ಭಾನುವಾರ ಡಾ.ವಿಠ್ಠಲ ಭಂಡಾರಿಯವರ ಜನ್ಮದಿನದ ಪ್ರಯುಕ್ತ ಅವರ ನೆನಪಿನಲ್ಲಿ ವಿದ್ಯಾರ್ಥಿ ಬಳಗ ‘ಚಿಗುರುಗಳು’ ತಮ್ಮ ಮೇಷ್ಟ್ರ ಜೊತೆಗಿನ ಒಡನಾಟದ ನೆನಪುಗಳ ಕಥನ-“ಪ್ರೀತಿ ಪದಗಳಲಿ ವಿಠ್ಠಲ ಮೇಷ್ಟ್ರು” ಸರಣಿಯ ಆನ್ಲೈನ್ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಡಾ.ಎಂ.ಜಿ ಹೆಗಡೆ ಈ ಸ್ಮೃತಿ ಸರಣಿಯ ಮೂಲಕ ವಿಠ್ಠಲ ಭಂಡಾರಿಯವರ ಸಹಯಾನ, ಸಮುದಾಯಕರ್ನಾಟಕ, ಸಂವಿಧಾನಓದು ಮುಂತಾದ ಅನೇಕ ಹೋರಾಟ ಚಟುವಟಿಕೆಗಳ ಹೊರತಾಗಿ ವಿದ್ಯಾರ್ಥಿಗಳೊಂದಿಗೆ ಅವರಒಡನಾಟ ಹೇಗಿತ್ತು ಮತ್ತು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿಸಲು ಭಂಡಾರಿಯವರು ಯಾವ ರೀತಿಯಲ್ಲಿ ಶ್ರಮಿಸುತ್ತಿದ್ದರು ಎನ್ನುವ ಅಪರಿಚಿತ ಮುಖದ ಅನಾವರಣವಾಗಲಿ ಮತ್ತು ಈ ಕಾರ್ಯಕ್ರಮ ಧೀರ್ಘವಾಗಿ ಮೂಡಿಬರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿ ವಿಠ್ಠಲ ಭಂಡಾರಿಯವರೊಂದಿಗಿನತಮ್ಮ ನೆನಪುಗಳನ್ನು ಹಂಚಿಕೊಂಡ ವೈಜಯಂತಿ ಶಾನಭಾಗ್ ಡಾ.ಬಿ.ಅರ್‍ಅಂಬೇಡ್ಕರ್‍ರವರು ಸಂವಿಧಾನವನ್ನು ರಚಿಸಿ ಅದನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಆದರೆ ವಿಠ್ಠಲ ಭಂಡಾರಿಯವರು ಸಂವಿಧಾನ ಓದು ಕಾರ್ಯಕ್ರಮಗಳ ಮೂಲಕ ಅದನ್ನು ಜನಸಾಮಾನ್ಯರಿಗೂ ಸಹ ಅರ್ಥಮಾಡಿಸಲು ಶ್ರಮಿಸಿದರು, ಈ ಕಾರಣಕ್ಕಾಗಿ ನಾನು ಅವರನ್ನು ಅಭಿನವ ಅಂಬೇಡ್ಕರ್ ಎಂದು ಕರೆಯುತ್ತೇನೆ ಎಂದರು.
ಪ್ರೊ.ವಿನಾಯಕ್‍ಎಂ.ಎಸ್ ಮಾತನಾಡಿತಾವು ಮಹಾವಿದ್ಯಾಲಯದ ನ್ಯಾಕ್ ಪ್ರೊಸೆ ಸೆಸ್ ನ ಜವಾಬ್ದಾರಿ ವಹಿಸಿಕೊಂಡಾಗ ವಿಠ್ಠಲ ಭಂಡಾರಿಯವರು ನೀಡಿದ ಸಹಕಾರವನ್ನು ಸ್ಮರಿಸಿಕೊಂಡರು. ಮುಂದುವರಿದು ಯಾವ ರೋಗದ ವಿರುದ್ಧ ಜನಜಾಗೃತಿಯನ್ನು ಮೂಡಿಸುತ್ತಿದ್ದರೋ, ಅದರಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸ್ಪಂದಿಸುತ್ತಿದ್ದರೋ ಅದೇರೋಗದ ಕಬಂಧಬಾಹುವಿಗೆ ಅವರೂ ಸಹ ಸೇರಿದ್ದು ದುಃಖಕರ ಎಂದು ವಿವರಿಸಿದರು.
ಪ್ರೊ.ಜಗನ್ನಾಥ್ ಮೊಗೇರ ಮಾತನಾಡಿ ವಿಠ್ಠಲ ಭಂಡಾರಿಯವರು ಜನಶಿಕ್ಷಣ ಮತ್ತು ಶಿಕ್ಷಣದ ನಡುವಿನ ಸೇತುವೆ ಆಗಿದ್ದರು ಎಂಬುದನ್ನು ತಿಳಿಸುತ್ತ ಭಂಡಾರಿಯವರು ಸಾಮಾಜಿಕ ಮತ್ತು ರಾಜಕೀಯ ಚಿಂತನೆಗಳನ್ನು ಹೇಗೆ ವಿವರಿಸುತ್ತಿದ್ದರು ಮತ್ತು ಅದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಜೊತೆಗೆ ತಮ್ಮ ಮತ್ತುಅವರ ನಡುವಿನ ಬಾಂಧವ್ಯದಕುರಿತು ತಿಳಿಸುತ್ತಾ ಭಂಡಾರಿಯವರ ವ್ಯಕ್ತಿತ್ವ ಹೇಗೆ ಅನುಕರಣಿಯವಾಗಿತ್ತುಎಂದು ವಿವರಿಸಿದರು.
ಸುಬ್ರಾಯ ಮತ್ತಿಹಳ್ಳಿಯವರು ಮಾತನಾಡಿ ವಿಠ್ಠಲ ಭಂಡಾರಿಯವರು ತಮ್ಮ ಸಾಹಿತ್ಯಕ್ಕೆ ಕಟುವಾಗಿ ವಿಮರ್ಶೆ ಮಾಡುತ್ತಿದ್ದುದನ್ನು ತಿಳಿಸಿ ಹೇಗೆ ತಮ್ಮ ಸಾಹಿತ್ಯಕ್ಕೆ ಹೊಸ ಚಿಗುರನ್ನು ಮೂಡಿಸುತ್ತಿದ್ದರು ಎಂದು ತಿಳಿಸಿದರು. ವಿಠ್ಠಲ ಭಂಡಾರಿಯವರು ಕೇವಲ ನಾಲ್ಕು ಗೋಡೆಯ ಮಧ್ಯದ ಶಿಕ್ಷಕರಲ್ಲ ಬದಲಾಗಿ ಇಡೀ ಸಮಾಜದ ಶಿಕ್ಷಕರು ಎಂದು ತಿಳಿಸಿದರು.
ವಿಮಲಾ ಕೆ ಎಸ್. ಮಾತನಾಡಿ ವಿಠ್ಠಲ ಭಂಡಾರಿಯವರಿಗೆ ಜಿಲ್ಲೆಯ ಸಾಂಸ್ಕೃ ತಿಕ ಬೇರುಗಳ ಬಗೆಗೆ ತುಂಬಾ ಕನಸುಗಳಿದ್ದವು, ಆ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅವರು ಭರವಸೆಯನ್ನು ಇಟ್ಟುಕೊಂಡಿದ್ದ ಯುವತಲೆಮಾರಿನ ಚಿಗುರುಗಳು ಕೆಲಸ ಮಾಡಲಿ ಮತ್ತು ಈ ಚಿಗುರುಗಳು ಬೆಳೆದು ಆಕಾಶದೆತ್ತರಕ್ಕೆ ಮುಟ್ಟಲಿ ಎಂದು ಹಾರೈಸಿದರು.
ಕಿರಣ್ ಭಟ್, ಶ್ರೀಪಾದ್ ಭಟ್, ಯಮುನಾಗಾಂವ್ಕರ್ ಮತ್ತು ನವೀನ್‍ಕುಮಾರ್ ಮಾತನಾಡಿ ವಿಠ್ಠಲ್ ಭಂಡಾರಿಯವರನ್ನು ಜೀವಂತವಾಗಿಡುತ್ತಿರುವ ವಿದ್ಯಾರ್ಥಿಗಳ ಈ ಕೆಲಸಕ್ಕೆ ಶುಭಕೋರಿದರು. ಮಾಧವಿ ಭಂಡಾರಿ,ಶ್ರೀಪಾದ ಭಟ್,ಪ್ರೊ ರಾಜೇಂದ್ರ ಚೆನ್ನಿ, ವಿಜಯ ಹೆಗಡೆ ದೊಡ್ಮನೆ,ಡಾ.ಸಬಿತಾ ಬನ್ನಾಡಿ,ಪ್ರೊ.ಫಣಿರಜ್ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಅಧ್ಯಾಪಕರು, ಹಲವು ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರೈತರಿಗಾಗಿ ಪ್ರಕಟಣೆ- ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಬೆಳೆ ಸಾಲಗಾರರಲ್ಲದ ಅಡಕೆ ಹಾಗೂ ಕಾಳುಮೆಣಸಿನ ರೈತರು ಹವಾಮಾನ ಆಧಾರಿತ ಪ್ರಧಾನಮಂತ್ರಿ ಫಸಲ ಭಿಮಾ ಯೋಜನೆಗೆ ಜೂ.30ರೊಳಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ.
ಆಧಾರ್ ಕಾರ್ಡ ಪ್ರತಿ,ಬ್ಯಾಂಕ್ ಪಾಸ್ ಪುಸ್ತಕ,ಮೊಬೈಲ್ ನಂಬರ್,ಫಹಣಿ ಪತ್ರಿಕೆ ಹಾಗೂ ಪ್ರೀಮಿಯಂ ಹಣವನ್ನು ನೀಡಬೇಕಾಗಿದ್ದು ಹೆಚ್ಚಿನ ಮಾಹಿತಿಗಾಗಿ 8762835573ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.