

ಕಾರವಾರಕ್ಕೆ ಶಿರಸಿ ಯಿಂದ ಸಚಿವರ ಸಭೆಗೆ ಹೊರಟಿದ್ದ ಶಿರಸಿ ಲೋಕೋಪಯೋಗಿ ಇಲಾಖೆಯ ವಾಹನ ಇಂದು ಬೆಳಿಗ್ಗೆ ಅಂಕೋಲಾ ಬಳಿ ಅಪಘಾತಕ್ಕೀಡಾಗಿದ್ದು ವಾಹನದಲ್ಲಿದ್ದ ಸಿದ್ದಾಪುರ ಸಹಾಯಕ ಕಾರ್ಯನಿರ್ವಾಹ ಅಭಿಯಂತರ ಮಾರುತಿ ಮುದುಕಣ್ಣನವರ ಸ್ಥಳದಲ್ಲೇ ಮೃತರಾಗಿದ್ದಾರೆ. ಶಿರಿಸಿಯ ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಇನ್ನಿಬ್ಬರು ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕ್ಕೆ ಸಾಗಿಸಲಾಗಿದೆ.


ವಿ.ಪ. ಪ್ರತಿಪಕ್ಷದ ನಾಯಕ ಪಾಟೀಲ್ ಭೇಟಿ
ಸಿದ್ದಾಪುರ: ನೆರೆ ಸಂತ್ರಸ್ತರಿಗೆ ತತ್ತಕ್ಷಣ ನಿಗದಿತ ಪರಿಹಾರ ಹಣ ಕೊಡುವುದರ ಜೊತೆಗೆ ಶಾಶ್ವತವಾಗಿ ಮನೆ ಕಟ್ಟಿಕೊಳ್ಳಲು ನಿವೇಶನ ಒದಗಿಸುವಂತೆ ವಿಧಾನಪರಿಷತ್ ಪ್ರತಿ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ಆಗ್ರಹಿಸಿದರು.
ಅವರು ಇಂದು ಹಾರ್ಸಿಕಟ್ಟಾ ಗ್ರಾ.ಪಂ. ಹಳಿಯಾಳ ಶಾಲೆಯ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಆಗುತ್ತಿರುವ ತೊಂದರೆಗಳನ್ನು ವಿಚಾರಿಸಿದರು ಈ ಕುರಿತು ತಸಿಲ್ದಾರ್ ಪ್ರಸಾದ್ ಅವರಿಂದ ಮಾಹಿತಿ ಪಡೆದು ಅವರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಹೊಸ ಸರ್ಕಾರ ಈಗ ಹನಿಮೂನ್ ಮೂಡಿ ನಲ್ಲಿದೆ. ಅವರನ್ನು ಈಗ ಒಮ್ಮೆಲೆ ನಾವು ಟೀಕೆ ಮಾಡುವುದು ಸರಿಯಲ್ಲ
ಈ ಮೊದಲು ಮನೆಯಲ್ಲಿ ನೀರು ನುಗ್ಗಿದ ವರಿಗೆ ಹಾಗೂ ಬಾಧಿತ ಕುಟುಂಬದವರಿಗೆ ಹತ್ತು ಸಾವಿರ ರೂಪಾಯಿ ಕೊಡುತ್ತಿದ್ದರು ಈಗ ಕೇವಲ 3800 ರೂಪಾಯಿ ಕೊಡುತ್ತಿದ್ದಾರೆ
ಬಹಳಷ್ಟು ಜನರ ಪಾತ್ರೆ ಪಗಡೆಗಳು ಬಟ್ಟೆಬರೆಗಳು ತೇಲಿ ಕೊಂಡು ಹೋಗಿ ನಾಶವಾಗಿವೆ. ಆದ್ದರಿಂದ ಮುಖ್ಯಮಂತ್ರಿಗಳು ಈ ಹಿಂದೆ ನೀಡುತ್ತಿದ್ದಂತೆ ತಕ್ಷಣ ಹತ್ತು ಸಾವಿರ ರೂಪಾಯಿ ಸಂತ್ರಸ್ತರಿಗೆ ನೀಡುವಂತಾಗಬೇಕು
ನಾಗರಿಕ ಸರ್ಕಾರ ಜನಪರವಾದ ಸರ್ಕಾರ ವಾಗಿರಬೇಕು ಜನರ ಸಂಕಷ್ಟ ,ಕಷ್ಟಕ್ಕೆ ಸ್ಪಂದನೆ ಮಾಡಬೇಕು ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯವನ್ನು ಸರ್ಕಾರ ತ್ವರಿತವಾಗಿ ಮಾಡಬೇಕು ಸರಿಯಾದ ಪರಿಹಾರಧನ ವಿತರಣೆ ಮಾಡಬೇಕು
, ಗದ್ದೆ, ತೋಟ ಹಾನಿಯಾದವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು. ಅರಣ್ಯ ಅತಿಕ್ರಮಣದಲ್ಲಿದ್ದ ಮನೆಗಳಿಗೂ ಸೂಕ್ತ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನ್ಮನೆ, ಎಸ್.ಕೆ.ಭಾಗವತ ,ವಿ ಎನ್ ನಾಯ್ಕ, ವೆಂಕಟೇಶ್ ಹೊಸಬಾಳೆ, ಗಣೇಶ ಭಟ್ ಉಪಸ್ಥಿತರಿದ್ದರು.

