

ಸಿದ್ಧಾಪುರ ತಾಲೂಕಿನ ಪ್ರಸಿದ್ಧ ನಾಟಿವೈದ್ಯೆ ಶತಾಯುಷಿ ದಾಸನಗದ್ದೆಯ ಗೋದಾವರಿ ಕನ್ನ ಮಡಿವಾಳ ಇಂದು
ನಿಧನರಾದರು. 105 ವರ್ಷದ ಗೋದಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದವರಿಗೆ ನಾಟಿ ಔಷಧ ನೀಡಿ ಉಪಚರಿಸುತಿದ್ದರು. ಆರೋಗ್ಯ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾಲದಲ್ಲಿ ಸೂಲಗಿತ್ತಿಯಾಗಿ ಅನೇಕರನ್ನು ಉಳಿಸಿದ ಗೋದಾವರಿ ಮಡಿವಾಳ ಸೇವೆ ಪರಿಗಣಿಸಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ನಿಂದ ಸನ್ಮಾನಿಸಿ ಗೌರವಿಸಲಾಗಿತ್ತು.


