

ಸಿದ್ಧಾಪುರದ ದೀವರ ಸಂಸ್ಥಾನ ಶ್ರೀಕ್ಷೇತ್ರ ತರಳಿಯ ಬಾಲಕೃಷ್ಣ ಸ್ವಾಮೀಜಿ ಇಂದು ಮುಂಜಾನೆ ನಿಧನರಾದರು. ತರಳಿ ಬಾಲಕೃಷ್ಣ ಸ್ವಾಮೀಜಿ ಎಂದೇ ಪ್ರಸಿದ್ಧರಾಗಿದ್ದ ಇವರು ಮೂಲತ: ಶಿಕಾರಿಪುರದವರು. ಬಾಲಕೃಷ್ಣ ಸ್ವಾಮೀಜಿಯವರ ಅಜ್ಜ ಬಹುಹಿಂದೆ ತರಳಿಯಲ್ಲಿ ನೆಲೆಸಿದ್ದ ಹಿನ್ನೆಲೆಯಲ್ಲಿ ಹೆಗ್ಗೇರಿ ದೇವಸ್ಥಾನಕ್ಕೆ ಪೂಜಾರಿಯಾಗಿ ಬಂದಿದ್ದ ವೈಷ್ಣವ ಪರಂಪರೆಯ ಬಾಲಕೃಷ್ಣ ಸ್ವಾಮೀಜಿ ಸಂಸಾರಿ ಸ್ವಾಮೀಜಿಯಾಗಿ ಕಳೆದ 40 ವರ್ಷಗಳ ಹಿಂದೆ ತರಳಿಯ ಪೀಠಾಧಿಪತಿಯಾಗಿ ನೇಮಕವಾಗಿದ್ದರು.
ನಾಲ್ಕು ಗಂಡು ಮಕ್ಕಳು, ಒಬ್ಬಳು ಪುತ್ರಿ, ಪತ್ನಿ ಸೇರಿ ತಮ್ಮ ಬಂಧು ಬಳಗವನ್ನು ಇಂದು ಅಗಲಿದರು. ಕಳೆದ ನಾಲ್ವತ್ತು ವರ್ಷಕ್ಕೂ ಹೆಚ್ಚುಕಾಲ ದೀವರ ಮಠದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಬಾಲಕೃಷ್ಣ ಸ್ವಾಮೀಜಿಯವರ ವಿಧನಕ್ಕೆ ತರಳಿ ದೇವಸ್ಥಾನ ಆಡಳಿತ ಸಮೀತಿ, ಹೆಗ್ಗೇರಿ ದೇವಸ್ಥಾನ ಆಡಳಿತ ಸಮೀತಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲಿದ ಬಾಲಕೃಷ್ಣ ಸ್ವಾಮೀಜಿಸೋಮುವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಕೊನೆ ಉಸಿರೆಳೆದರು. ಅವರ ಅಂತ್ಯ ಸಂಸ್ಕಾರ ತರಳಿ ದೇವಸ್ಥಾನದ ಬಳಿಯ ಸ್ವಾಮೀಜಿ ಕುಟುಂಬದ ಜಮೀನಿನಲ್ಲಿ ನಡೆಯಲಿದೆ.

