

ಬಿ.ಜೆ.ಪಿ. ಜನಾಶೀರ್ವಾದ ಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿ ಸಿರುವ ಕೆ.ಪಿ.ಸಿ.ಸಿ. ವಕ್ತಾರ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ರಾಜ್ಯದ ಜನತೆ ಮಳೆ-ಪ್ರವಾಹದಿಂದ ಬಳಲಿದ್ದಾರೆ.ಕಳೆದ ವರ್ಷದ ಪ್ರವಾಹ ಪೀಡಿತರಿಗೇ ಸರ್ಕಾರ ಪರಿಹಾರ ನೀಡಿಲ್ಲ. ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದ ಬಿ.ಜೆ.ಪಿ. ಜನರ ತೊಂದರೆಗಳಿಗೆ ಸ್ಫಂದಿಸದೆ ಮುಖ್ಯಮಂತ್ರಿ ಬದಲಿಸುವುದು, ಜನರ ಸಂಕಷ್ಟದ ಕಾಲದಲ್ಲಿ ಜನಾಶೀರ್ವಾದ ಯಾತ್ರೆ ಮಾಡುವುದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರೀಯೆ ನೀಡಿದ ಅವರು ಕರಾವಳಿ ಮಲೆನಾಡಿನಲ್ಲಿ ಪರೇಶ್ ಮೇಸ್ತ ಘಟನೆ ಬಂಡವಾಳ ಮಾಡಿಕೊಂಡು ಜನಪ್ರತಿನಿಧಿಗಳಾದ ಬಿ.ಜೆ.ಪಿ. ನಾಯಕರಿಗೆ ಪರೇಶ್ ಮೇಸ್ತ ಹೆಸರು ನೆನಪಿದೆಯೆ? ಹಿಂದುತ್ವದ ಹೆಸರಲ್ಲಿ ರಾಜಕೀಯ ಮಾಡುವ ಅನಂತಕುಮಾರ ಹೆಗಡೆ ಎಲ್ಲಿದ್ದಾರೆ?
ಬಹುತೇಕ ಕಡೆ ಜನಪ್ರತಿನಿಧಿಗಳಿದ್ದೂ ಇಲ್ಲದ ಸ್ಥಿತಿ, ಜನಸಾಮಾನ್ಯರ ತೊಂದರೆಗಳಿಗೆ ಸ್ಫಂದಿಸಬೇಕಾದ ಸರ್ಕಾರದ ದುಸ್ಥಿತಿ. ಈ ವರ್ತಮಾನದಲ್ಲಿ ಜನಾಶೀರ್ವಾದ ಯಾತ್ರೆ ಮೂಲಕ ಜನರ ದಿಕ್ಕು ತಪ್ಪಿಸುವ ಬದಲು ಜನಪರವಾಗಿ ಕೆಲಸ ಮಾಡಬೇಕು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ದಿನವೇ ಬಿಜೆಪಿ ಅವನತಿ ಪ್ರಾರಂಭವಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಬಿ.ಜೆ.ಪಿ. ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ಧವಾಗುತ್ತಿದೆ.
ಜನರ ಬವಣೆ ಕೇಳದ ಸರ್ಕಾರ ಹೆಚ್ಚುದಿನ ಉಳಿಯುವುದೂ ಇಲ್ಲ. ಇಂಥ ಸರ್ಕಾರ, ಜನಪ್ರತಿನಿಧಿಗಳನ್ನು ಜನ ಒಪ್ಪುವುದೂ ಇಲ್ಲ ಎಂದರು. 90 ವರ್ಷದ ಕಾಗೋಡು ತಿಮ್ಮಪ್ಪ ಈಗಲೂ ಚಟುವಟಿಕೆಯಿಂದ ಇದ್ದಾರೆ. ಅವರ ಮಾರ್ಗದರ್ಶನದಲ್ಲೇ ನಾವೆಲ್ಲಾ ಕೆಲಸಮಾಡುತ್ತೇವೆ ಎಂದು ತಿಳಿಸಿದ ಬೇಳೂರು ಶಿವಮೊಗ್ಗದಲ್ಲಿ ಈಗ ಒಬ್ಬರು ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ.ಯ ಒಬ್ಬ ಶಾಸಕರೂ ಇಲ್ಲದಂತೆ ಕಾಂಗ್ರೆಸ್ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.






