ಕೆಟ್ಟದರ ವಿರುದ್ಧ ಒಳ್ಳೆಯದನ್ನು ಉತ್ತೇಜಿಸುವ ಗುರುತರ ಜವಾಬ್ಧಾರಿ ಕಲಾವಿದರ ಮೇಲಿದೆ. ಯುವಜನತೆ ಕಲೆಯ ಮೂಲಕ ಸ್ವತಂತ್ರ ಭಾರತದ ಶ್ರೀಮಂತಿಕೆಯನ್ನು ಹೆಚ್ಚಿಸುವ ಅವಕಾಶ ವಿಫುಲವಾಗಿದೆ. 30 ಕೋಟಿ ಕಲಾವಿದರಿರುವ ಭಾರತದ ಸಮಗ್ರತೆ, ಅಖಂಡತೆಗೆ ಕಲಾವಿದರ ಕೊಡುಗೆ ಅನುಪಮ ಎಂದಿರುವ ಯಕ್ಷಗಾನ ಕಲಾವಿದ ಶಿವಾನಂಧ ಹೆಗಡೆ ಕೆರೆಮನೆ ಕಲಾವಿದರ ಮೂಲಕ ಶುಭ ಸಂದೇಶ ಹರಡುವುದು ಸುಲಭ ಎಂದು ಪ್ರತಿಪಾದಿಸಿದರು.ಅವರು ಸಿದ್ಧಾಪುರದ ಭಾನ್ಕುಳಿಯ ಸನ್ಯಾಸಿಕೆರೆ ಆವರಣದಲ್ಲಿ ಸುಷಿರ ಸಂಗೀತ ಪರಿವಾರದ ಸಂಗೀತ ಸಂಚಿ 6 ನೇ ಸ್ವಾತಂತ್ರ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಊರಿನ ಅಭಿವೃದ್ಧಿಗೆ ಶ್ರಮಿಸಲು ಕರೆ- ಸಿದ್ದಾಪುರ: ತಾಲೂಕಿನ ಕಡಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ ಮಡಿವಾಳ ನೆರವೇರಿಸಿದರು. ನಂತರ ಮಾತನಾಡಿದ ಅವರು ಈ ಸಂಭ್ರಮಕ್ಕೆ ಮೇರಗು ನೀಡಬೇಕಾದ ಮಕ್ಕಳು ಇಲ್ಲದಿರುವುದು ಬೇಸರದ ಸಂಗತಿ.
ಕೋವಿಡ್ ಈ ವಿಜ್ರಂಭಣೆಯ ಆಚರಣೆಯನ್ನು ಕಸಿದುಕೊಂಡಿದೆ. ದ್ವೇಷ ಅಸೂಯೆ ಯನ್ನು ಬಿಟ್ಟು ದೇಶ, ಊರಿನ ಅಭಿವೃದ್ಧಿಯಡೆ ಎಲ್ಲರೂ ಗಮನ ಹರಿಸಬೇಕು ಎಂದರು.
ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮಡಿವಾಳ ಮಾತನಾಡಿ ಬ್ರಿಟಿಷ್ ರ ಆಳ್ವಿಕೆಯಿಂದ ದೇಶವನ್ನು ರಕ್ಷಿಸಿದ ದೇಶ ಭಕ್ತರನ್ನು ನೆನಸಿಕೊಳ್ಳುವ ದಿನ ಇಂದು. 75 ನೇ ವರ್ಷ ವಾದರಿಂದ ಈ ಸಂಭ್ರಮ ವರ್ಷ ವಿಡೀ ಆಚರಿಸಬೇಕು ಇಂದು ಕೋವಿಡ್ ಸಂಕಷ್ಟದ ಪರಿಸ್ಥಿತಿಯಿಂದ . ದೇಶದ ಆರ್ಥಿಕ ಸ್ಥಿತಿ ಕಠಿಣ ವಾಗಿದೆ. ನಾವೆಲ್ಲರೂ ದೇಶವನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯಲು ಶ್ರಮಿಸಬೇಕು ಎಂದರು.
ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉಮೇಶ ನಾಯ್ಕ ಮಾತನಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹನಿಯರನ್ನು ನೆನಸಿಕೊಂಡು ಇಂದಿನ ಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಗ್ರಾಮ್ ಪಂಚಾಯತ್ ಸದಸ್ಯರಾದ ಹೇಮಾವತಿ ಜಿ ನಾಯ್ಕ, ಎಸ್.ಡಿ.ಎಂ. ಸಿ ಸದಸ್ಯ ರಾದ ಎಚ್. ಟಿ ವಾಸು, ಗಣಪತಿ ನಾಯ್ಕ, ದಯಾನಂದ ನಾಯ್ಕ, ಶಿಕ್ಷಕಿಯರಾದ ಶಾಂತಲಾ ಗಾಂವ್ಕರ್, ಮಂಜುಳಾ ಪಟಗಾರ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಡಿಗೆ ಸಿಬ್ಬಂದಿ ಗಳು ಹಾಗೂ ಪಾಲಕ- ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಮಾಯಾ ಭಟ್ ಸ್ವಾಗತಿಸಿದರು. ಶಿಕ್ಷಕ ಕೇಶವ ನಾಯ್ಕ ವಂದಿಸಿದರು.