

ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲಿದ್ದಾರೆ ಈ ಮಾಜಿ ಐಪಿಎಸ್ ಅಧಿಕಾರಿ
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿದೆ ಇದ್ದು ಚುನಾವಣೆ ತಯಾರಿ ಪ್ರಾರಂಭವಾಗಿದೆ.

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೊಂದೇ ವರ್ಷ ಬಾಕಿದೆ ಇದ್ದು ಚುನಾವಣೆ ತಯಾರಿ ಪ್ರಾರಂಭವಾಗಿದೆ.
ಚುನಾವಣೆ ಸನಿಹವಾಗುತ್ತಿರುವಂತೆಯೇ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲು ಮಾಜಿ ಐಪಿಎಸ್ ಅಧಿಕಾರಿಯೊಬ್ಬರು ಉತ್ಸುಕರಾಗಿದ್ದಾರೆ.



https://imasdk.googleapis.com/js/core/bridge3.474.0_en.html#goog_596088377
2020 ರ ಮಾರ್ಚ್ ನಲ್ಲಿ ಅವಧಿಗೂ ಮುನ್ನವೇ ಸೇವೆಗೆ ರಾಜೀನಾಮೆ ನೀಡಿದ್ದ ಅಮಿತಾಬ್ ಠಾಕೂರ್ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿಯ ಪತ್ನಿ ನೂತನ್ ಠಾಕೂರ್ ಈ ಸ್ಪರ್ಧೆ ತನ್ನ ಪತಿಯ ತತ್ವ-ಸಿದ್ಧಾಂತಗಳಿಗಾಗಿ ಎಂದು ಹೇಳಿದ್ದಾರೆ.
“ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ, ಅನುಚಿತ, ದಮನಕಾರಿ, ಕಿರುಕುಳ ಮತ್ತು ತಾರತಮ್ಯದಿಂದ ಕೂಡಿದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಆದ್ದರಿಂದ ಅಮಿತಾಬ್ ಅವರು ಆದಿತ್ಯನಾಥ್ ಸ್ಪರ್ಧಿಸುವ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ನೂತನ್ ಠಾಕೂರ್ ಹೇಳಿದ್ದಾರೆ.
“ಇದು ತತ್ವ-ಸಿದ್ಧಾಂತಗಳಿಗಾಗಿನ ಸ್ಪರ್ಧೆಯಾಗಿದ್ದು ಯೋಗಿ ಆದಿತ್ಯನಾಥ್ ಅವರ ತಪ್ಪು ನಿರ್ಣಯಗಳನ್ನು ಪ್ರತಿಭಟನೆ ನಡೆಸಲಿದ್ದೇವೆ” ಎಂದು ಹೇಳಿದ್ದಾರೆ. 2028 ರಲ್ಲಿ ನಿವೃತ್ತರಾಗಬೇಕಿದ್ದ ಅಮಿತಾಬ್ ಠಾಕೂರ್ ಗೆ 2021 ರ ಮಾರ್ಚ್ 23 ನಲ್ಲಿ ಕಡ್ಡಾಯ ನಿವೃತ್ತಿ ನೀಡಲಾಗಿತ್ತು. (kpc)
ಮೋದಿ ಭಾರತದ ಕಿಂಗ್ ಅಲ್ಲ’: ಪ್ರಧಾನಿಯ ಆರ್ಥಿಕ, ವಿದೇಶಿ ನೀತಿಗಳಿಗೆ ಸುಬ್ರಮಣಿಯನ್ ಸ್ವಾಮಿ ವಿರೋಧ
ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, ‘ಮೋದಿ ಭಾರತದ ರಾಜ ಅಲ್ಲ’ ಎಂದು ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ಮತ್ತು ವಿದೇಶಿ ನೀತಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, ‘ಮೋದಿ ಭಾರತದ ರಾಜ ಅಲ್ಲ’ ಎಂದು ಹೇಳಿದ್ದಾರೆ.
ತಮ್ಮ ಆಯ್ಕೆಯ ಸಚಿವ ಸ್ಥಾನ ನೀಡದಿರುವುದು ನಿಮ್ಮ ಅಸಮಾಧಾನಕ್ಕೆ ಕಾರಣ ಎಂದು ವಾದಿಸಿದ ಟ್ವಿಟರ್
ಬಳಕೆದಾರರೊಬ್ಬರಿಗೆ ಉತ್ತರಿಸಿದ ಸುಬ್ರಮಣಿಯನ್ ಸ್ವಾಮಿ, ನಾನು ಬೇರೆ ಕಾರಣಕ್ಕಾಗಿ “ಮೋದಿ ವಿರೋಧಿ” ಎಂದು ಹೇಳಿದ್ದಾರೆ.
“ನಾನು ಆರ್ಥಿಕತೆ ಮತ್ತು ವಿದೇಶಾಂಗ ನೀತಿಗಾಗಿ ಮೋದಿ ವಿರೋಧಿ ಮತ್ತು ಅದರ ಬಗ್ಗೆ ಯಾವುದೇ ಜವಾಬ್ದಾರಿಯುತರೊಂದಿಗೆ ಚರ್ಚಿಸಲು ನಾನು ಸಿದ್ಧ. ಪ್ರಜಾಪ್ರಭುತ್ವದ ಬಗ್ಗೆ ನೀವು ಕೇಳಿದ್ದೀರಾ? ಮೋದಿ ಭಾರತದ ರಾಜ ಅಲ್ಲ” ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ನಾನು ಸಮರ್ಥ ಮತ್ತು ಜವಾಬ್ದಾರಿಯುತವಾದ ಯಾರೊಂದಿಗೆ ಬೇಕಾದರೂ “ಚರ್ಚೆಗೆ” ಸಿದ್ಧ ಎಂದು ಸ್ವಾಮಿ ಹೇಳಿದ್ದಾರೆ.
ಭಾರತದ ವಿದೇಶಾಂಗ ನೀತಿಗಳ ಪರಿಣಾಮಕಾರಿತ್ವವನ್ನು ಸ್ವಾಮಿ ಪ್ರಶ್ನಿಸಿದ್ದು, ಇದು ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ನಿರ್ಧಾರಗಳಿಂದಾಗಿ “ಅವ್ಯವಸ್ಥೆ” ಯಾಗಿದೆ ಎಂದಿದ್ದಾರೆ. (kpc)
