

ಕರೋನಾ ಅವಧಿಯಲ್ಲಿ ಸೇನಾನಿಗಳಾಗಿ ಕೆಲಸ ಮಾಡಿದವರನ್ನು ಸಮಾಜ ಎಂದೂ ಮರೆಯಬಾರದು ಎಂದು ಹೇಳಿರುವ ಜೆ.ಡಿ.ಎಸ್. ಮುಖಂಡ ಡಾ.ಶಶಿಭೂಷಣ ಹೆಗಡೆ ಸಾರ್ವಜನಿಕರು ಮತ್ತು ಸರ್ಕಾರ ಆಶಾ ಕಾರ್ಯಕರ್ತರನ್ನು ಗೌರವಿಸಿ,ಸಹಕಾರ ನೀಡದಿದ್ದರೆ ಆ ವ್ಯವಸ್ಥೆ ಹೃದಯಹೀನ ಎನ್ನಬೇಕಾಗುತ್ತದೆ ಎಂದರು. ಸಿದ್ಧಾಪುರ ರಾಘವೇಂದ್ರಮಠದಲ್ಲಿ ಉಪೇಂದ್ರ ಪೈ ಟ್ರಸ್ಟ್ ಆಯೋಜಿಸಿದ್ದ ಆಶಾ ಕಾರ್ಯಕರ್ತರಿಗೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ಜೀವದ ಹಂಗು ತೊರೆದು ಕೆಲಸ ಮಾಡಿದ ಕರೋನಾ ಸೇನಾನಿಗಳನ್ನು ಗೌರವಿಸದ ಸಮಾಜ,ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿಲ್ಲ. ಕರೋನಾ ಸೇನಾನಿಗಳಾಗಿದ್ದ ಮಹಿಳೆಯರು ಮಾತೃಹೃದಯದಿಂದ ಕೋವಿಡ್ ಸೇನಾನಿಗಳಾಗಿ ಕೆಲಸ ಮಾಡಿದ್ದನ್ನೂ ಯಾರೂ ಮರೆಯಬಾರದು ಎಂದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಮಾತನಾಡಿ ಕರೋನಾ ಸೇನಾನಿಗಳಿಗೆ ನಮ್ಮ ದೇಣಿಗೆ, ಕೊಡುಗೆ ಎನ್ನುವುದಕ್ಕಿಂತ ಈ ನೆರವು ಪ್ರಾಮಾಣಿಕ ಕೆಲಸಕ್ಕೆ ನಮ್ಮ ಕೃತಜ್ಞತೆ ಸಮರ್ಪಣೆ ಎಂದರು. ಬಿ.ಜೆ.ಪಿ. ಮುಖಂಡ ತಿಮ್ಮಪ್ಪ ಎಂ.ಕೆ. ಮಾತನಾಡಿದರು. ಸುಭಾಶ್ ನಾಯ್ಕ ಸ್ವಾಗತಿಸಿದರು. ಸಂಕಲ್ಪ ಸೇವಾ ಟ್ರಸ್ಟ್ ನ ಪಿ.ಬಿ.ಹೊಸೂರು ಉಪಸ್ಥಿತರಿದ್ದರು.





