ಬ್ರಿಟೀಷ್ ಗುಲಾಮಿತನದ ಮಾನಸಿಕತೆಗೆ ವಿರುದ್ಧವಾಗಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವ ಜನರು ಸ್ವಾರ್ಥ ಹಿತಾಸಕ್ತಿಯವರು ಎಂದು ದೂಷಿಸಿರುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶಿಕ್ಷಕರು ಈ ಬಗ್ಗೆ ಸ್ಪಷ್ಟತೆ ಹೊಂದಲು ಸೂಚಿಸಿದ್ದಾರೆ.
ಶಿರಸಿ-ಸಿದ್ಧಾಪುರಗಳಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ಪೀಕರ್ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವವರ ಮೇಲೆ ಹರಿಹಾಯ್ದರು.
ಈ ಎನ್.ಇ.ಪಿ. ವಿಶಾಲ ದೃಷ್ಟಿಕೋನದಲ್ಲಿ ಭಾರತೀಯತೆಯನ್ನು ಗಟ್ಟಿಗೊಳಿಸುತ್ತದೆ. ಇದನ್ನು ವಿರೋಧಿಸುವವರು ಸ್ವಾರ್ಥ ಹಿತಾಸಕ್ತಿಯವರು ಈ ಬಗ್ಗೆ ಸ್ಪಷ್ಟತೆ ಅಗತ್ಯ ಶಿಕ್ಷಕರು ಹೊಸ ಶಿಕ್ಷಣ ನೀತಿಯನ್ನು ಅರ್ಥಮಾಡಿಕೊಂಡು ಸ್ಪಷ್ಟತೆಯ ಮೂಲಕ ಜನಾಭಿಪ್ರಾಯ ರೂಪಿಸಲು ಕರೆ ನೀಡಿದರು.
ಸಾಧಕ ಶಿಕ್ಷಕರು, ನಿವೃತ್ತರನ್ನು ಸನ್ಮಾನಿಸಿ ಮಾತನಾಡಿದ ಸ್ಪೀಕರ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವವರನ್ನು ಸ್ವಾರ್ಥದ ಹಿತಾಸಕ್ತಿಯವರು ಎಂದು ಕರೆದಿದ್ದು ವಿವಾದದ ವಿಷಯವಾದಂತಾಗಿದೆ. ಸನಾತನತೆಯ ಹೆಸರಿನಲ್ಲಿ ಸದಾ ವೈದಿಕತೆ, ಮನುವಾದ ಸಮರ್ಥಿಸುವ ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾ ಧ್ಯಕ್ಷರಾದರೂ ಮತಾಂಧತೆಯ ಮೂರನೇ ದರ್ಜೆಯ ಕೋಮುವಾದಿ ಮನಸ್ಥಿತಿಯಲ್ಲಿರುವುದು ಅವರ ಪರಿವಾರದ ಕಪಟತನಕ್ಕೆ ಸಾಕ್ಷಿ ಎನ್ನುವ ಆಕ್ಷೇಪ ವ್ಯಕ್ತವಾಗಿದೆ.
ಸನಾತನತೆ, ಭಾರತೀಯತೆಯ ಸೋಗಿನಲ್ಲಿ ಭಾರತೀಯ ಬಹುಸಂಖ್ಯಾತರಿಗೆ ವಿದ್ಯೆ, ಅವಕಾಶ, ಅನುಕೂಲ ವಂಚಿಸಿದ ಹೀನ ವಲಸೆ ಮನಸ್ಥಿತಿಯ ಹೆಗಡೆ ರಾಜ್ಯದ ಸ್ಫೀಕರ್ ಆಗಿರುವುದು ಈ ರಾಜ್ಯದ ದುರಂತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು. ಶಿಕ್ಷಕರ ದಿನಾಚರಣೆಯಲ್ಲಿ ಮತಾಂಧತೆ, ಕೋಮುವಾದವನ್ನು ಸಮರ್ಥಿಸಿ ಸಾಹಿತಿಗಳನ್ನು ಟೀಕಿಸಿರುವ ಹೆಗಡೆ ವಿಧಾನಸಭಾ ಅಧ್ಯಕ್ಷರಾಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಕೂಡಾ ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.