

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಮಲೆನಾಡು, ಕರಾವಳಿಯ ಕೆಲವು ಜಿಲ್ಲೆಗಳಲ್ಲಿ ಬಡವರಿಗೆ ಮನೆ ಕಟ್ಟಿಕೊಳ್ಳಲು ಅಡ್ಡಿಯಾಗಿದ್ದ ಸಮಸ್ಯೆಗೆ ರಿಯಾಯತಿ ದೊರೆತಿದೆ. ಈ ಬಗ್ಗೆ ಸಿದ್ಧಾಪುರ ಕ್ಯಾದಗಿಯಲ್ಲಿ ಕರೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಬಿ.ಜೆ.ಪಿ. ಪ್ರಮುಖರಾದ ಮಾರುತಿ ನಾಯ್ಕ ಕಾನಗೋಡು, ಆದರ್ಶ ಪೈ,ಮಹೇಶ್ ನಾಯ್ಕ ಸೇರಿದ ತಂಡ ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿ ಯೋಜನೆಯ ಫಲಾನುಭವಿಗಳು ಪಹಣಿ ಪತ್ರದ ಜೊತೆಗೆ ಪ್ರಮಾಣ ಪತ್ರ ನೀಡಿ ಮನೆಯ ಪ್ರದೇಶದ ವಾರಸುದಾರಿಕೆಯನ್ನು ನೋಂದಣಿ ಮಾಡಬೇಕಿತ್ತು ಆದರೆ ಈಗ ಹಳೆಯ ಮನೆ ಸಂಖ್ಯೆ ಮತ್ತು ತೆರಿಗೆ ಪಾವತಿಸಿದ ದಾಖಲೆಗಳ ಆಧಾರದಲ್ಲಿ ವಸತಿ ಯೋಜನೆಗಳ ಲಾಭ ಪಡೆಯಬಹುದು. ಇ ಸ್ವತ್ತಿನ ಈ ಅಡಚಣೆಯನ್ನು ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನಿಸಿದ ಫಲವಿದು ಎಂದರು.


ವೀಣಾ ಹಸ್ಲರ್,ರಾಜಾರಾಮ್ ನಾಯ್ಕ, ಚಂದ್ರಹಾಸ ಹಸ್ಲರ್,ಗಿರೀಶ್ ಶೇಟ್,ಕೃಷ್ಣಮೂರ್ತಿ ನಾಯ್ಕ ಐಸೂರು,ಎಸ್.ಎನ್.ಹೆಗಡೆ ಉಪಸ್ಥಿತರಿದ್ದರು.
ವಸತಿಯೋಜನೆಗಳ ಫಲಾನುಭವಿಗಳು ತಮ್ಮಲ್ಲಿಲ್ಲದ ಪಹಣಿ ಪತ್ರ,ಪಹಣಿಪತ್ರದ ಮೇಲೆ ಹಾಕುತಿದ್ದ ಬೋಜಾದಿಂದಾಗಿ ವಸತಿ ಯೋಜನೆಯ ಸಹಾಯಧನದಿಂದ ವಂಚಿತರಾಗುತಿದ್ದರು. ಬಹುತೇಕ ಕಡೆ ಸ್ವತ: ಪಹಣಿ ಪತ್ರ ಇಲ್ಲದಿರುವುದು ಇದ್ದವರು ದಾನಪತ್ರ ಕೊಡದಿರುವುದರಿಂದ ಅರ್ಹರೇ ಈ ಯೋಜನೆಯ ಲಾಭ ಪಡೆಯಲು ಆಗುತ್ತಿರಲಿಲ್ಲ. ಇಲಾಖೆಗಳ ಸಮನ್ವಯದಿಂದ ಸುಲಭವಾಗಿ ಫಲಾನುಭವಿಯಾಗುವ ಈ ಅವಕಾಶದಿಂದ ಅರ್ಹರಿಗೆ ಅನುಕೂಲವಾಗಲಿದೆ. -ಸುಬ್ರಮಣ್ಯ ಹೆಗಡೆ, ಗ್ರಾಮೀಣಾಭಿವೃದ್ಧಿ (pdo)ಅಧಿಕಾರಿ

ಪಹಣಿ ಪತ್ರದ ಕರಾರು,ಕಡ್ಡಾಯ ಒಪ್ಪಂದದ ರಗಳೆಗಳಿಂದ ನೈಜ ಅರ್ಹರಿಗೆ ವಸತಿಯೋಜನೆಯ ಸಹಾಯಧನದ ಪ್ರಯೋಜನ ದಕ್ಕುತ್ತಿರಲಿಲ್ಲ.ಈ ಬಗ್ಗೆ ಗ್ರಾಮೀಣ ಜನಪ್ರತಿನಿಧಿಗಳ ಬೇಡಿಕೆ ಮೇರೆಗೆ ವಿಧಾನಸಭಾ ಅಧ್ಯಕ್ಷರು ವಿಶೇಶ ಮುತುವರ್ಜಿ ವಹಿಸಿ ಈ ರಿಯಾಯತಿ ದೊರಕಿಸಿಕೊಟ್ಟಿದ್ದಾರೆ. ಅರಣ್ಯ ಇಲಾಖೆಯವರು ಕಾನೂನು-ಕಟ್ಟಲೆ ಎಂದು ತೊಂದರೆ ಕೊಡದಿದ್ದರೆ ಈ ರಿಯಾಯತಿಯಿಂದ ಬಡವರಿಗೆ ಅನುಕೂಲವಾಗಲಿದೆ.- ಕೃಷ್ಣಮೂರ್ತಿ ನಾಯ್ಕ ಐಸೂರು
ಇಸ್ವತ್ತಿನ ಅಡಚಣೆಯಿಂದಾಗಿ ನೈಜ ಬಡವರು ವಸತಿ ಯೋಜನೆಯ ಲಾಭ ಪಡೆಯದಂತಾಗಿತ್ತು.ಈಗ ಈ ಸಮಸ್ಯೆ ಬಗೆಹರಿಸುವ ಮೂಲಕ ಶಾಸಕ ಕಾಗೇರಿಯವರು ನಮ್ಮ ಕ್ಷೇತ್ರ,ಜಿಲ್ಲೆ ಸೇರಿ ಕೆಲವು ಜಿಲ್ಲೆಯ ಬಡವರಿಗೆ ಅನುಕೂಲ ಮಾಡಿದಂತಾಗಿದೆ.– ಮಾರುತಿ ನಾಯ್ಕ, ಕಾನಗೋಡು.
2013 ರಿಂದ ಬಡವರಿಗೆ ವಸತಿಯೋಜನೆ ಪಡೆಯಲು ಅಡ್ಡಿಯಾಗಿದ್ದ ಇ ಸ್ವತ್ತಿನ ರಗಳೆಗೆ ರಿಯಾಯತಿ ನೀಡಿರುವುದರಿಂದ ಅನೇಕರಿಗೆ ಅನುಕೂಲವಾಗಿದೆ.2013 ರ ಒಳಗೆ ಮನೆ ಸಂಖ್ಯೆ ಪಡೆದವರು, ತಾತ್ಕಾಲಿಕ ಮನೆ ತೆರಿಗೆ ಭರಣ ಮಾಡಿದವರು ಈಗ ವಸತಿ ಯೋಜನೆಗಳಸಹಾಯಧನ ಪಡೆಯಬಹುದು.- ಮಹೇಶ್ ನಾಯ್ಕ ಮತ್ತು ಆದರ್ಶ ಪೈ. (ಬಿಳಗಿ ಗ್ರಾ.ಪಂ. ಸದಸ್ಯರು)
ಹುಬ್ಬಳ್ಳಿ ಶಿರಸಿ ಮಾರ್ಗದಲ್ಲಿ ಅಪಘಾತ ಚಕ್ಕಡಿ ಗಾಡಿ ನೂಕಿದ ನೆಹರು!_______________________ಹುಬ್ಬಳ್ಳಿಯಿಂದ ಶಿರಸಿಗೆ ಸಂಚರಿಸುತ್ತಿದ್ದ ಜವಾಹರ್ ನೆಹರು ಪ್ರಯಾಣ ಮಾಡುತ್ತಿದ್ದ ಕಾರು ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಎತ್ತು ನೊಗ ತಪ್ಪಿಸಿಕೊಂಡು ಬಚಾವಾಗಿದೆ. ತಗ್ಗಿನಲ್ಲಿ ಇಳಿದ ಗಾಡಿಯನ್ನು ಪುನಃ ರಸ್ತೆಗೆ ತರಲು ಪ್ರಯಾಸ ಪಡಬೇಕಾಯಿತು. ಈ ಸಂದರ್ಭದಲ್ಲಿ ನೆಹರು ಕಾರು ಇಳಿದು ಎತ್ತಿನ ಗಾಡಿಯ ಚಕ್ರ ನೂಕಿದರು. ಗಾಡಿಗೆ ಪುನಃ ಎತ್ತು ಕಟ್ಟಿದ ಬಳಿಕ ನೆಹರು ಕಾರು ಪ್ರಯಾಣ ಮುಂದುವರಿಸಿತು.’ರಸ್ತೆ ಕೆಟ್ಟದಾಗಿದೆ. ನಿಧಾನಕ್ಕೆ ಹೋಗಿ ‘ ಎಂದು ಶಿರಸಿ ಹುಬ್ಬಳ್ಳಿ ರಸ್ತೆಯಲ್ಲಿ ಸಂಚರಿಸುವಾಗ ಚಾಲಕನಿಗೆ ನೆಹರು ಹೇಳಿದರು.12-2-1937ಶಿರಸಿ ವರದಿಇದೇ ಬರುವ ಆಗಸ್ಟ್ 15 ರವಿವಾರ ಸಾಯಂಕಾಲ ನಾಲ್ಕು ಗಂಟೆಗೆ kalave clubhouse ಬನ್ನಿhttps://www.clubhouse.com/club/kalave





_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
