

ಮುಂದಿನ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೂ ನಾನೇ ವಿಧಾನಸಭಾ ಅಧ್ಯಕ್ಷ ಎನ್ನುವ ವಿಶ್ವೇಶ್ವರರ ಮಾತು ಈಗಿನ ಹೊಸ ಸಚಿವ ಸಂಪುಟದ ವರೆಗೋ ಅಥವಾ ಈ ಅವಧಿಯ ನಂತರ ಮುಂದಿನ ಸರ್ಕಾರ ಬರುವವರೆಗೂ ತಾಂತ್ರಿವಾಗಿ ಸ್ಫೀಕರ್ ಆಗಿ ಮುಂದುವರಿಯುವ ಸಾಂಪ್ರದಾಯಿಕ ಶಿಷ್ಟಾಚಾರದ ಬಗ್ಗೆ ಹೇಳಿದ ಮಾತೊ ಎನ್ನುವುದಕ್ಕೆ ಈ ವಾರವೇ ಉತ್ತರ ಸಿಗಲಿದೆ.
ಮುಖ್ಯಮಂತ್ರಿ ರೇಸ್ ನಲ್ಲಿದ್ದಾರೆ ಎಂದು ಬಿಂಬಿತವಾಗಿದ್ದ ರಾಜ್ಯ ವಿಧಾನಸಭಾ ಅಧ್ಯಕ್ಷ ಶಿರಸಿ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಈಗಿನ ಸರ್ಕಾರದಲ್ಲಿ ಸಚಿವರಾಗ್ತಾರಾ ಎನ್ನುವ ಸುದ್ದಿ ಹರಿದಾಡುತ್ತಿದೆ.
ರಾಜ್ಯ ಸಚಿವ ಸಂಪುಟ ಪುನರ್ ರಚನೆಯಲ್ಲಿ ಹಿರಿಯರಿಗೆಲ್ಲಾ ಕೋಕ್ ಕೊಟ್ಟು ಹೊಸಬರಿಗೆ ಸಚಿವಸ್ಥಾನ ನೀಡಲಾಗುತ್ತಿದೆ ಎನ್ನುವ ಗಾಳಿಸುದ್ದಿಗಳ ನಡುವೆ ಮುಖ್ಯಮಂತ್ರಿ ಹುದ್ದೆಗೆ ಕಾಗೇರಿ ಹೆಸರು ಪ್ರಸ್ಥಾಪವಾದಂತೆ ಈಗ ಸಚಿವರಾಗುವ ವಿಷಯದಲ್ಲೂ ಇವರ ಹೆಸರು ಚಲಾವಣೆಯಲ್ಲಿದೆ ಎನ್ನಲಾಗುತ್ತಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಫೀಕರ್ ಆಗಿರುವುದು ಅವರ ಆಯ್ಕೆಯಲ್ಲ, ಕಾಗೇರಿ ಅನುಯಾಯಿಗಳು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವ ಬೇಡಿಕೆಯನ್ನು ಆಗಾಗ ಮುಂದಿಡುತಿದ್ದಾರೆ. ಈಗಲೂ ಕಾಗೇರಿ ಸಚಿವರಾಗಬೇಕು ಎನ್ನುವವರು ಅವರ ಆಪ್ತರೇ.
ವಿಧಾನಸಭಾ ಅಧ್ಯಕ್ಷ ಕಾಗೇರಿ ಕಳೆದ ವಾರದ ಪ್ರವಾಹದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಬೆಂಗಳೂರಿನಲ್ಲೇ ಇದ್ದರು.ಕ್ಷೇತ್ರದಲ್ಲಿ ಪ್ರವಾಹದ ಭೀಕರತೆ ಇದ್ದಾಗ ಬೆಂಗಳೂರಿನಲ್ಲಿದ್ದು ಅದಕ್ಕಿಂತ ಹಿಂದೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿ ಚರ್ಚೆಯಾಗುತಿದ್ದಾಗಲೂ ಕಾಗೇರಿ ಎಂದಿನಂತೆ ಮಾಧ್ಯಮಗಳಿಗೂ ಪ್ರತಿಕ್ರೀಯಿಸದೆ ಸುಮ್ಮನಿದ್ದರು.
ಸೊರಬಾ ಸಾಗರ ಕ್ಷೇತ್ರಗಳ ಶಾಸಕರಾದ ಕುಮಾರ ಬಂಗಾರಪ್ಪ,ಹಾಲಪ್ಪ ಜೊತೆ ಕಾರ್ಕಳದ ಸುನಿಲ್ ಕುಮಾರ್ ಸಚಿವರಾಗುವ ಆಸೆ, ನಿರೀಕ್ಷೆಯಲ್ಲಿದ್ದಾರೆ. ಈಡಿಗ ಕೋಟಾದ ಶ್ರೀನಿವಾಸ್ ಪೂಜಾರಿ ಕೈಬಿಟ್ಟು, ಕುಮಾರತ್ರಯರಿಗೆ ಕೈಕೊಟ್ಟು ಹಾಲಪ್ಪ ಮಂತ್ರಿಯಾಗುವ ತವಕದಲ್ಲಿದ್ದಾರೆ ಎನ್ನುವುದು ರಾಜಾಹುಲಿ ಯಡಿಯೂರಪ್ಪ ಗುಂಪಿನ ವರ್ತಮಾನ!
ಆದರೆ ಈಗ ಮೌನಮುರಿದಿರುವ ಕಾಗೇರಿ ಕಳೆದ ವಾರ ಪೂರ್ವನಿಗಧಿಯ ಕಾರ್ಯಕ್ರಮಗಳಲ್ಲಿ ತೊಡಗಿ ಬಿಡುವು ದೊರೆತಿರಲಿಲ್ಲ. ಈಗ ಕ್ಷೇತ್ರದಲ್ಲಿದ್ದೇನೆ ಎಂದಿದ್ದಾರೆ. ಸಚಿವ ಸಂಪುಟ ರಚನೆಯಾಗುವವರೆಗೆ ಸರ್ಕಾರದಲ್ಲಿ ಅಸ್ಥಿತ್ವದಲ್ಲಿರುವ ಹುದ್ದೆಗಳೆಂದರೆ ಅದು ಮುಖ್ಯಮಂತ್ರಿಗಳ ಸ್ಥಾನ ಮತ್ತು ವಿಧಾನಸಭಾ ಅಧ್ಯಕ್ಷರ ಹುದ್ದೆ. ಈ ಮಹತ್ವದ ಹುದ್ದೆಯಲ್ಲಿದ್ದಾಗ ಮುಖ್ಯಮಂತ್ರಿ ಎಂದು ಬಿಂಬಿತವಾಗಿದ್ದ ಹೆಗಡೆ ಎಲ್ಲೂ ಮಾತನಾಡಿರಲಿಲ್ಲ.
ಮುಖ್ಯಮಂತ್ರಿ ರೇಸ್, ತಮ್ಮ ಮುಂದಿನ ರಾಜಕಾರಣ ಯಾವ ವಿಷಯದ ಬಗ್ಗೂ ಯಾರಿಗೂ ಮಾತಿಗೆ ಸಿಗದ ವಿಶ್ವೇಶ್ವರ ಹೆಗಡೆಯವರ ಹೆಸರು ಚಾಲ್ತಿಗೆ ಬರಲು ಕಾರಣ ಅವರ ಹಿರಿತನ. ಬಿ.ಜೆ.ಪಿ.ಯ ಹಿರಿಯ ನಾಯಕರಾಗಿರುವ ಹೆಗಡೆ ಎರಡು ಬಾರಿ ಸಚಿವರು ಎರಡು ಬಾರಿ ವಿಧಾನಸಭಾ ಅಧ್ಯಕ್ಷರು ಆಗಿದ್ದವರು. ಈಗ ವಿಶ್ವೇಶ್ವರ ಹೆಗಡೆ ಸಚಿವರಾಗುತ್ತಾರೆ ಎನ್ನುವ ವದಂತಿಗಳಿಗೆ samajamukhi.net ಗೆ ಪ್ರತಿಕ್ರೀಯಿಸಿರುವ ಅವರು ಕೊಟ್ಟ ಉತ್ತರ ಚುಟುಕಾಗಿದೆ.
ವಿವಾದ, ರಗಳೆಗಳಿಂದ ದೂರ ನಿಲ್ಲುವ ವಿಶ್ವೇಶ್ವರ ಮುಂದಿನ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೂ ನಾನೇ ವಿಧಾನಸಭಾ ಅಧ್ಯಕ್ಷ ಎನ್ನುವ ಅವರ ಮಾತು ಈಗಿನ ಹೊಸ ಸಚಿವ ಸಂಪುಟದ ವರೆಗೋ ಅಥವಾ ಈ ಅವಧಿಯ ನಂತರ ಮುಂದಿನ ಸರ್ಕಾರ ಬರುವವರೆಗೂ ತಾಂತ್ರಿವಾಗಿ ಸ್ಫೀಕರ್ ಆಗಿ ಮುಂದುವರಿಯುವ ಸಾಂಪ್ರದಾಯಿಕ ಶಿಷ್ಟಾಚಾರದ ಬಗ್ಗೆ ಹೇಳಿದ ಮಾತೊ ಎನ್ನುವುದಕ್ಕೆ ಈ ವಾರವೇ ಉತ್ತರ ಸಿಗಲಿದೆ.
ನಾನು ಈಗಲೂ ವಿಧಾನಸಭಾ ಅಧ್ಯಕ್ಷ ಸಚಿವನಾಗುವ ಬಗ್ಗೆ ನಾನು ಮಾತನಾಡಲು ಬರುವುದಿಲ್ಲ. ಇದೇ ಪ್ರಶ್ನೆಯನ್ನು ನೀವು ನನಗೆ ಕೇಳುವ ಬದಲು ಸಂಬಂಧಿಸಿದವರಿಗೆ ಕೇಳುವುದು ಸೂಕ್ತ.- ವಿಶ್ವೇಶ್ವರ ಹೆಗಡೆ, ಕಾಗೇರಿ


