

ತಮ್ಮಣ್ಣ ಬೀಗಾರರಿಗೆ ಅಡ್ವೈಸರ್ ಪ್ರಶಸ್ತಿ
ತಮ್ಮಣ್ಣ ಬೀಗಾರರ ‘ಫ್ರಾಗಿ ಮತ್ತು ಗೆಳೆಯರು’ ಮಕ್ಕಳ ಕಾದಂಬರಿಗೆ 2020 ನೇ ಸಾಲಿನ ಮಕ್ಕಳ ಸಾಹಿತ್ಯಕ್ಕಾಗಿ ರಾಜ್ಯಮಟ್ಟದಲ್ಲಿ ನೀಡುವ ಅಡ್ವೈಸರ್ ಪ್ರಶಸ್ತಿ ದೊರಕಿದೆ. ಮಂಡ್ಯ ಜಿಲ್ಲೆಯ ಅಡ್ವೈಸರ್ ಪತ್ರಿಕೆ ಸ್ಥಾಪಿಸಿರುವ ಈ ಪ್ರಶಸ್ತಿಯು 3000ರೂ ನಗದು ಹಾಗೂ ಪ್ರಶಸ್ತಿಪತ್ರಗಳನ್ನು ಒಳಗೊಂಡಿದೆ. ಬೀಗಾರರ ಇದೇ ಪುಸ್ತಕಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ‘ಪುಸ್ತಕ ಸೊಗಸು ಬಹುಮಾನ’ ಕೂಡಾ ಇತ್ತೀಚೆಗೆ ಬಂದಿದೆ. ಫ್ರಾಗಿ ಮತ್ತು ಗೆಳೆಯರು ಕಾದಂಬರಿಯು ‘ಇ’ ಬುಕ್ ಮತ್ತು ‘ಆಡಿಯೊ’ ಬುಕ್ ಆಗಿಕೂಡಾ ಓದುಗರ ಮೆಚ್ಚಿಗೆ ಗಳಿಸಿದೆ. ಬೀಗಾರರು ಮಕ್ಕಳಿಗಾಗಿಯೇ ಬರೆಯತ್ತಿದ್ದು ಅವರು ಕವನ ಸಂಕಲನಗಳು, ಕಥಾ ಸಂಕಲನಗಳು, ಲಲಿತ ಬರಹಗಳು, ಕಾದಂಬರಿಗಳು ಹಾಗೂ ಮಕ್ಕಳಿಗಾಗಿ ಚಿತ್ರ ಪುಸ್ತಕ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.
ಸಮಾನಮನಸ್ಕರ ಸಮಾಜಮುಖಿ ಕೆಲಸ… ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯಲ್ಲಿ ಮಹಾಮಳೆಯಿಂದಾಗಿ ಸಂಪೂರ್ಣ ಮನೆ ಹಾನಿ ಆದವರಿಗೆ ಹಾಗೂ ಭಾಗಶಃ ಹಾನಿ ಆದ ಕುಟುಂಬಕ್ಕೆ ಹಾರ್ಸಿಕಟ್ಟಾ ಗ್ರಾಪಂ ವ್ಯಾಪ್ತಿಯ ಸಮಾನ ಮನಸ್ಕರು ಸಂಪೂರ್ಣ ಮನೆ ಹಾನಿ ಆದ ಹಾಗೂ ಭಾಗಶಃ ಮನೆ ಆದ ಸಂತ್ರಸ್ಥರಿಗೆ 1ಲಕ್ಷದ 27ಸಾವಿರದ 500ನೂರು ಮೌಲ್ಯದಲ್ಲಿ ಜಿಂಕ್ ಶೀಟ್(ತಗಡು) ಹಾಗೂ ಟಾರ್ಪಾಲ್‍ಗಳನ್ನು ಅಘನಾಶಿನಿ ಸಾಂಬಾರು ಬೆಳೆಗಳ ಉತ್ಪಾದಕ ಕಂಪನಿಯ ಆವರಣದಲ್ಲಿ ಸಾಂಕೇತಿಕವಾಗಿ ವಿತರಿಸಿ ನಂತರ ಸಂತೃಸ್ಥರ ಮನೆಗೆ ತೆರಳಿ ಬುಧವಾರ ವಿತರಿಸಿದರು.
ಸಂಪೂರ್ಣ ಮನೆ ಹಾನಿ ಆದವರಿಗೆ ಜಿಂಕ್ ಶೀಟ್(ತಗಡು) ಹಾಗೂ ಭಾಗಶಃ ಮನೆ ಆದವರಿಗೆ ಟಾರ್ಪಾಲ್‍ಗಳನ್ನು ವಿತರಿಸಲಾಯಿತು.ಎಸ್.ಆರ್.ಹೆಗಡೆ ಕುಂಬಾರಕುಳಿ, ರವೀಂದ್ರ ಹೆಗಡೆ ಹಿರೇಕೈ, ಗ್ರಾಪಂ ಸದಸ್ಯ ಸಿದ್ದಾರ್ಥ ಗೌಡರ್ ಮುಠ್ಠಳ್ಳಿ, ಅನಂತ ಶಾನಭಾಗ ಹಾರ್ಸಿಕಟ್ಟಾ, ಡಾ.ರವಿ ಹೆಗಡೆ ಹೊಂಡಗಾಸಿಗೆ, ಡಿ.ಕೆ.ನಾಯ್ಕ ತೆಂಗಿನಮನೆ,ಶಶಿಧರ ಹೆಗಡೆ ಹುಕ್ಲಮಕ್ಕಿ, ರಮೇಶ ಹೆಗಡೆ ಹಾರ್ಸಿಮನೆ, ದರ್ಶನ ಹೆಗಡೆ ಹೊನ್ನೆಹದ್ದ, ಪ್ರಮೋದ ಕೊಡಿಯಾ ಹೊನ್ನೆಹದ್ದ, ಸತೀಶ ಮುಠ್ಠಳ್ಳಿ, ಮಂಜು ಹುಬ್ಬಗೈ ಇತರರಿದ್ದರು.

ಮಾಡಿದ ದುಷ್ಕರ್ಮಿಗಳನ್ನು ಬಂಧಿಸಲು ಕೋರಿ ಮಾಲಕ ರಾಜು ನಾಯ್ಕ ಪೊಲೀಸರಿಗೆ ದೂರಿದ್ದಾರೆ.


ಶಿವಣ್ಣ ನಟನೆಯ ‘ಬೈರಾಗಿ’ ಸಿನಿಮಾ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಹಿಟ್!
ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.

ವಿಜಯ್ ಮಿಲ್ಟನ್ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಸಿನಿಮಾ ಶೂಟಿಂಗ್ ಬಹುತೇಕ ಪೂರ್ಣವಾಗಿದೆ. ಸಿನಿಮಾದಲ್ಲಿ ಕೇವಲ ಎರಡು ಹಾಡುಗಳ ಶೂಟಿಂಗ್ ಬಾಕಿ ಉಳಿದಿವೆ.
‘ಟಗರು’ ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ ಎಂಬುದು ವಿಶೇಷ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.
ಸಿನಿಮಾದಲ್ಲಿ ಅಂಜಲಿ ನಾಯಕಿಯಾಗಿ ನಟಿಸಿದ್ದಾರೆ. ಬೈರಾಗಿಯಲ್ಲಿ ಪೃಥ್ವಿ ಅಂಬರ್, ಯಶೋ ಶಿವಕುಮಾರ್, ಉಮಾಶ್ರೀ ಮತ್ತು ಶಶಿಕುಮಾರ್ ಮುಂತಾದವರು ನಟಿಸಿದ್ದಾರೆ.
ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಉಳಿದ ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದ್ದು. ತಯಾರಕರು ಒಂದು ಬೃಹತ್ ಸೆಟ್ ಅನ್ನು ನಿರ್ಮಿಸಲು ಯೋಜಿಸಿದ್ದಾರೆ. “ನಾಯಕನ ಪರಿಚಯ ಮಾಡುವ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗುವುದು, ಮತ್ತು ಅದಕ್ಕಾಗಿ ಒಂದು ಸೆಟ್ ಅನ್ನು ನಿರ್ಮಿಸಲು ನಾವು ಯೋಜಿಸುತ್ತಿದ್ದೇವೆ. ಹಾಡಿನ ಚಿತ್ರೀಕರಣಕ್ಕಾಗಿ ನಾವು ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರು ಮತ್ತು ತಂತ್ರಜ್ಞರನ್ನು ಸೇರಿಸಲು ಯೋಜಿಸುತ್ತಿದ್ದೇವೆ. ಇದು ಎಲ್ಲಾ ಹವಾಮಾನ ಮತ್ತು ಕೋವಿಡ್ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಎಲ್ಲವೂ ಯೋಜನೆಯಂತೆ ನಡೆದರೆ, ನಾವು ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣವನ್ನು ಮುಗಿಸುತ್ತೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಶಿವರಾಜಕುಮಾರ್ ಭಜರಂಗಿ 2. ಬಿಡುಗಡೆಗಾಗಿ ಕಾಯುತ್ತಿದೆ. ಈ ಸಿನಿಮಾ ಬಿಡುಗಡೆಯ ನಂತರ ಶಿವಣ್ಣ ತನ್ನ 124 ನೇ ಚಿತ್ರದ ಸೆಟ್ ಗೆ ಸೇರಲಿದ್ದಾರೆ. ರಾಮ್ ಧೂಳಿಪುಡಿ ನಿರ್ದೇಶಿಸಲಿದ್ದಾರೆ. ಈ ಚಿತ್ರವು ಈ ತಿಂಗಳು ತೆರೆಗೆ ಬರಲಿದೆ. (kpc)


