

ಸಿದ್ಧಾಪುರ ತಾಲೂಕಿನಲ್ಲಿ ಕಳೆದ ಐದು ವರ್ಷಗಳಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ಕೆಲಸ ಮಾಡಿದ ಅಜೀಜ್ ಅಹಮದ್ ಈಗ ಪದೋನ್ನತಿ ಪಡೆದು ಶಿರಸಿ ಸಂಚಾರಿ ಸ್ವಾಡ್ ಡಿ.ಎಫ್.ಓ. ಆಗಿದ್ದಾರೆ. ಹಲವು ಸವಾಲುಗಳ ನಡುವೆ ಉತ್ತಮ ಕೆಲಸ, ಸಾರ್ವಜನಿಕ ಸಂಪರ್ಕದಿಂದ ಹೆಸರು ಮಾಡಿದ್ದ ಅಜೀಜ್ ಪದೋನ್ನತಿ ವಿಳಂಬವಾದ ಕಾರಣದಿಂದ ಸಿದ್ಧಾಪುರದಲ್ಲಿ 5 ವರ್ಷ ಸೇವೆ ಸಲ್ಲಿಸಿದ್ದರು.
ಸಿದ್ಧಾಪುರ ತೋಟಗಾರಿಕೆ ಇಲಾಖೆಯ ಅಧಿಕಾರಿಯಾಗಿ ಜನಾನುರಾಗಿಯಾಗಿದ್ದ ದಾದಾಸಾಹೇಬ್ ದೇಸಾಯಿ ಕೇರಳ ಕೋಕೋ ಮತ್ತು ಗೇರು ನಿರ್ಧೇಶನಾಲಯದ ಉಪನಿರ್ಧೇಶಕರಾಗಿ ಪದೋನ್ನತಿ ಪಡೆದಿದ್ದಾರೆ. ದೇಸಾಯಿ ಕಳೆದ ಕೆಲವು ವರ್ಷಗಳಿಂದ ಸಿದ್ಧಾಪುರ ತೋಟಗಾರಿಕೆ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿದ್ದರು.


