ್ಲ, ಮಳೆಗಾಲದ ಸಮಯದಲ್ಲಂತೂ ಕೆಲವು ಊರುಗಳಿಗೆ ಒಂದು ವಾರ ವಿದ್ಯುತ್ ಇಲ್ಲದ ದಿನಗಳು ಸಹ ಇದೆ.
ಇಸ್ಟು ವರ್ಷಗಳ ಕಾಲ ಹಳ್ಳಿಗರು ಈ ವ್ಯವಸ್ಥೆಗೆ ಸೋತು ಹೊಂದಿಕೊಂಡಿದ್ದರು ಆದರೆ ಈಗ ಹೆಸ್ಕಾಂ ನ ಈ ಅವ್ಯವಸ್ಥೆಯಿಂದ ಯುವಕರ ಕೆಲಸಕ್ಕೆ ಕುತ್ತು ತರುವಂತಿದೆ. ಸಮಯಕ್ಕೆ ಸರಿಯಾಗಿ ಲಾಗಿನ್ ಆಗದೆ ಅಥವಾ ದಿನಕ್ಕೆ ಇಂತಿಷ್ಟು ತಾಸುಗಳು ಲಾಗಿನ್ ಆಗದಿದ್ದರೆ ಕಂಪನಿಯ ಮ್ಯಾನೇಜರ್ ಗಳು ಟೀಮ್ ಲೀಡರಗಳು ಆಯಾಯ ಎಕ್ಸಿಕ್ಯೂಟಿವ್ ಗಳನ್ನು ಮೊನಿಟರ್ ಮಾಡಿ ಮೀತಿ ಮೀರಿದಾಗ ಕಂಪನಿಯ H R ಗಳಿಗೆ ದೂರು ನೀಡಿ ಕೆಲಸಕ್ಕೆ ತೆಗೆಯಲು ಸೂಚಿಸುತ್ತಾರೆ. ಇಂತಹ ಕೆಲವು ಘಟನೆಗಳು ಈಗಾಗಲೇ ನಮ್ಮ ಗಮನಕ್ಕೆ ಬಂದಿವೆ.
ಈ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇದ್ದ ಕೆಲಸ ಕಳೆದು ಕೊಂಡರೆ ತಮ್ಮ ಭವಿಷ್ಯವೇ ಅತಂತ್ರವಾ ಗುವ ಭೀತಿಯಲ್ಲಿ ಯುವಕರಿದ್ದಾರೆ.
ಆ ಕಾರಣ ಈ ಸಮಸ್ಯೆಯ ಆಳವನ್ನು ಸರ್ಕಾರ ಕ್ಕೆ ಮನವರಿಕೆ ಮಾಡಲು ಒಂದು ಸಾಂಘಿ ಕ ಪ್ರಯತ್ನದ ಅಗತ್ಯವಿದೆ ..
ಸದ್ಯವೇ ಈ ಕುರಿತು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಕೊಡುವ ಮೂಲಕ ಪ್ರತಿಭಟನೆ ಹಂಬಿಕೊಳ್ಳಲಾಗುವುದು.
ಈ ಮೂಲಕ ವಿನಂತಿಸುವುದೇನೆಂದರೆ, ಈ ಸಮಸ್ಯೆಯಿಂದ ಕಷ್ಟ ಪಡುತ್ತಿರುವ ಯುವಕರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿ ವಿನಂತಿ ..
-ಲೋಹಿತ್ ನಾಯ್ಕ್ ಈರಗೊಪ್ಪ
ಸಾಮಾಜಿಕ ಕಾರ್ಯಕರ್ತರು. ಶಿರಸಿ

