ಅನುಭವ ಮಂಟಪದಲಿವಚನ ಸುಧೆ ಹರಿಸಿದಕೋಗಿಲೆಯ ಹತ್ಯೆಯಾಯಿತು
ಶಾಂತಿ ಅಹಿಂಸೆಯಪರಿಮಳ ಪಸರಿಸಿದಪಾರಿವಾಳವೂ ಹತ್ಯೆಯಾಯಿತು
ಜಾತಿ ಧರ್ಮ ಧಿಕ್ಕರಿಸಿಪ್ರೀತಿಯ ಹುಡಿ ಹರಡಿಸಿದಆ ಪತಂಗವೂ ಹತ್ಯೆಯಾಯಿತು
ಮೌಢ್ಯ ವಿರೋಧಿಗಾಗಿನಿತ್ಯ ಕೂಗಿ ಎಬ್ಬಿಸುತ್ತಿದ್ದಕೋಳಿಯೂ ಹತ್ಯೆಯಾಯಿತು
ಹಾಲು-ಹಾಲಾಹಲವಶೋಧಿಸಿ ಸತ್ಯ ಉಲಿವಹಾಲಕ್ಕಿಯೂ ಹತ್ಯೆಯಾಯಿತು
ಗರಿಕೆಯ ಎಳೆತಂದುವೈಚಾರಿಕ ಗೂಡು ಕಟ್ಟಿದ#ಗುಬ್ಬಿಯೂ ಹತ್ಯೆಯಾಯಿತು
ಹದ್ದುಮೀರಿ ಅರಿವು ಬಿತ್ತಿದವರ ಹತ್ಯೆಯಾಗಿದೆ ಹದ್ದಿನ ಸಾಮ್ರಾಜ್ಯದಲಿ. -ಕೆ.ಬಿ.ವೀರಲಿಂಗನಗೌಡ್ರ.
ಸತ್ಯ-
ಊಟ ಬಿಡಬೇಕೆಂದಿದ್ದೆ
ಹಸಿವು ಬಿಡಲಿಲ್ಲ
ನಿದ್ದೆ ಬಿಡಬೇಕೆಂದಿದ್ದೆ
ಕನಸು ಬಿಡಲಿಲ್ಲ
ಜೀವ ಬಿಡಬೇಕೆಂದಿದ್ದೆ
ಬದುಕು ಬಿಡಲಿಲ್ಲ
ಮಾತು ಬಿಡಬೇಕೆಂದಿದ್ದೆ
ಮೌನ ಬಿಡಲಿಲ್ಲ
ಯಾವುದೂ ಬಿಡಲಾರದೆ
ಕೊನೆಗೆ ಗಡ್ಡ ಬಿಟ್ಟಿದ್ದೇನೆ,
ಯಾರಿಗೂ ಈ ಸತ್ಯ ಗೊತ್ತಿಲ್ಲ!
( ಹಳೆಯದು. ಚಿತ್ರದ ಜಾಗದಲ್ಲಿ ಯಾವುದೇ ಗಡ್ಡದ ಫೋಟೋ ಲಗತ್ತಿಸಬಹುದು.) -ಗಣೇಶ್ ಹೊಸ್ಮನೆ.